ಮಂಗಳವಾರ, ಸೆಪ್ಟೆಂಬರ್ 29, 2020
28 °C
ಕೋವಿಡ್‌–19: 35 ಹೊಸ ಪ್ರಕರಣಗಳು, 24 ಮಂದಿ ಗುಣಮುಖ, 30 ವರ್ಷದ ಯುವಕ ಬಲಿ

ಚಾಮರಾಜನಗರ: ಇಬ್ಬರು ಸೋಂಕಿತರ ಸಾವು, ಮೃತರ ಸಂಖ್ಯೆ 49ಕ್ಕೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಚಾಮರಾಜನಗರ: ಜಿಲ್ಲೆಯಲ್ಲಿ ಕೋವಿಡ್‌ ಸೋಂಕಿತ ಇಬ್ಬರು ವ್ಯಕ್ತಿಗಳು ಸೋಮವಾರ ಮೃತಪಟ್ಟಿದ್ದಾರೆ. ಒಬ್ಬರು ಸೋಂಕಿನ ಕಾರಣಕ್ಕೆ ನಿಧನರಾಗಿದ್ದರೆ, ಮತ್ತೊಬ್ಬರು ಕೋವಿಡ್‌ ಯೇತರ ಕಾರಣದಿಂದ ಪ್ರಾಣಕಳೆದುಕೊಂಡಿದೆ. 

ಇದರೊಂದಿಗೆ ಈವರೆಗೆ ಮೃತಪಟ್ಟ ಸೋಂಕಿತರ ಸಂಖ್ಯೆ 49ಕ್ಕೆ ಏರಿದೆ. ಕೋವಿಡ್‌ನಿಂದಾಗಿ 32 ಹಾಗೂ ಬೇರೆ ಕಾರಣಗಳಿಂದ 17 ಮಂದಿ ಸಾವಿಗೀಡಾಗಿದ್ದಾರೆ. 

ಕೋವಿಡ್‌ನಿಂದ ಮೃತಪಟ್ಟ ವ್ಯಕ್ತಿ 30 ವರ್ಷದ ಯುವಕ. ಜಿಲ್ಲೆಯಲ್ಲಿ ಇಷ್ಟು ಚಿಕ್ಕ ಪ್ರಾಯದ ಸೋಂಕಿತ ಮೃತಪಟ್ಟಿರುವುದು ಇದೇ ಮೊದಲು. ಚಾಮರಾಜನಗರ ತಾಲ್ಲೂಕಿನ ಕುದೇರಿನ ನಿವಾಸಿಯಾಗಿರುವ ಇವರು (3,37,062) ಆಗಸ್ಟ್‌ 28ರಂದು ಕೋವಿಡ್‌ ಆಸ್ಪತ್ರೆಗೆ ದಾಖಲಾಗಿದ್ದರು. ಸೋಮವಾರ ಮೃತಪಟ್ಟಿದ್ದಾರೆ. 

ಮೃತಪಟ್ಟ ಮತ್ತೊಬ್ಬ ವ್ಯಕ್ತಿ ಚಾಮರಾಜನಗರ ತಾಲ್ಲೂಕಿನ ಗೂಳಿಪುರದ 85 ವರ್ಷದ ವೃದ್ಧ (ರೋಗಿ ಸಂಖ್ಯೆ–3,60,082). ಹೃದಯ, ಕಿಡ್ನಿ ಸಮಸ್ಯೆ ಹಾಗೂ ಮಧು ಮೇಹದಿಂದ ಬಳಲುತ್ತಿದ್ದ ಇವರು ಸೋಮವಾರ ಮೃತಪಟ್ಟಿದ್ದಾರೆ. ನಂತರ ನಡೆಸಿದ ಕೋವಿಡ್‌ ಪರೀಕ್ಷೆಯಲ್ಲಿ ಸೋಂಕು ಇರುವುದು ದೃಢಪಟ್ಟಿದೆ. 

ಸೋಮವಾರ 35 ಮಂದಿಗೆ ಕೋವಿಡ್‌–19 ಇರುವುದು ಪತ್ತೆಯಾಗಿದೆ. 24 ಮಂದಿ ಗುಣಮುಖರಾಗಿದ್ದಾರೆ. ಜಿಲ್ಲೆಯ ಒಟ್ಟು ಪ್ರಕರಣಗಳ ಸಂಖ್ಯೆ 2,406ಕ್ಕೆ ಏರಿದೆ. 1,852 ಮಂದಿ ಸೋಂಕು ಮುಕ್ತರಾಗಿದ್ದಾರೆ. 505 ಸಕ್ರಿಯ ಪ್ರಕರಣಗಳಿವೆ. 18 ಮಂದಿ ಐಸಿಯುನಲ್ಲಿ ಇದ್ದಾರೆ. ಸೋಂಕಿತರ ಪೈಕಿ 186 ಮಂದಿ ಹೋಂ ಐಸೊಲೇಷನ್‌ನಲ್ಲಿದ್ದಾರೆ. 

ಮಂಗಳವಾರ ಜಿಲ್ಲೆಯಲ್ಲಿ 760 ಕೋವಿಡ್‌ ಪರೀಕ್ಷೆಗಳನ್ನು ನಡೆಸಲಾಗಿದೆ. ಈ ಪೈಕಿ 726 ಮಂದಿಯ ವರದಿ ನೆಗೆಟಿವ್‌ ಬಂದಿದೆ. 34 ಮಂದಿಗೆ ಸೋಂಕು ದೃಢಪಟ್ಟಿದ್ದು, ಒಂದು ಪ್ರಕರಣ ಮೈಸೂರಿನಲ್ಲಿ ಖಚಿತವಾಗಿದೆ. 

 ದೃಢ ಪಟ್ಟ 35 ಪ್ರಕರಣಗಳಲ್ಲಿ ಚಾಮರಾಜನಗರ ತಾಲ್ಲೂಕಿನ 19, ಗುಂಡ್ಲುಪೇಟೆಯ ಒಂಬತ್ತು, ಕೊಳ್ಳೇಗಾಲದ ಆರು ಹಾಗೂ ಹನೂರಿನ ಒಂದು ಪ್ರಕರಣ ಸೇರಿದೆ. ಗುಣಮುಖರಾದ 24 ಮಂದಿಯ ಪೈಕಿ ಚಾಮರಾಜನಗರ ಹಾಗೂ ಯಳಂದೂರು ತಾಲ್ಲೂಕಿನ ತಲಾ ಎಂಟು ಮಂದಿ, ಗುಂಡ್ಲುಪೇಟೆ, ಕೊಳ್ಳೇಗಾಲದ ತಲಾ ಮೂವರು, ಹನೂರು ತಾಲ್ಲೂಕಿನ ಹಾಗೂ ಹೊರ ಜಿಲ್ಲೆಯ ತಲಾ ಒಬ್ಬರು ಇದ್ದಾರೆ. 

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು