ಭಾನುವಾರ, 16 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಾಮರಾಜನಗರ: ಮಾವಿನ ಹಣ್ಣು ಕಿತ್ತು ಸವಿದ ಕಾಡಾನೆ!

Published 3 ಜೂನ್ 2024, 7:59 IST
Last Updated 3 ಜೂನ್ 2024, 7:59 IST
ಅಕ್ಷರ ಗಾತ್ರ

ಚಾಮರಾಜನಗರ: ತಾಲ್ಲೂಕಿನ ಗಡಿ ಭಾಗ ತಮಿಳುನಾಡಿನ ತಾಳವಾಡಿಯಲ್ಲಿ ರೈತರೊಬ್ಬರ ಜಮೀನಿಗೆ ರಾತ್ರಿ ನುಗ್ಗಿದ ಕಾಡಾನೆಯೊಂದು ಮಾವಿನ ಮರದಿಂದ ಹಣ್ಣುಗಳನ್ನು ಕಿತ್ತು ಸೇವಿಸಿದೆ.

ತಾಳವಾಡಿಯ ನಟರಾಜು ಎಂಬುವವರ ತೋಟಕ್ಕೆ ಎರಡು ದಿನಗಳ ಹಿಂದೆ ರಾತ್ರಿ ಕಾಡಾನೆ ಬಂದಿದೆ. ಮಾವಿನ ಮರದ ರೆಂಬೆಗೆ ಕಾಲಿಟ್ಟು ಸೊಂಡಿಲಿನಿಂದ ಮಾವಿನ ಹಣ್ಣಿನ ಗೊಂಚಲನ್ನು ಕಿತ್ತು ಕೆಳಗಡೆ ಹಾಕಿದೆ. ನಂತರ ಹಣ್ಣುಗಳನ್ನು ಸೇವಿಸಿದೆ.

ನಟರಾಜು ಮನೆಯವರೇ ಈ ದೃಶ್ಯವನ್ನು ಸೆರೆ ಹಿಡಿದಿದ್ದಾರೆ. ವಿಡಿಯೊ ತುಣುಕು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT