ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಯಳಂದೂರು: ಅಳಿವಿನಿಂಚಿಗೆ ಸಾಗುತ್ತಿವೆ ವೀರಗಲ್ಲು, ಮಾಸ್ತಿಗಲ್ಲುಗಳು

ಚರಿತ್ರೆ ಬಿಂಬಿಸುವ ಸ್ಮಾರಕಗಳಿಗೆ ಬೇಕಿದೆ ರಕ್ಷಣೆ
Last Updated 2 ಮಾರ್ಚ್ 2021, 15:10 IST
ಅಕ್ಷರ ಗಾತ್ರ

ಯಳಂದೂರು: ಹಿಂದಿನ ಕಾಲದಲ್ಲಿದ್ದ ಪಾಳೇಗಾರರ ಶೌರ್ಯದ ಪ್ರತೀಕವಾಗಿ ಇಲ್ಲವೆ ವೀರತ್ವದ ಕುರುಹಾಗಿ ಪಟ್ಟಣದ ವ್ಯಾಪ್ತಿಯಲ್ಲಿ ಕಂಡು ಬರುವ ವೀರಗಲ್ಲು ಮತ್ತು ಮಾಸ್ತಿಕಲ್ಲುಗಳು ಅವಸಾನದ ಅಂಚಿನಲ್ಲಿವೆ.

ಇಲ್ಲಿರುವಶಿಲ್ಪಗಳಲ್ಲಿ ಗ್ರಾಮದ ಗಡಿ, ಸಂಪತ್ತು, ಗೋವು, ಸ್ತ್ರೀಯರ ಮಾನ ರಕ್ಷಣೆಗಾಗಿ ಶತ್ರುಗಳೊಡನೆ ಕಾದಾಡಿದ ಕಲಿಗಳ ಚಿತ್ರಗಳಿವೆ. ಕೆಲವು ಬೇಟೆಯಲ್ಲಿಪ್ರಾಣತೆತ್ತ ಕುರುಹುಗಳ ನೆನಪಿಗಾಗಿ ಹಲವು ಶತಮಾನಗಳ ಹಿಂದೆ ರಾಜಾಧಿರಾಜರಿಂದಸ್ಥಾಪಿತವಾಗಿವೆ. ನಾಯಕತ್ವದ ಸಂಕೇತವಾಗಿ, ತ್ಯಾಗಬಲಿದಾನಗಳನ್ನು ವಿವರಿಸುವ ಇವು ಈಗಲೂ ಇತಿಹಾಸ ಆಸಕ್ತರ ಗಮನ ಸೆಳೆದಿವೆ. ಆದರೆ, ಇವುಗಳಮಹತ್ವ ತಿಳಿಯದೆ ಕೆಲವೆಡೆ ಇವುಗಳನ್ನು ವಿರೂಪಗೊಳಿಸಲಾಗಿದೆ.

ಪಟ್ಟಣದ ಸುತ್ತಮುತ್ತ ಗಂಗಾ, ಹೊಯ್ಸಳ, ಹದಿನಾಡು ಪಾಳೆಗಾರರ ಚರಿತ್ರೆ ಬಿಂಬಿಸುವನೂರಾರು ಸ್ಮಾರಕಗಳಿವೆ. ಇವರ ಕಾಲದಲ್ಲಿ ಹೋರಾಡಿ ಮಡಿದ ನಾಯಕನನ್ನು ಸ್ಮರಿಸಲು,ಶಿಲೆಗಳಲ್ಲಿ ಈತನ ಸಾಹಸ ಸಾರಲು ಸ್ಥಾಪಿಸುವ ಪದ್ಧತಿ ಪರಂಪರೆಯಾಗಿ ಬೆಳೆದುಬಂದಿತ್ತು. ಗಂಗರ ಕಾಲಕ್ಕೆ ಸೇರಿದ ವೀರಗಲ್ಲನ್ನು ಈಗ ಎಲ್ಲೆಡೆ ಕಾಣಬಹುದು.ಪಟ್ಟಣದಲ್ಲಿ ವೀರ ಪರಂಪರೆ ಸಾರುವ ಸ್ಮಾರಕಗಳು ಈಗಲೂ ಬಸ್ ನಿಲ್ದಾಣ, ಹೊಳೆ ಸಾಲುಸುತ್ತಮುತ್ತ ಇದ್ದು, ಅಳಿವಿನಂಚು ಮುಟ್ಟಿವೆ.

