ಚಾಮರಾಜನಗರ: `ರೇಷ್ಮೆ ಹುಳುಗಳೇ ರೈತರನ್ನು ಸಾಕುತ್ತವೆ~ ಎಂಬ ಮಾತು ಜಿಲ್ಲೆಯಲ್ಲಿ ಪ್ರಚಲಿತವಾಗಿತ್ತು. ಪ್ರಸ್ತುತ ಈ ಮಾತು ಅರ್ಥ ಕಳೆದುಕೊಂಡಿದೆ. ಹಿಪ್ಪುನೇರಳೆ ನಂಬಿದವರ ಬದುಕು ಸಂಕಷ್ಟಕ್ಕೆ ಸಿಲುಕಿದೆ.

ರೇಷ್ಮೆ ಕೃಷಿಗೆ ಪುನಶ್ಚೇತನ ನೀಡಿ ಬೆಳೆಗಾರರ ಜೀವನಕ್ಕೆ ಭದ್ರತೆ ನೀಡುವ ನೀತಿಗಳು ಕೇಂದ್ರ ಮತ್ತು ರಾಜ್ಯ ಸರ್ಕಾರದಿಂದ ಜಾರಿಗೊಂಡಿಲ್ಲ. ಹೀಗಾಗಿ, `ರೇಷ್ಮೆ ನಗರಿ~ ಎಂಬ ಬಿರುದು ಪಡೆದಿದ್ದ ಜಿಲ್ಲೆಯಲ್ಲಿ ಹಿಪ್ಪುನೇರಳೆ ಕೃಷಿ ವಿಸ್ತರಣೆಗೆ ತೀವ್ರ ಹಿನ್ನಡೆಯಾಗಿದೆ.

ರೇಷ್ಮೆ ಆಮದು ಸುಂಕ ಕಡಿಮೆ ಮಾಡಿದ ಕೇಂದ್ರ ಸರ್ಕಾರದ ನೀತಿಯಿಂದ ರೇಷ್ಮೆ ಗೂಡಿನ ಧಾರಣೆ ಕುಸಿತ ಕಂಡಿತು. ಇದರಿಂದ ರೈತರು ದಿಕ್ಕೆಟ್ಟರು. ಸಕಾಲದಲ್ಲಿ ಬೆಂಬಲ ಬೆಲೆ ಘೋಷಣೆಗೆ ಕೇಂದ್ರ, ರಾಜ್ಯ ಸರ್ಕಾರ ಕ್ರಮಕೈಗೊಳ್ಳಲಿಲ್ಲ. ಇದು ರೇಷ್ಮೆ ಕೃಷಿಗೆ ದೊಡ್ಡಪೆಟ್ಟು ನೀಡಿದೆ.

ಜಿಲ್ಲೆಯಲ್ಲಿ ಒಟ್ಟು 1,769 ಹೆಕ್ಟೇರ್ ಪ್ರದೇಶದಲ್ಲಿ ಹಿಪ್ಪುನೇರಳೆ ಬೆಳೆಯಲಾಗುತ್ತಿದೆ. ಇದರಲ್ಲಿ ಚಾಮರಾಜನಗರ ತಾಲ್ಲೂಕಿನ 1,240.60 ಹೆಕ್ಟೇರ್‌ನಲ್ಲಿ ಹಿಪ್ಪುನೇರಳೆ ಬೆಳೆಯುತ್ತಿರುವುದು ವಿಶೇಷ. ಉಳಿದ ತಾಲ್ಲೂಕಿನಲ್ಲಿ ರೇಷ್ಮೆ ಕೃಷಿಯ ವಿಸ್ತ್ರೀರ್ಣ ಕಡಿಮೆಯಿದೆ. ಪ್ರಸ್ತುತ ಬೆಲೆ ಕುಸಿತ, ಮಳೆ ಅಭಾವದಿಂದ ಮಳೆಯಾಶ್ರಿತ ಪ್ರದೇಶದಲ್ಲಿ ಹಿಪ್ಪುನೇರಳೆ ಬೆಳೆಯುವವರ ಸಂಖ್ಯೆ ಕಡಿಮೆಯಾಗಿದೆ.

