ಚಾಮರಾಜನಗರ: ಜಿಲ್ಲೆಯಲ್ಲಿ ಬಿಸಿಲಿನ ಝಳ ಹೆಚ್ಚುತ್ತಿದ್ದು, ನಾಗರಿಕರು ತತ್ತರಿಸಿದ್ದಾರೆ. ಕೆರೆ-ಕಟ್ಟೆಗಳಲ್ಲಿ ನೀರು ಬತ್ತಿಹೋಗಿದ್ದು, ಗ್ರಾಮೀಣ ಪ್ರದೇಶದ ಜಾನುವಾರುಗಳು ತೀವ್ರ ತೊಂದರೆ ಅನುಭವಿಸುವಂತಾಗಿದೆ.

ಕಳೆದ ವರ್ಷ ಸಕಾಲದಲ್ಲಿ ಮಳೆಯಾಗದ ಪರಿಣಾಮ ಜಿಲ್ಲಾ ವ್ಯಾಪ್ತಿಯಲ್ಲಿರುವ ಅರ್ಧದಷ್ಟು ಕೆರೆಗಳು ಭರ್ತಿಯಾಗಿಲ್ಲ. ರೈತರ ಜೀವನಾಡಿಯಾದ ಸುವರ್ಣಾವತಿ ಹಾಗೂ ಚಿಕ್ಕಹೊಳೆ ಅವಳಿ ಜಲಾಶಯ ಗಳು ಕೂಡ ಭರ್ತಿಯಾಗಲಿಲ್ಲ. ಇದರ ಪರಿಣಾಮ ಈಗ ನೀರಿಗೆ ತತ್ವಾರ ಉಂಟಾಗಿದೆ.

ಪ್ರಸ್ತುತ ಜಿಲ್ಲೆಯಲ್ಲಿ ಉಷ್ಣಾಂಶ ಹೆಚ್ಚುತ್ತಿದೆ. ಕಳೆದ ಮಾರ್ಚ್ನಲ್ಲಿ ಗರಿಷ್ಠ ಉಷ್ಣಾಂಶ 36.7 ಡಿಗ್ರಿ ಸೆಲ್ಸಿಯಸ್ ದಾಖಲಾಗಿದೆ. ಮಳೆರಾಯ ಕೃಪೆ ತೋರದಿದ್ದರೆ ಬಿಸಿಲಿನ ಝಳ ಮತ್ತಷ್ಟು ಹೆಚ್ಚುವ ಸಾಧ್ಯತೆಯಿದೆ ಎಂಬುದು ನಾಗರಿಕರ ಆತಂಕ.

ಜಿಲ್ಲೆಯಲ್ಲಿ ಶೇ. 49ರಷ್ಟು ಅರಣ್ಯ ಪ್ರದೇಶವಿದೆ. ಮುಂಗಾರು ಒಂದೂವರೆ ತಿಂಗಳು ಮುಂಚಿತವಾಗಿಯೇ ಆರಂಭವಾಗುತ್ತದೆ. ಕಳೆದ ವರ್ಷ ಈ ಅವಧಿಯಲ್ಲಿ ಮಳೆರಾಯ ಕೃಪೆ ತೋರಿದ್ದ. ಜನವರಿಯಿಂದ ಏಪ್ರಿಲ್ ಎರಡನೇ ವಾರದವರೆಗೆ 127.4 ಮಿ.ಮೀ.ನಷ್ಟು ಮಳೆ ಸುರಿದಿತ್ತು. ಆದರೆ, ಪ್ರಸಕ್ತ ವರ್ಷ ಮಳೆ ಬಾರದಿರುವುದು ರೈತರಲ್ಲಿ ಆತಂಕ ಹೆಚ್ಚಿಸಿದೆ. ಜತೆಗೆ, ಬಂಡೀಪುರ ರಾಷ್ಟ್ರೀಯ ಉದ್ಯಾನ ಮತ್ತು ಬಿಳಿಗಿರಿರಂಗನಾಥ ಸ್ವಾಮಿ ಹುಲಿ ರಕ್ಷಿತಾರಣ್ಯದಲ್ಲಿರುವ ವನ್ಯಜೀವಿಗಳಿಗೆ ಕುಡಿಯುವ ನೀರಿಗೆ ತೊಂದರೆ ಎದುರಾಗಿದೆ.

ಈಗ ಶಾಲಾ- ಕಾಲೇಜುಗಳಿಗೆ ಬೇಸಿಗೆ ರಜೆ ಘೋಷಣೆಯಾಗಿದೆ. ಮಕ್ಕಳು ಬಿಸಿಲಿನ ಧಗೆಯಿಂದ ರಕ್ಷಣೆ ಪಡೆಯಲು ಕೆರೆ- ಕಟ್ಟೆಗಳಿಗೆ ತೆರಳಿ ಈಜಾಡುವುದು ಉಂಟು. ಆದರೆ, ನೀರು ಬತ್ತಿ ಹೋಗಿರುವುದು ಮಕ್ಕಳಲ್ಲಿ ನಿರಾಸೆ ಮೂಡಿಸಿದೆ.

ಜಿಲ್ಲೆಯಲ್ಲಿ ಕಳೆದ ಒಂದು ದಶಕದ ಅವಧಿಯಲ್ಲಿ ದಾಖಲಾಗಿರುವ ಉಷ್ಣಾಂಶ ಅವಲೋಕಿಸಿದರೆ ಈ ವರ್ಷ ತಾಪಮಾನ ಹೆಚ್ಚಳವಾಗುವ ಸಂಭವ ಉಂಟು. 2005ರ ಮೇ ತಿಂಗಳಿನಲ್ಲಿ 38.60 ಡಿಗ್ರಿ ಸೆಲ್ಸಿಯಸ್ ಉಷ್ಣಾಂಶ ದಾಖಲಾಗಿತ್ತು. ಜಿಲ್ಲಾ ವ್ಯಾಪ್ತಿ ಕಳೆದ 10 ವರ್ಷದ ಅವಧಿಯಲ್ಲಿ ದಾಖಲಾಗಿರುವುದು ಗರಿಷ್ಠ ಉಷ್ಣಾಂಶ ಇದಾಗಿದೆ ಎಂಬುದು ವಿಶೇಷ.

ಜಿಲ್ಲಾ ಕೇಂದ್ರದ ಪ್ರಾದೇಶಿಕ ರೇಷ್ಮೆ ಸಂಶೋಧನಾ ಕೇಂದ್ರದಲ್ಲಿ ಹವಾಮಾನ ದತ್ತಾಂಶ ದಾಖಲು ಘಟಕ ಸ್ಥಾಪಿಸಲಾಗಿದೆ. ಪ್ರತಿನಿತ್ಯವೂ ಜಿಲ್ಲೆಯಲ್ಲಿ ದಾಖಲಾಗುವ ಉಷ್ಣಾಂಶ, ಗಾಳಿಯ ವೇಗ, ತೇವಾಂಶ, ಮಳೆ ಪ್ರಮಾಣ ಇತ್ಯಾದಿ ಬಗ್ಗೆ ಘಟಕದ ತಾಂತ್ರಿಕ ಸಿಬ್ಬಂದಿ ಮಾಹಿತಿ ಸಂಗ್ರಹಿಸಿ ಬೆಂಗಳೂರಿನ ಹವಾಮಾನ ಕೇಂದ್ರಕ್ಕೆ ರವಾನೆ ಮಾಡುತ್ತಾರೆ.

ಕೇಂದ್ರದ ಅಧಿಕಾರಿಗಳು ನೀಡುವ ಮಾಹಿತಿ ಪ್ರಕಾರ, 2001ರ ಮೇನಲ್ಲಿ ಗರಿಷ್ಠ 35.16 ಡಿಗ್ರಿ ಹಾಗೂ ಡಿಸೆಂಬರ್ನಲ್ಲಿ ಕನಿಷ್ಠ 16 ಡಿಗ್ರಿ ಸೆಲ್ಸಿಯಸ್ ಉಷ್ಣಾಂಶ ದಾಖಲಾಗಿತ್ತು. 2002ರ ಮೇನಲ್ಲಿ ಗರಿಷ್ಠ 37 ಡಿಗ್ರಿ ಉಷ್ಣಾಂಶ ಏರಿಕೆಯಾಗಿತ್ತು. ಅದೇ ವರ್ಷದ ಮಾರ್ಚ್ ನಲ್ಲಿ ಕನಿಷ್ಠ 10 ಡಿಗ್ರಿ ಉಷ್ಣಾಂಶ ದಾಖಲಾಗಿದೆ.

2003ರ ಏಪ್ರಿಲ್ನಲ್ಲಿ ಗರಿಷ್ಠ 38 ಡಿಗ್ರಿ ಹಾಗೂ ನವೆಂಬರ್ನಲ್ಲಿ ಕನಿಷ್ಠ 19 ಡಿಗ್ರಿ ಉಷ್ಣಾಂಶ ದಾಖಲಾಗಿದೆ. 2004ರ ಏಪ್ರಿಲ್ನಲ್ಲಿ ಗರಿಷ್ಠ 37.5 ಡಿಗ್ರಿ ಹಾಗೂ ನವೆಂಬರ್ನಲ್ಲಿ ಕನಿಷ್ಠ 19 ಡಿಗ್ರಿ ಉಷ್ಣಾಂಶವಿದೆ.

2006ರ ಮೇ ತಿಂಗಳಿನಲ್ಲಿ 37.5 ಡಿಗ್ರಿ ಹಾಗೂ ಫೆಬ್ರುವರಿಯಲ್ಲಿ 8 ಡಿಗ್ರಿ ಉಷ್ಣಾಂಶ ದಾಖಲಾಗಿದೆ. 2007ರ ಮಾರ್ಚ್ನಲ್ಲಿ ಗರಿಷ್ಠ 37 ಡಿಗ್ರಿ ಹಾಗೂ ನವೆಂಬರ್ನಲ್ಲಿ ಕನಿಷ್ಠ 7.60 ಡಿಗ್ರಿ ಉಷ್ಣಾಂಶ ದಾಖಲಾಗಿದೆ. 2008ರಲ್ಲಿ ಗರಿಷ್ಠ 37.2 ಡಿಗ್ರಿ ಹಾಗೂ ಮಾರ್ಚ್ನಲ್ಲಿ 7 ಡಿಗ್ರಿ ಕನಿಷ್ಠ ಉಷ್ಣಾಂಶ ದಾಖಲಾಗಿರುವುದು ವಿಶೇಷ.

2009ರ ಏಪ್ರಿಲ್ನಲ್ಲಿ ಗರಿಷ್ಠ 37.5 ಡಿಗ್ರಿ ಹಾಗೂ ಜನವರಿಯಲ್ಲಿ ಕನಿಷ್ಠ 7 ಡಿಗ್ರಿ ಉಷ್ಣಾಂಶ ದಾಖಲಾಗಿದೆ. 2010ರ ಏಪ್ರಿಲ್ನಲ್ಲಿ ಗರಿಷ್ಠ 36.49 ಡಿಗ್ರಿ ಹಾಗೂ ಜನವರಿಯಲ್ಲಿ ಕನಿಷ್ಠ 14.91 ಡಿಗ್ರಿ ಉಷ್ಣಾಂಶ ದಾಖಲಾಗಿದೆ.

2011ರಲ್ಲೂ ಗರಿಷ್ಠ ಉಷ್ಣಾಂಶ 35 ಡಿಗ್ರಿ ಸೆಲ್ಸಿಯಸ್ ದಾಟಿತ್ತು. ಡಿಸೆಂಬರ್ನಲ್ಲಿ ಕನಿಷ್ಠ 6.50 ಡಿಗ್ರಿ ಉಷ್ಣಾಂಶ ದಾಖಲಾಗಿ ನಾಗರಿಕರು ತತ್ತರಿಸಿದ್ದರು. ಇದು ಒಂದು ದಶಕದ ಅವಧಿಯಲ್ಲಿ ದಾಖಲಾಗಿರುವ ಕನಿಷ್ಠ ಉಷ್ಣಾಂಶ. ಪ್ರಸಕ್ತ ವರ್ಷ ಇನ್ನೂ ಮಳೆ ಸುರಿದಿಲ್ಲ. ಹೀಗಾಗಿ, ಏಪ್ರಿಲ್ ಮತ್ತು ಮೇ ತಿಂಗಳಲ್ಲಿ ಉಷ್ಣಾಂಶ ಏರಿಕೆಯಾಗಬಹುದು ಎಂಬುದು ಹವಾಮಾನ ತಜ್ಞರ ಲೆಕ್ಕಾಚಾರ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.