ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಾಮರಾಜನಗರ: ಬಿಆರ್‌ಟಿಯಲ್ಲಿ ಪ್ರವಾಸಿಗರ ಸ್ನಾನ

Last Updated 1 ಡಿಸೆಂಬರ್ 2021, 6:34 IST
ಅಕ್ಷರ ಗಾತ್ರ

ಚಾಮರಾಜನಗರ: ಬಿಳಿಗಿರಿ ರಂಗನಾಥ ಸ್ವಾಮಿ ದೇವಾಲಯ (ಬಿಆರ್‌ಟಿ) ಹುಲಿ ಸಂರಕ್ಷಿತ ಪ್ರದೇಶದ ಮೂಲಕ ಹಾದು ಹೋಗುವ, ಯಳಂದೂರು–ಬಿಳಿಗಿರಿರಂಗನಬೆಟ್ಟ ಮಾರ್ಗ ಮಧ್ಯೆ ಇರುವ ಸಣ್ಣ ತೊರೆಯೊಂದರಲ್ಲಿ ಪ್ರವಾಸಿಗರು ಸ್ನಾನ ಮಾಡುತ್ತಿರುವ ವಿಡಿಯೊ ತುಣುಕು ವೈರಲ್‌ ಆಗಿದೆ.

ಸೋಮವಾರ ಈ ಘಟನೆ ನಡೆದಿದೆ. ಪ್ರವಾಸಿಗರು ತಾವು ಪ್ರಯಾಣಿಸುತ್ತಿದ್ದ ಟೆಂಪೊ ಟ್ರಾವೆಲರ್‌ ಅನ್ನು ರಸ್ತೆ ಬದಿ ನಿಲ್ಲಿಸಿ ಕೆಳಗಡೆ ಇಳಿದಿರುವ, ಇಬ್ಬರು ತೊರೆಯ ಬಳಿ ಸ್ನಾನ ಮಾಡುತ್ತಿರುವ, ಇನ್ನಿಬ್ಬರು ನೀರಿಗೆ ಇಳಿದಿರುವ ದೃಶ್ಯ ವಿಡಿಯೊದಲ್ಲಿದೆ. ಅದೇ ರಸ್ತೆಯಲ್ಲಿ ವಾಹ ನದಲ್ಲಿ ಸಂಚರಿಸುತ್ತಿದ್ದವರು ಇದನ್ನು ಮೊಬೈಲ್‌ನಲ್ಲಿ ಸೆರೆ ಹಿಡಿದಿದ್ದಾರೆ.

ದಂಡ ವಿಧಿಸಿದ ಸಿಬ್ಬಂದಿ: ಈ ಬಗ್ಗೆ ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದ ವಲಯ ಅರಣ್ಯ ಅಧಿಕಾರಿ ಲೋಕೇಶ್‌ ಮೂರ್ತಿ, ‘ಸೋಮವಾರ ಈ ಘಟನೆ ನಡೆದಿದೆ. ರಸ್ತೆಯಲ್ಲಿ ಗಸ್ತು ತಿರುಗುತ್ತಿದ್ದ ಸಿಬ್ಬಂದಿ ಗಮನಕ್ಕೆ ಬರುತ್ತಿದ್ದಂತೆಯೇ ಪ್ರವಾಸಿಗರನ್ನು ವಿಚಾರಣೆ ಮಾಡಿ, ದಂಡ ವಿಧಿಸಲಾಗಿದೆ. ಬಿಆರ್‌ಟಿಯಲ್ಲಿ ಹಾದು ಹೋಗುವ ರಸ್ತೆಯಲ್ಲಿ ದಾರಿ ಮಧ್ಯೆ ವಾಹನಗಳನ್ನು ನಿಲ್ಲಿಸುವುದಕ್ಕೆ, ಜನರು ಕೆಳಗೆ ಇಳಿಯುವುದಕ್ಕೆ ಅವಕಾಶ ಇಲ್ಲ. ಸಿಬ್ಬಂದಿ ಗಸ್ತು ತಿರುಗುತ್ತಿರುತ್ತಾರೆ’ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT