ಮಂಗಳವಾರ, ಮಾರ್ಚ್ 31, 2020
19 °C

ಕೇಂದ್ರೀಯ ವಿದ್ಯಾಲಯ: ಹೆಚ್ಚುವರಿ ತರಗತಿ ಮಂಜೂರು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಚಾಮರಾಜನಗರ: ಪಟ್ಟಣದ ಮಾದಾಪುರ ಬಳಿಯ ಕೇಂದ್ರಿಯ ವಿದ್ಯಾಲಯದಲ್ಲಿ  2018–19ನೇ ಸಾಲಿನಿಂದಲೇ ಜಾರಿಗೆ ಬರುವಂತೆ 1ರಿಂದ 5ನೇ ತರಗತಿವರೆಗೆ (ಪ್ರತಿ ತರಗತಿಯಲ್ಲಿ 40 ವಿದ್ಯಾರ್ಥಿಗಳು) ಹೆಚ್ಚುವರಿ ತರಗತಿಗೆ ಮಂಜೂರಾತಿ ನೀಡಿ ನವದೆಹಲಿಯ ಕೇಂದ್ರೀಯ ವಿದ್ಯಾಲಯ ಸಂಘಟನೆ ಆದೇಶ ಹೊರಡಿಸಿದೆ. 

ಇದರಿಂದಾಗಿ ಒಂದು ತರಗತಿಗೆ 80 ಮಕ್ಕಳು ದಾಖಲು ಮಾಡಿಕೊಳ್ಳಲು ಅವಕಾಶ ಸಿಕ್ಕಂತಾಗಿದೆ. 

ಇತ್ತೀಚೆಗೆ ಕೇಂದ್ರಿಯ ವಿದ್ಯಾಲಯದ ನೂತನ ಕಟ್ಟಡದ ಉದ್ಘಾಟನೆ ವೇಳೆ ಹೆಚ್ಚುವರಿ ತರಗತಿಗೆ ಮಂಜೂರು ಮಾಡುವಂತೆ ಸಂಸದ ಆರ್‌‌.ಧ್ರುವನಾರಾಯಣ ಅವರು ಕೇಂದ್ರ ಸಚಿವರಾದ ಅನಂತ್ ಕುಮಾರ್‌ ಅವರಿಗೆ ಮನವಿ ಮಾಡಿದ್ದರು. ನವದೆಹಲಿಯಲ್ಲಿರುವ ಕೇಂದ್ರಿಯ ವಿದ್ಯಾಲಯದ ಆಯುಕ್ತರಿಗೂ ಅವರು ಮನವಿ ಮಾಡಿದ್ದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು