ಕೊಳ್ಳೇಗಾಲ: ಇಲ್ಲಿನ ಡಾ.ಬಿ.ಆರ್.ಅಂಬೇಡ್ಕರ್ ಸ್ಮಾರಕ ಸಂಘದ ನೂತನ ಅಧ್ಯಕ್ಷರಾಗಿ ಆಯ್ಕೆಯಾದ ಎಸ್.ಆನಂದಮೂರ್ತಿ ನಗರದ ಅಂಬೇಡ್ಕರ್ ಪ್ರತಿಮೆಗೆ ಮಾಲಾರ್ಪಣೆ ಮಾಡಿದರು.

ಬಳಿಕ ಪ್ರವಾಸಿ ಮಂದಿರದಲ್ಲಿ ಸಭೆ ನಡೆಸಿ ಮಾತನಾಡಿದ ಅವರು, ‘ನನ್ನ ಗೆಲುವಿಗೆ ಭೀಮನಗರದ ಎಲ್ಲಾ ಹಿರಿಯರು, ಕಿರಿಯರ ಸಹಕಾರಕ್ಕೆ ಧನ್ಯವಾದಗಳು’ ಎಂದರು.

ಭೀಮನಗರದ ಯಜಮಾನರು ಹಾಗೂ ಮುಖಂಡರ ಸಹಕಾರ ಬೇಕಿದೆ. ನೆನೆಗುದಿಗೆ ಬಿದ್ದಿರುವ ಅಂಬೇಡ್ಕರ್ ಭವನ ಉದ್ಘಾಟನೆ ಮಾಡುವವರೆಗೂ ನಾನು ಯಾವುದೇ ಹಾರವಾಗಲಿ ಹಾಗೂ ಸನ್ಮಾನವಾಗಲಿ ಸ್ವೀಕರಿಸುವುದಿಲ್ಲ.

ಇಂದಿನ ಸಭೆಯಲ್ಲಿ ಭೀಮನಗರದ ಮುಖಂಡರು ನೀಡಿದ್ದ ಸಲಹೆಗಳನ್ನು ಚರ್ಚಿಸಿ ಸೂಕ್ತ ಕ್ರಮ ವಹಿಸುವುದಾಗಿ ಭರವಸೆ ನೀಡಿದರು.

ಈ ಸಂದರ್ಭದಲ್ಲಿ ನಗರಸಭೆ ಸದಸ್ಯ ಮಂಜುನಾಥ್, ಡಾ.ಬಿ.ಆರ್.ಅಂಬೇಡ್ಕರ್ ಸ್ಮಾರಕ ಸಂಘದ ಉಪಾಧ್ಯಕ್ಷ ಕಿರಣ್, ಕಾರ್ಯದರ್ಶಿ ಪಾಪಣ್ಣ, ಸಹ ಕಾರ್ಯದರ್ಶಿ ಶಶಿಧರ, ಖಂಜಾಚಿ ರಾಜೇಶ್, ಮುಖಂಡ ನಟರಾಜು, ಲಿಂಗರಾಜು, ಕೆ.ನಾಗರಾಜು, ರಮೇಶ್, ಕೆ.ಕೆ.ಮೂರ್ತಿ, ಸಿದ್ದಪ್ಪಾಜಿ, ಮಣಿ, ದಿಲೀಪ್ ಸಿದ್ದಪ್ಪಾಜಿ, ಜಗದೀಶ್, ರಾಜಶೇಖರ್ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.