ನವೀನ ತಂತ್ರಜ್ಞಾನ, ಸಹಾಯಧನದ ಸೌಲಭ್ಯ, ಸೂಕ್ತ ತರಬೇತಿ ನೀಡಿದರೂ ರೈತರು ರೇಷ್ಮೆ ನಾಟಿ ಮಾಡಲು ಹಿಂದೇಟು ಹಾಕುತ್ತಿದ್ದಾರೆ. ರೇಷ್ಮೆ ಗೂಡಿನ ಬೆಲೆ ಏರಿಳಿತವೇ ಇದಕ್ಕೆ ಮೂಲ ಕಾರಣ. ಕಳೆದ ಒಂದು ವರ್ಷದಿಂದಲೂ ಮಾರುಕಟ್ಟೆಯಲ್ಲಿ ಗೂಡಿನ ಬೆಲೆ ಸ್ಥಿರತೆ ಕಂಡಿಲ್ಲ. ಇದು ಬೆಳೆಗಾರರ ನಿದ್ದೆಗೆಡಿಸಿದೆ. ರೇಷ್ಮೆ ಇಲಾಖೆಯ ಅಧಿಕಾರಿಗಳು ರೈತರ ಮನೆ ಬಾಗಿಲಿಗೆ ಹೋಗಿ ಉತ್ತೇಜನ ನೀಡಿದರೂ ಹಿಪ್ಪುನೇರಳೆ ಬೆಳೆಯಲು ಮುಂದಾಗುವವರ ಸಂಖ್ಯೆ ಕಡಿಮೆ.

ವೈಭವ ಮರುಕಳಿಸುವುದೇ?: ಮೂರು ದಶಕದ ಹಿಂದೆ ಜಿಲ್ಲೆಯಲ್ಲಿ ರೇಷ್ಮೆ ಉದ್ಯಮ ಉತ್ತುಂಗದ ಸ್ಥಿತಿಯಲ್ಲಿತ್ತು. ಹಿಪ್ಪುನೇರಳೆ ನಂಬಿ ಬದುಕು ಕಟ್ಟಿಕೊಂಡಿದ್ದವರ ಸಂಖ್ಯೆ ಹೆಚ್ಚಿತ್ತು. ರಾಜ್ಯ ಸರ್ಕಾರ ಕೂಡ ರೇಷ್ಮೆ ಮಾರುಕಟ್ಟೆ, ಹುರಿ ಮತ್ತು ನೇಯ್ಗೆ ಕಾರ್ಖಾನೆ, ತರಬೇತಿ ಕೇಂದ್ರ ತೆರೆಯುವ ಮೂಲಕ ಈ ಕೃಷಿಯ ವಿಸ್ತರಣೆಗೆ ಪ್ರೋತ್ಸಾಹ ನೀಡಿತ್ತು.

ಆದರೆ, ಕಳೆದ ಒಂದು ದಶಕದಿಂದ ಚಾಮರಾಜನಗರ, ಕೊಳ್ಳೇಗಾಲ, ಮಾಂಬಳ್ಳಿ, ಸಂತೇಮರಹಳ್ಳಿಯ ಸರ್ಕಾರಿ ರೇಷ್ಮೆ ಕಾರ್ಖಾನೆಗಳಿಗೆ ಪುನಶ್ಚೇತನ ನೀಡಲು ಸರ್ಕಾರ ಮುಂದಾಗಲಿಲ್ಲ. ಇದರ ಪರಿಣಾಮ ಕಾರ್ಖಾನೆಗಳು ನಷ್ಟದ ಸುಳಿಗೆ ಸಿಲುಕಿದವು. ವಿದೇಶದಿಂದ ಆಮದಾಗುತ್ತಿದ್ದ ಕಚ್ಚಾರೇಷ್ಮೆ ಸರಕಿಗೆ ಪೈಪೋಟಿ ನೀಡಲು ವೈಫಲ್ಯ ಕಂಡವು. ಕಾರ್ಮಿಕರು ಬೀದಿಗೆ ಬಿದ್ದರು.

ಚಾಮರಾಜನಗರದ ಸರ್ಕಾರಿ ರೇಷ್ಮೆ ಕಾರ್ಖಾನೆಯಲ್ಲಿ ಗುಣಮಟ್ಟದ ನೂಲು ತಯಾರಿಸಲಾಗುತಿತ್ತು. ಇಲ್ಲಿ 116 ಬೇಸಿನ್‌ಗೆ ಪರವಾನಗಿ ಇದೆ. ಆದರೆ, 15 ಬೇಸಿನ್‌ನಲ್ಲಿ ಕೆಲಸ ನಡೆಯುತ್ತಿದೆ. 50ರಿಂದ 60 ಮಂದಿ ಕಾರ್ಮಿಕರು ಕೆಲಸ ಮಾಡುತ್ತಿದ್ದಾರೆ. ಸಮ್ಮಿಶ್ರ ಸರ್ಕಾರದ ಅವಧಿಯಲ್ಲಿ ಈ ಕಾರ್ಖಾನೆ ಮತ್ತು ಸಂತೇಮರಹಳ್ಳಿ ಕಾರ್ಖಾನೆ ಯನ್ನು ಒಟ್ಟುಗೂಡಿಸಿ ಪುನಶ್ಚೇತನ ನೀಡಲು ನಿರ್ಧರಿಸಲಾಗಿತ್ತು. ರಾಜಕೀಯ ಸ್ಥಿತ್ಯಂತರದಿಂದ ಈ ಪ್ರಸ್ತಾವ ನೆನೆಗುದಿಗೆ ಬಿದ್ದಿತು.

ಕಾರ್ಖಾನೆ ಪಕ್ಕದಲ್ಲಿರುವ ಸರ್ಕಾರಿ ರೇಷ್ಮೆ ಗೂಡು ಮಾರುಕಟ್ಟೆ ಪಾಳುಬಿದ್ದಿದೆ. 1962ರಲ್ಲಿ ಸ್ಥಾಪನೆಯಾದ ಈ ಮಾರುಕಟ್ಟೆ ವ್ಯಾಪ್ತಿ ಪರವಾನಗಿ ಪಡೆದ 1,540 ರೀಲರ್‌ಗಳಿದ್ದರು. ಈಗ ರೀಲರ್‌ಗಳಿಲ್ಲದೆ ಮಾರುಕಟ್ಟೆಗೆ ಬೀಗಮುದ್ರೆ ಬಿದ್ದಿದೆ. ವಾರ್ಷಿಕವಾಗಿ ಈ ಮಾರುಕಟ್ಟೆಯಲ್ಲಿ 77 ಸಾವಿರ ರೇಷ್ಮೆ ಗೂಡಿನ ಲಾಟ್‌ಗಳು ಮಾರಾಟವಾಗಿರುವ ದಾಖಲೆಯಿದೆ. ಪ್ರಸ್ತುತ ಯಾವುದೇ ರೈತರು ಮಾರುಕಟ್ಟೆಯತ್ತ ಬರುತ್ತಿಲ್ಲ.

`ಜಿಲ್ಲೆಯಲ್ಲಿರುವ ರೇಷ್ಮೆ ಮಾರುಕಟ್ಟೆ, ಕಾರ್ಖಾನೆಗಳ ಪುನಶ್ಚೇತನಕ್ಕೆ ರಾಜ್ಯ ಸರ್ಕಾರ ಬಜೆಟ್‌ನಲ್ಲಿ ಹಣ ಮೀಸಲಿಡಲು ಸಿದ್ಧವಿಲ್ಲ. ಬೆಲೆ ಕುಸಿತದಿಂದ ರೈತರು ಪರ್ಯಾಯ ಬೆಳೆ ಬೆಳೆಯಲು ಮುಂದಾಗಿದ್ದಾರೆ. ಬೆಲೆ ಏರಿಳಿತದಿಂದ ದಿಕ್ಕೆಟ್ಟಿರುವ ಬೆಳೆಗಾರರಿಗೆ ವಿಶೇಷ ಪ್ಯಾಕೇಜ್ ಘೋಷಿಸಿ ಉತ್ತೇಜನ ನೀಡಿದರೆ ಪುನಃ ಹಿಪ್ಪುನೇರಳೆ ಕೃಷಿಯತ್ತ ಮುಖ ಮಾಡುತ್ತಾರೆ~ ಎನ್ನುವುದು ಬೆಳೆಗಾರ ಸದಾಶಿವಪ್ಪ ಅವರ ಅನಿಸಿಕೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.