ಬಳೇಪೇಟೆಯಲ್ಲಿ ಪಾಳೇಗಾರರ ಕುಲಕ್ಕೆ ಸೇರಿದ ವೀರಗಲ್ಲುಗಳು ಇವೆ. ಸುವರ್ಣಾವತಿ ನದಿ ತಟದ ಸುತ್ತಮುತ್ತ ಪೂರ್ವಾಭಿಮುಖವಾಗಿ ಇವುಗಳನ್ನು ನಿಲ್ಲಿಸಲಾಗಿದೆ. ಇಂತಹಶಿಲೆಗಳಲ್ಲಿ ಇರುವ ಚಿತ್ರಗಳಿಗೆ ಸ್ಥಳೀಯರು ಪೂಜೆ ಸಲ್ಲಿಸಿ, ಕುಂಕುಮ, ಅರಿಸಿನ ಹಚ್ಚಿದ್ದಾರೆ. ನಾಲ್ಕು-ಐದು ಅಡಿ ಎತ್ತರದ ಶಿಲೆಯ ಮಧ್ಯ ಭಾಗದಲ್ಲಿ ಲಿಂಗಾರ್ಚನೆಮಾಡುವ ಪುರುಷರು ಮತ್ತು ಅಕ್ಕಪಕ್ಕ ಪೂಜೆ ಸಲ್ಲಿಸುವ ವೀರ ಪುತ್ರರು ಹಾಗೂ ಭಟರುಸ್ವರ್ಗಾರೋಹಣ ಮಾಡಿಸುತ್ತಿರುವ ಚಿತ್ರಗಳು ಗಮನ ಸೆಳೆಯುತ್ತವೆ.

‘ಪಾಳೇಗಾರರ ಕಾಲದಲ್ಲಿ ನಗರ-ಪಟ್ಟಣಗಳಲ್ಲಿ ಹೇಡಿಗಳನ್ನು ಮತ್ತು ಸ್ವಾರ್ಥಿಗಳನ್ನುಕೀಳಾಗಿ ಕಾಣಲಾಗುತ್ತಿತ್ತು. ಸ್ವಾಮಿ ನಿಷ್ಠೆ, ಮೌಲ್ಯ, ಉದಾರತೆಗಳಿಗೆ ಹೆಸರಾದ ಹದಿನಾಡು ಅರಸರು, ಉಮ್ಮತ್ತೂರು ಹಾಗೂ ಶಿಂಷಾ ಪಾಳೇಗಾರರು ನಾಡನ್ನು ಸಂರಕ್ಷಿಸುವ ಕ್ಷತ್ರಿಯರಿಗೆ ಹೊಣೆಗಾರರಾಗಿದ್ದರು. ಪ್ರಾಚೀನ ಕರ್ನಾಟಕದಲ್ಲಿ ಹೊಯ್ಸಳರ ಗರುಡ(ಅಂಗರಕ್ಷಕ) ರಂತೆ, ವಿಜಯನಗರದ ಅರಸರ ಕಾಲದಲ್ಲಿ ಪಾಳ್ಯಗಾರರ ಮೂಲಕ ನಾಡಿನ ಸಂರಕ್ಷಣೆಮಾಡಿಸುತ್ತಿದ್ದರು. ನಂತರ ಈ ಸಂಸ್ಕೃತಿ ಮೈಸೂರು ಸುತ್ತಮುತ್ತಲೂ ವ್ಯಾಪಿಸಿತ್ತು.ನಾಡು-ನುಡಿಗಾಗಿ, ರಾಜನ ಸಂರಕ್ಷಣೆಗೆ ಇದ್ದವರು ಹತರಾದಾಗ ಆಯಾ ಪ್ರದೇಶದಲ್ಲಿಅವರ ನೆನೆಪಿನ ಸಂಕೇತವಾಗಿ ವೀರಗಲ್ಲುಗಳಲ್ಲಿ ಪ್ರತಿಷ್ಠಾಪಿಸಲಾಗುತ್ತಿತ್ತು. ನಂತರಪೂಜೆ ಸಲ್ಲಿಸುವ ಪರಂಪರೆ ಬೆಳೆದು ಬಂದಿತು’ ಎಂದು ನಿವೃತ್ತ ಇತಿಹಾಸ ಪ್ರಾಧ್ಯಾಪಕರಮೇಶ್ ಅವರು ‘ಪ್ರಜಾವಾಣಿ’ಗೆ ತಿಳಿಸಿದರು.

‘ವೀರಗಲ್ಲುಗಳನ್ನು ಎಲ್ಲೆಂದರಲ್ಲಿ ಯಾರು ಸ್ಥಾಪಿಸುವುದಿಲ್ಲ. ವೀರನನ್ನು ಸಮಾಧಿಮಾಡಿರುವ ಇಲ್ಲವೇ ಈತ ಹೋರಾಟ ಮಾಡಿದ ಸ್ಥಳದಲ್ಲಿ ನೆಡುತ್ತಾರೆ. ಇಂತಹ ಕಲ್ಲುಗಳಿಗೆಸಂಖ್ಯೆಗಳನ್ನು ನೀಡಿ, ಇವುಗಳ ಉಸ್ತುವಾರಿಯನ್ನು ಪುರಾತತ್ವ ಇಲಾಖೆಗೆ ಮತ್ತು ಸ್ಥಳೀಯಪಂಚಾಯಿತಿಗೆ ವಹಿಸಬೇಕು’ ಎಂದು ಮೊತ್ತದಕೇರಿ ಪ.ಪಂ. ಸದಸ್ಯ ರವಿ ಹೇಳಿದರು.

ನವೀನ ತಂತ್ರಜ್ಞಾನ ಬಳಸಿ ರಕ್ಷಿಸಿ

‘ಪಟ್ಟಣದಲ್ಲಿ ದೊರಕುವ ವೀರಗಲ್ಲು ಮತ್ತು ಮಾಸ್ತಿಕಲ್ಲುಗಳನ್ನು ಸಂರಕ್ಷಿಸಲು ನವೀನತಂತ್ರಜ್ಞಾನ ಬಳಸಬೇಕು. ವಿದೇಶದಲ್ಲಿ ಸ್ಮಾರಕಗಳಿಗೆ ಮೊಬೈಲ್ ಪೋಟೊ ತೆಗೆಯುವ ಮೂಲಕಭೌಗೋಳಿಕ ರೇಖಾಂಶ, ಅಕ್ಷಾಂಶ ಸ್ಥಳ ಗುರುತಿಸುವ (ಜಿಯೋ ಟ್ಯಾಗ್) ತಂತ್ರವನ್ನುಬಳಸಬೇಕು. ಇದರಿಂದ ಅತ್ಯಂತ ಸುಲಭ ಹಾಗೂ ನಿಖರವಾದ ಮಾಹಿತಿ ದೊರೆತು ವೀರಗಲ್ಲುಸಂಶೋಧಕರಿಗೆ ಮತ್ತು ಚರಿತ್ರೆ ಅಧ್ಯಯನ ಮಾಡುವವರಿಗೆ ನೆರವಾಗುತ್ತದೆ’ ಎಂದು ಸಹ ಪ್ರಾಧ್ಯಾಪಕ ಹರದನಹಳ್ಳಿ ನಂಜುಂಡಸ್ವಾಮಿ ಅವರು ‘ಪ್ರಜಾವಾಣಿ’ಗೆ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT