ಮಂಗಳವಾರ, 7 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಾಮರಾಜನಗರ: ಇಬ್ಬರು ಸಾವು, 38 ಹೊಸ ಪ್ರಕರಣ

ಸೋಂಕು ಪ್ರಕರಣಗಳು 2,687ಕ್ಕೆ, ಸೋಂಕುಮುಕ್ತರಾದವರು 2,117
Last Updated 7 ಸೆಪ್ಟೆಂಬರ್ 2020, 14:54 IST
ಅಕ್ಷರ ಗಾತ್ರ

ಚಾಮರಾಜನಗರ: ಜಿಲ್ಲೆಯಲ್ಲಿ ಸೋಮವಾರ ಇಬ್ಬರು ಕೋವಿಡ್‌–19 ರೋಗಿಗಳು ಮೃತಪಟ್ಟಿದ್ದಾರೆ. ಹೊಸದಾಗಿ 38 ಪ್ರರಕಣಗಳು ದೃಢಪಟ್ಟಿವೆ. 57 ಮಂದಿ ಗುಣಮುಖರಾಗಿದ್ದಾರೆ.

ಚಾಮರಾಜನಗರದ 49 ವರ್ಷದ ಪುರುಷ (ರೋಗಿ ಸಂಖ್ಯೆ 4,13,242) ಭಾನುವಾರ ಕೋವಿಡ್‌ ಆಸ್ಪತ್ರೆಗೆ ದಾಖಲಾಗಿದ್ದರು. ಅದೇ ದಿನ ಸಂಜೆ ಮೃತಪಟ್ಟಿದ್ದಾರೆ.

ಮೈಸೂರು ಜಿಲ್ಲೆಯ ನಂಜನಗೂಡು ತಾಲ್ಲೂಕಿನ ಕೋಣನೂರು ಗ್ರಾಮದ 45 ವರ್ಷ ಪುರುಷ (ರೋಗಿ ಸಂಖ್ಯೆ 4,13,242) ಅವರು ಸೆ.4ರಂದು ಆಸ್ಪತ್ರೆಗೆ ದಾಖಲಾಗಿದ್ದರು. ಭಾನುವಾರ ಸಂಜೆ ಮೃತಪಟ್ಟಿದ್ದಾರೆ.

ಇದರೊಂದಿಗೆ ಜಿಲ್ಲೆಯಲ್ಲಿ ಮೃತಪಟ್ಟ ಸೋಂಕಿತರ ಸಂಖ್ಯೆ 55ಕ್ಕೆ ಏರಿದೆ. ಕೋವಿಡ್‌ ಕಾರಣದಿಂದಾಗಿಯೇ 37 ಜನರು ಪ್ರಾಣಕಳೆದುಕೊಂಡರೆ, 18 ಮಂದಿ ಬೇರೆ ಅನಾರೋಗ್ಯದಿಂದ ಮೃತ‍ಪಟ್ಟಿದ್ದಾರೆ.

ಸೋಮವಾವರದ ಹೊಸ 38 ಪ್ರಕರಣಗಳೊಂದಿಗೆಜಿಲ್ಲೆಯಲ್ಲಿ ಇದುವರೆಗೆ ಒಟ್ಟು 2,687 ಪ್ರಕರಣಗಳು ದೃಢಪಟ್ಟಿವೆ. 57 ಮಂದಿ ಸೋಂಕು ಮುಕ್ತರಾಗುವುದರೊಂದಿಗೆ 2,117 ಮಂದಿ ಗುಣಮುಖರಾಗಿದ್ದಾರೆ. 516 ಸಕ್ರಿಯ ಪ್ರಕರಣಗಳಿವೆ.18 ಮಂದಿಗೆ ಐಸಿಯು ವಾರ್ಡ್‌ನಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. 166 ಮಂದಿ ಸೋಂಕಿತರು ಹೋಂ ಐಸೋಲೇಷನ್‌ಗೊಳಗಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಸೋಮವಾರ 682 ಕೋವಿಡ್‌ ಪರೀಕ್ಷೆಗಳನ್ನು ನಡೆಸಲಾಗಿದೆ. ಆರ್‌ಟಿಸಿಪಿಆರ್‌ 190, ರ‍್ಯಾಪಿಡ್‌ ಆ್ಯಂಟಿಜೆನ್‌ 486 ಹಾಗೂ ಟ್ರುನಾಟ್‌ ಆರು ಪರೀಕ್ಷೆಗಳನ್ನು ನಡೆಸಲಾಗಿದೆ. 644 ಮಂದಿಯ ವರದಿ ನೆಗೆಟಿವ್‌ ಬಂದಿದೆ.

ಸೋಂಕು ದೃಢಪಟ್ಟ 38 ಪ್ರಕರಣಗಳಲ್ಲಿಚಾಮರಾಜನಗರ ತಾಲ್ಲೂಕಿನಲ್ಲಿ 12, ಕೊಳ್ಳೇಗಾಲ ಮತ್ತು ಯಳಂದೂರು ತಾಲ್ಲೂಕಿನಿಂದ ತಲಾ 8, ಗುಂಡ್ಲುಪೇಟೆ ತಾಲ್ಲೂಕಿನಿಂದ 6 ಹಾಗೂ ಹನೂರು ತಾಲ್ಲೂಕಿನಿಂದ 4 ಪ್ರಕರಣಗಳು ವರದಿಯಾಗಿವೆ.

516 ಸಕ್ರಿಯ ಪ್ರಕರಣಗಳ ಪೈಕಿ, ಚಾಮರಾಜನಗರ ತಾಲ್ಲೂಕಿನಲ್ಲಿ 148 ಪ್ರಕರಣಗಳಿವೆ. ಗುಂಡ್ಲುಪೇಟೆ 119, ಕೊಳ್ಳೇಗಾಲ 149, ಯಳಂದೂರು 50, ಹನೂರು ತಾಲ್ಲೂಕಿನಲ್ಲಿ 47 ಹಾಗೂ ಹೊರ ಜಿಲ್ಲೆಯ ನಾಲ್ಕು ಪ್ರಕರಣಗಳಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT