ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೋವಿಡ್ ಗೆದ್ದವರ ಮಾತು; ಸ್ವಯಂ ಪ್ರಯೋಗ ಸಲ್ಲದು

Last Updated 30 ಏಪ್ರಿಲ್ 2021, 15:41 IST
ಅಕ್ಷರ ಗಾತ್ರ

ಕೋವಿಡ್-19 ಎರಡನೇ ಅಲೆ ವ್ಯಾಪಕವಾಗಲು ಜನ ಸಮುದಾಯದ ನಿರ್ಲಕ್ಷ ಕಾರಣ. ಸ್ವಯಂ ನಿರ್ಬಂಧ ಹೇರಿಕೊಂಡು ಮುಂಜಾಗ್ರತೆ ವಹಿಸಿದರೆ ಕೋವಿಡ್‌ ನಿಯಂತ್ರಿಸಬಹುದು. ನೆಗಡಿ, ಕೆಮ್ಮು ಬಂದಾಗ ತಕ್ಷಣ ಸರ್ಕಾರಿ ಆಸ್ಪತ್ರೆಯಲ್ಲಿ ಪರೀಕ್ಷೆ ಮಾಡಿಸಿಕೊಂಡೆ.ಪಾಸಿಟಿವ್ ಇರುವುದು ಖಚಿತವಾಯಿತು. ವೈದ್ಯರು ಮಾತ್ರೆ ನೀಡಿ, ಸಲಹೆ ಸೂಚನೆ ನೀಡಿದರು.

ಶಿಕ್ಷಕಿಯಾದ ಕಾರಣ 14 ದಿನ ಮನೆಯಲ್ಲಿ ಕ್ವಾರಂಟೈನ್ ಆಗಿದ್ದೆ. ನಾಲ್ಕೈದು ದಿನಗಳಲ್ಲಿ ಆರೋಗ್ಯ ಸಹಜ ಸ್ಥಿತಿಗೆ ಬಂತು. ಆಸ್ಪತ್ರೆಯವರು ಪ್ರತಿ ನಿತ್ಯ ಆತ್ಮವಿಶ್ವಾಸತುಂಬಿದರು. ಆಹಾರದಲ್ಲಿ ಹಣ್ಣು ಮತ್ತು ತರಕಾರಿಯನ್ನು ಹೆಚ್ಚು ಸೇವಿಸುವಂತೆ ಸೂಚನೆನೀಡಿದರು.

ಹುಳಿ ಹಣ್ಣುಗಳ ಷರಬತ್ತು ಮತ್ತು ಹೆಚ್ಚು ಉಷ್ಣಾಂಶ ಇರುವ ಪದಾರ್ಥಗಳನ್ನುಬಳಸುತ್ತಿದ್ದಂತೆ ಸೋಂಕು ಇಲ್ಲವಾಯಿತು. ಆದರೂ, ಯಾರ ಸಂಪರ್ಕಕ್ಕೂ ಸಿಗದೆ, ನಿಗದಿತಸಮಯದವರೆಗೆ ಅಂತರ ಕಾಯ್ದುಕೊಂಡು, ಮಾಸ್ಕ್ ಬಳಸುತ್ತ, ಸ್ಯಾನಿಟೈಸರ್ ಉಪಯೋಗ ಪಡೆದರೆ,ಕೊರೊನಾ ವೈರಾಣು ಇತರರಿಗೆ ವ್ಯಾಪಿಸುವುದನ್ನು ತಡೆಯಬಹುದು.

ಈಗ ರೋಗ ಲಕ್ಷಣ ಎಂತದೇ ಇರಲಿ, ಆಸ್ಪತ್ರೆಗೆ ತೆರಳಿ ಪರೀಕ್ಷೆ ಮಾಡಿಸುವುದು ಉತ್ತಮ.ಮಕ್ಕಳು, ವೃದ್ಧರು ಜನ ಸಂಪರ್ಕದಿಂದ ದೂರ ಇದ್ದು, ಸರಳ ವ್ಯಾಯಾಮ, ಯೋಗ ಮತ್ತುಚಟುವಟಿಕೆಯ ಕೆಲಸಗಳಲ್ಲಿ ತೊಡಗಿದರೆ ಕೊರೊನಾ ಬಾಧಿಸದು. ಮನೆಯಲ್ಲಿ ವೈದ್ಯರ ಸಲಹೆಇಲ್ಲದೆ ಪ್ರಯೋಗಕ್ಕೆ ಮುಂದಾಗಬೇಡಿ.

– ಆಸಿಯಮ್ಮ, ಯಳಂದೂರು

ನಿರೂಪಣೆ: ನಾ.ಮಂಜುನಾಥಸ್ವಾಮಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT