ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗುಂಡ್ಲುಪೇಟೆ: ಸಿಡಿಮದ್ದು ಜಗಿದು ಕರುವಿನ ಬಾಯಿಗೆ ಗಾಯ

Published 17 ಫೆಬ್ರುವರಿ 2024, 14:17 IST
Last Updated 17 ಫೆಬ್ರುವರಿ 2024, 14:17 IST
ಅಕ್ಷರ ಗಾತ್ರ

ಗುಂಡ್ಲುಪೇಟೆ: ಹಂದಿ ಸಾಯಿಸಲು ಇರಿಸಿದ್ದ ಸಿಡಿಮದ್ದು ಜಗಿದು ಕರುವಿನ ಮುಖಕ್ಕೆ ಗಂಭೀರ ಗಾಯಗಳಾಗಿರುವ ಘಟನೆ ತಾಲ್ಲೂಕಿನ ಮಾಲಾಪುರ ಗ್ರಾಮದಲ್ಲಿ ನಡೆದಿದೆ.

ಗ್ರಾಮದ ಮಹದೇವಸ್ವಾಮಿ ಎಂಬ ರೈತ ತಮ್ಮ ಜಮೀನಿನಲ್ಲಿ ಕರುವನ್ನು ಮೇಯಿಸುತ್ತಿದ್ದ ವೇಳೆ ಕರು ಆಹಾರ ಎಂದು ಭಾವಿಸಿ ಸಿಡಿಮದ್ದು ಜಗಿದಿದೆ. ಈ ವೇಳೆ ಸ್ಫೋಟಗೊಂಡು ಮುಖಕ್ಕೆ ಗಂಭೀರ ಗಾಯಗಳಾಗಿವೆ. ಸಿಡಿಮದ್ದು ಇರಿಸಿದ್ದ ಚಿಕ್ಕಎಲಚಟ್ಟಿ ಗ್ರಾಮದ ಜಬ್ಬರ್, ಪುಟ್ಟಯ್ಯ, ಅಣ್ಣೂರಿಕೇರಿ ಗ್ರಾಮದ ಗೋವಿಂದಶೆಟ್ಟಿ ಎಂಬ ಆರೋಪಿಗಳನ್ನು ರೈತರು ಹಿಡಿದು ಪೊಲೀಸರ ವಶಕ್ಕೆ ನೀಡಿದ್ದಾರೆ.

ತೆರಕಣಾಂಬಿ ಪೊಲೀಸರು ಆರೋಪಿಗಳನ್ನು ಬಂಧಿಸಿ ಪ್ರಕರಣ ದಾಖಲಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT