ಶುಕ್ರವಾರ, 3 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಯಳಂದೂರು: ಜೆಎಸ್ಎಸ್ ಶಿಕ್ಷಣೆ ಸಂಸ್ಥೆಗಳಲ್ಲಿ ನಗದು, ಡಿವಿಆರ್ ಕಳವು

Published 8 ಡಿಸೆಂಬರ್ 2023, 16:16 IST
Last Updated 8 ಡಿಸೆಂಬರ್ 2023, 16:16 IST
ಅಕ್ಷರ ಗಾತ್ರ

ಯಳಂದೂರು: ಪಟ್ಟಣದ ಜೆಎಸ್ಎಸ್ ಮಹಿಳಾ ಕಾಲೇಜಿನ ಪ್ರೌಢಶಾಲಾ ವಿಭಾಗದ ಕಚೇರಿಯ ಕಿಟಕಿ ಸರಳನ್ನು ಬುಧವಾರ ತಡರಾತ್ರಿ  ಮುರಿದ ಕಳ್ಳರು ಹಣ ಮತ್ತು ಎಲೆಕ್ಟ್ರಾನಿಕ್ ವಸ್ತುಗಳನ್ನು ದೋಚಿದ್ದಾರೆ.

 ಪ್ರವಾಸಕ್ಕೆ ತೆರಳಲು ವಿದ್ಯಾರ್ಥಿಗಳಿಂದ ಸಂಗ್ರಹಿಸಿದ್ದ ₹37,800 ನಗದು ಹಾಗೂ ಸಿಸಿಟಿವಿಗೆ ಸಂಪರ್ಕ ಕಲ್ಪಿಸುವ 8 ಸಾವಿರ ಮೌಲ್ಯದ ಡಿವಿಆರ್ ಕದ್ದಿದ್ದಾರೆ. ಮತ್ತೊಂದು ಪ್ರಕರಣದಲ್ಲಿ ಎಸ್‌ಡಿವಿಎಸ್ ಶಾಲೆಯ ಒಳ ಪ್ರವೇಶಿಸಿ,  1 ಡಿವಿಆರ್ ಅಪಹರಿಸಿದ್ದಾರೆ.

ಶ್ವಾನದಳ, ಬೆರಳಚ್ಚು ತಜ್ಞರು ಹಾಗೂ ಕೃತ್ಯ ಸ್ಥಳದ ಅಪರಾಧ ವೀಕ್ಷಣ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಮಾಹಿತಿ ಸಂಗ್ರಹಿಸಿದ್ದಾರೆ. ಪಟ್ಟಣ ಠಾಣೆಯಲ್ಲಿ ಗುರುವಾರ ಎರಡು ಪ್ರಕರಣ ದಾಖಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT