20*20*3 ಮೀಟರ್ ಅಳತೆಯ ಕೃಷಿ ಹೊಂಡ ನಿರ್ಮಿಸಲು ಶೇ 50ರಂತೆ ಗರಿಷ್ಠ ₨ 60 ಸಾವಿರ, ತೋಟಗಾರಿಕಾ ಬೆಳೆಗಳನ್ನು ಸಂರಕ್ಷಿತ ವಾತಾವರಣದಲ್ಲಿ ಬೆಳೆಯಲು ನಿರ್ಮಿಸಲಾಗುವ ಹಸಿರು ಮನೆಗೆ ಗರಿಷ್ಠ ₨ 4.67 ಲಕ್ಷ ಸಹಾಯಧನ ನೀಡಲಾಗುತ್ತದೆ.
ಜೇನು ಸಾಕಾಣಿಕೆಗೆ ಉತ್ತೇಜಿಸಲು ಪ್ರತಿ ಜೇನು ಕುಟುಂಬ ಹಾಗೂ ಪೆಟ್ಟಿಗೆಗೆ ಶೇ 50ರಂತೆ ₨ 1,500 ಸಹಾಯಧನವನ್ನು ಗರಿಷ್ಠ 50 ಪೆಟ್ಟಿಗೆಗಳಿಗೆ ನೀಡಲಾಗುತ್ತದೆ. ತೋಟಗಾರಿಕೆ ಉತ್ಪನ್ನಗಳ ಕೊಯ್ಲೋತ್ತರ ನಿರ್ವಹಣೆಗಾಗಿ ಹಣ್ಣು ತರಕಾರಿಗಳ ಸೂಕ್ತ ಪ್ಯಾಕಿಂಗ್ಗಾಗಿ 9*6*3 ಮೋಟರ್ ಅಳತೆಯ ಪ್ಯಾಕ್ ಹೌಸ್ ಘಟಕ ನಿರ್ಮಿಸಲು ₨ 1.5 ಲಕ್ಷ ಸಹಾಯಧನ ನೀಡಲಾಗುತ್ತದೆ. ಈರುಳ್ಳಿ ಶೇಖರಣಾ ಘಟಕಕ್ಕೆ ₨ 50 ಸಾವಿರ, ವೈಜ್ಞಾನಿಕ ರೀತಿಯಲ್ಲಿ ಬಾಳೆಹಣ್ಣು ಮಾಗಿಸುವ ಘಟಕಕ್ಕೆ ₨ 12 ಲಕ್ಷದವರೆಗೆ ಸಹಾಯಧನ ಕೊಡಲಾಗುತ್ತದೆ.