ಶುಕ್ರವಾರ, 3 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೆ.ಗುಡಿಯಲ್ಲಿ ಹುಲಿಗಳ ದರ್ಶನ

Published 28 ಜನವರಿ 2024, 5:56 IST
Last Updated 28 ಜನವರಿ 2024, 5:56 IST
ಅಕ್ಷರ ಗಾತ್ರ

ಚಾಮರಾಜನಗರ: ಬಿಆರ್‌ಟಿ ಹುಲಿ ಸಂರಕ್ಷಿತ ಪ್ರದೇಶದ ಕೆ.ಗುಡಿ ಸಫಾರಿಯಲ್ಲಿ ನಾಲ್ಕೈದು ದಿನಗಳಿಂದ ಹುಲಿಗಳ ದರ್ಶನವಾಗುತ್ತಿದೆ. 

ಶುಕ್ರವಾರ ಜಂಗಲ್‌ ಲಾಡ್ಜಸ್‌ ಅಂಡ್ ರೆಸಾರ್ಟ್ಸ್‌ಗೆ ಭೇಟಿ ನೀಡಿದ್ದ ಪ್ರವಾಸಿಗರು ಸಫಾರಿ ಹೋಗಿದ್ದ ಸಂದರ್ಭದಲ್ಲಿ ಎರಡು ಹುಲಿಗಳು ಒಟ್ಟಿಗೆ ಕಾಣಿಸಿಕೊಂಡಿವೆ. 

ಸಫಾರಿ ವಲಯದಲ್ಲಿ ಎರಡು ಹುಲಿಗಳು ಓಡಾಡುತ್ತಿದ್ದು, ನಾಲ್ಕೈದು ದಿನಗಳಿಂದ ಪ್ರವಾಸಿಗರಿಗೆ ಕಾಣಸಿಗುತ್ತಿದೆ. ಶನಿವಾರ ಬೆಳಿಗ್ಗೆ ಮತ್ತು ಸಂಜೆಯೂ ವ್ಯಾಘ್ರಗಳು ಕಾಣಸಿಕ್ಕಿವೆ ಎಂದು ಆರ್‌ಎಫ್‌ಒ ವಿನೋದ್‌ ಗೌಡ ‘ಪ್ರಜಾವಾಣಿ’ಗೆ ತಿಳಿಸಿದರು. 

ಲೊಕ್ಕನಹಳ್ಳಿ ಸಫಾರಿಯಲ್ಲೂ ದರ್ಶನ: ಮಲೆಮಹದೇಶ್ವರ ವನ್ಯಧಾಮದ ಪಿ.ಜಿ.ಪಾಳ್ಯ ವಲಯದ ಲೊಕ್ಕನಹಳ್ಳಿಯ ಸಫಾರಿಯಲ್ಲೂ ಪ್ರವಾಸಿಗರಿಗೆ ಶನಿವಾರ ಹುಲಿ ಕಾಣಸಿಕ್ಕಿದೆ. 

ಡಿ.2ರಂದು ಇಲ್ಲಿ ಸಫಾರಿ ಆರಂಭಿಸಲಾಗಿತ್ತು.

‘ಈ ತಿಂಗಳಲ್ಲಿ ಹುಲಿ ಕಂಡು ಬರುತ್ತಿರುವುದು ಇದು ಎರಡನೇ ಬಾರಿ. ಕಳೆದ ವಾರವೂ ಪ್ರವಾಸಿಗರು ವ್ಯಾಘ್ರನನ್ನು ಕಂಡಿದ್ದರು’ ಎಂದು ಮಲೆ ಮಹದೇಶ್ವರ ವನ್ಯಧಾಮದ ಡಿಸಿಎಫ್‌ ಸಂತೋಷ್‌ಕುಮಾರ್‌ ತಿಳಿಸಿದ್ದಾರೆ.   

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT