ಶುಕ್ರವಾರ, 1 ಡಿಸೆಂಬರ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಾಮರಾಜನಗರ: ಬಸಪ್ಪನಪಾಳ್ಯದಲ್ಲಿ ಅದುರಿದ ಭೂಮಿ

Last Updated 13 ಸೆಪ್ಟೆಂಬರ್ 2022, 17:03 IST
ಅಕ್ಷರ ಗಾತ್ರ

ಚಾಮರಾಜನಗರ: ತಾಲ್ಲೂಕಿನ ಚಂದಕವಾಡಿ ಹೋಬಳಿಯ ಬಸಪ್ಪನಪಾಳ್ಯದಲ್ಲಿ ಮಂಗಳವಾರ ರಾತ್ರಿ 8.25ಕ್ಕೆ ಕೆಲವು ಸೆಕೆಂಡುಗಳ ಕಾಲ ಭೂಮಿ ಅದುರಿದ ಅನುಭವವಾಗಿದೆ.

ಭೂಮಿಯ ಒಳಗಡೆಯಿಂದ ಭಾರಿ ಸದ್ದು ಕೇಳಿದ ನಂತರ ಮೂರು ಸೆಕೆಂಡುಗಳ ಕಾಲ ಭೂಮಿ ಕಂಪಿಸಿದೆ. ಭಯಭೀತರಾದ ಜನ ಮನೆಗಳಿಂದ ಹೊರಗಡೆ ಓಡಿ ಬಂದಿದ್ದಾರೆ.

‘ಪಕ್ಕದ ಮನೆಯಲ್ಲಿ ಏನೋ ಆಗಿ ಸದ್ದು ಕೇಳಿಬಂದಿದೆ ಎಂದು ಜನರು ಅಂದುಕೊಂಡಿದ್ದರು. ಸದ್ದಿನ ಬಳಿಕ ಭೂಮಿ ಅದುರಿದ ಅನುಭವವಾಗಿದೆ’ ಎಂದು ಸ್ಥಳೀಯರು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT