ಭಾನುವಾರ, 1 ಅಕ್ಟೋಬರ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಾಮರಾಜನಗರ: ಬಿಆರ್‌ಟಿ ಸಂರಕ್ಷಿತಾರಣ್ಯದಲ್ಲಿ ಹುಲಿ ಕಳೇಬರ ಪತ್ತೆ

Published 29 ಆಗಸ್ಟ್ 2023, 10:22 IST
Last Updated 29 ಆಗಸ್ಟ್ 2023, 10:22 IST
ಅಕ್ಷರ ಗಾತ್ರ

ಚಾಮರಾಜನಗರ: ಬಿಆರ್‌ಟಿ ಹುಲಿ ಸಂರಕ್ಷಿತ ಪ್ರದೇಶದ ಬೈಲೂರು ವಲಯದಲ್ಲಿ ಮಂಗಳವಾರ ಹುಲಿಯೊಂದರ ಕಳೇಬರ ಪತ್ತೆಯಾಗಿದೆ.

‘ಬೈಲೂರು ವಲಯದ ಬೆಳ್ಳಾಜೆ ಬೀಟ್ ವ್ಯಾಪ್ತಿಯ ಅತ್ತಿಕಾನೆ ಕಾಫಿ ಎಸ್ಟೇಟ್‌ನಲ್ಲಿ ಮೃತದೇಹ ಕಂಡು ಬಂದಿದ್ದು, ಹುಲಿಯ ದೇಹದ ಎಲ್ಲ ಅಂಗಗಳೂ ಇವೆ. ದೇಹದಲ್ಲಿ ಗಾಯದ ಗುರುತುಗಳಿಲ್ಲ’ ಎಂದು ಬಿಆರ್‌ಟಿ ಡಿಸಿಎಫ್ ದೀಪ್ ಜೆ. ಕಾಂಟ್ರ್ಯಾಕ್ಟರ್ ಹೇಳಿದ್ದಾರೆ.

ಮರಣೋತ್ತರ ಪರೀಕ್ಷೆಯ ಬಳಿಕ ಇನ್ನಷ್ಟು ವಿವರಗಳು ತಿಳಿಯಲಿವೆ ಎಂದು ಅವರು ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT