ಭಾನುವಾರ, 26 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹನೂರು | ಕೈಕೊಟ್ಟ ಮತಯಂತ್ರ: ಕಾದು ಕುಳಿತ ಮತದಾರರು

Published 27 ಏಪ್ರಿಲ್ 2024, 6:08 IST
Last Updated 27 ಏಪ್ರಿಲ್ 2024, 6:08 IST
ಅಕ್ಷರ ಗಾತ್ರ

ಹನೂರು: ತಾಲ್ಲೂಕಿನ ಇಂಡಿಗನತ್ತ, ಕೊಂಗರಹಳ್ಳಿ ಮತಗಟ್ಟೆ ಹೊರತುಪಡಿಸಿ ಉಳಿದ ಕಡೆ ಶಾಂತಿಯುತ ಮತದಾನವಾಗಿದೆ.

ಬೆಳಿಗ್ಗೆ 7 ಗಂಟೆಗೆ ಆರಂಭವಾದ ಮತದಾನ ನೀರಸವಾಗಿ ಸಾಗಿತು. ಮಧ್ಯಾಹ್ನವಾಗುತ್ತಿದ್ದಂತೆ ಮತಗಟ್ಟೆಗೆ ಬರುವವರ ಸಂಖ್ಯೆ ಕಡಿಮೆಯಾಯಿತು. ಆದರೆ ಕೆಲವು ಕಡೆ ಸುಡು ಬಿಸಿಲನ್ನೂ ಲೆಕ್ಕಿಸದೆ ಮತಗಟ್ಟೆಗೆ ಬಂದು ಮತ ಚಲಾಯಿಸಿದರು. ಕೆಲವೆಡೆ ಸಂಜೆ ವೇಳೆ ಬಿರುಸಿನ ಮತದಾನವಾಗಿದೆ. ಕೆರೆದಿಂಬ, ಗೊಂಬೆಗಲ್ಲು ಹಾಡಿ ಜನರಿಗೆ ಮತದಾನ ಮಾಡಲು ವಾಹನ ವ್ಯವಸ್ಥೆ ಕಲ್ಪಿಸಲಾಗಿತ್ತು.

ಕ್ಷೇತ್ರ ವ್ಯಾಪ್ತಿಯ ಕೊಂಗರಹಳ್ಳಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮತಗಟ್ಟೆ ಸಂಖ್ಯೆ 51 ರ ಮತ ಯಂತ್ರ ಅರ್ಧಕ್ಕೆ ಕೆಟ್ಟು ನಿಂತ ಪರಿಣಾಮ ಮತದಾರರು ತಮ್ಮ ಹಕ್ಕು ಚಲಾಯಿಸುವ ಸಲುವಾಗಿ ಕಾದು ಕೂರುವ ಸ್ಥಿತಿ ನಿರ್ಮಾಣವಾಯಿತು.

ಮತದಾರರು ಅತ್ಯಂತ ಹುರುಪಿನಿಂದ ಮತ ಚಲಾಯಿಸಲು ಮತ ಕೇಂದ್ರಕ್ಕೆ ಬಂದಿದ್ದರು. ಮುಂಜಾನೆ 7 ಗಂಟೆಗೆ ಪ್ರಾರಂಭವಾದ ಮತದಾನ ಸುಮಾರು 10 ಗಂಟೆವರೆಗೆ ಯಶಸ್ವಿಯಾಗಿ ನಡೆಯಿತು. ನಂತರ ಸುಮಾರು ಒಂದು ಗಂಟೆಗಳ ಕಾಲ ಮತಯಂತ್ರ ಕೆಟ್ಟು ನಿಂತು ಸರಿ ಹೋಗದ ಕಾರಣ ಸ್ಥಳೀಯ ಮತದಾರರು ಕಾದು ಸಾಕಾಗಿ ಶೀಘ್ರದಲ್ಲೇ ಸರಿಪಡಿಸುವಂತೆ ಒತ್ತಾಯಿಸಿದರು ನಂತರ ಸಂಬಂಧ ಪಟ್ಟ ಇಲಾಖೆ ಅಧಿಕಾರಿಗಳು ಬದಲಿ ಮತಯಂತ್ರವನ್ನು ತಂದು ಅಳವಡಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT