ಚಾಮರಾಜನಗರ: ಪ್ರಕೃತಿಯಲ್ಲಿ ಬದಲಾವಣೆಯ ಹಾಗೂ ಜೀವರಾಶಿಗಳ ಮೇಲೆ ಧರ್ಮದ ಪ್ರಭಾವ ಬೀರುವ ಪರ್ವ ಕಾಲವನ್ನು ವಸಂತ ಪಂಚಮಿಯಾಗಿ ಆಚರಿಸಲಾಗುವುದು ಎಂದು ಕನಕಗಿರಿ ಕ್ಷೇತ್ರದ ಜೈನಮಠದ ಭಟ್ಟಾರಕ ಪಟ್ಟಾಚಾರ್ಯವರ್ಯ ಸ್ವಾಮೀಜಿ ಹೇಳಿದರು.

ಕನಕಗಿರಿಯ ಜೈನಮಠದಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ಭಗವಾನ್ ಬಾಹುಬಲಿ ಸ್ವಾಮಿಯ 10ನೇ ಪ್ರತಿಷ್ಠಾಪನಾ ಕಾರ್ಯಕ್ರಮದಲ್ಲಿ ವಿಶೇಷ ಪಾದಪೂಜೆ ನೆರವೇರಿಸಿ ಮಾತನಾಡಿದ ಅವರು, ಬಾಹುಬಾಲಿ ವಿಶ್ವಕ್ಕೆ ಶಾಂತಿ, ಸೌಹಾರ್ದ ಹಾಗೂ ಸಮಾಧಾನ ತಂದುಕೊಟ್ಟ ಮಹಾ ಪುರುಷರಾಗಿದ್ದು ಅಹಿಂಸೆಯನ್ನು ತ್ಯಜಿಸಿ ಜಗತ್ತಿಗೆ ಶಾಂತಿಯ ಸಂದೇಶ ನೀಡಿದರು. ಶಾಂತಿ, ತ್ಯಾಗ, ಸಮತೆ, ಸಮನ್ವಯತೆಯ ತತ್ವಗಳನ್ನು ಬೋಧಿಸಿದ ಬಾಹುಬಲಿಯ ಸ್ಮರಣೆ ಅಗತ್ಯ ಎಂದರು.

ಬಾಹುಬಲಿಯ ಆಕರ್ಷಕ ಮೂರ್ತಿಯನ್ನು ಕ್ಷೇತ್ರದಲ್ಲಿ ಪ್ರತಿಷ್ಠಾಪಿಸಿರುವುದು ಅಭಿನಂದನಾರ್ಹ. ಬಾಹುಬಲಿ ನೆಲೆ ನಿಂತ ಬಳಿಕ ಕ್ಷೇತ್ರದ ಅಭಿವೃದ್ಧಿಯ ಜೊತೆಗೆ ಸಮಾಜಮುಖಿ ಕಾರ್ಯಗಳು ನಡೆಯುತ್ತಿವೆ, ಬಾಹುಬಲಿಯ ಶಾಂತಿಯ ಸಂದೇಶಗಳು ದ್ವೇಷ, ಅಸೂಹೆಯನ್ನು ಅಳಿಸಿ ಶಾಂತಿ ನೆಮ್ಮದಿ ನೆಲೆಸುವಂತೆ ಮಾಡಿವೆ ಎಂದರು.

ಚಾಮರಾಜನಗರ ಪಾರ್ಶ್ವನಾಥ ಜೈನ ಸಂಘದ ಅಧ್ಯಕ್ಷ ನಿರ್ಮಲ್ ಕುಮಾರ್ ಜೈನ್, ಬಾಹುಬಲಿ ಮೂರ್ತಿಯ ದಾನಿ ದಿ.ವಿಶಾಲೇಂದ್ರಯ್ಯ, ಮದನಾವಳಿ ಕುಟುಂಬ ಸದಸ್ಯರು, ದಿ.ಕಿರಣ್ ಕುಮಾರ್ ಕುಟುಂಬದ ಸದಸ್ಯರು ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.