ಶನಿವಾರ, ಮಾರ್ಚ್ 6, 2021
26 °C

ಲೋಕ ಅದಾಲತ್: 335 ಪ್ರಕರಣ ಇತ್ಯರ್ಥ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಗೌರಿಬಿದನೂರು: ತಾಲ್ಲೂಕು ಕಾನೂನು ಸೇವಾ ಸಮಿತಿ ಮತ್ತು ವಕೀಲರ ಸಂಘದಿಂದ ನ್ಯಾಯಾಲಯ ಸಂಕೀರ್ಣದಲ್ಲಿ ಬೃಹತ್ ಲೋಕ ಅದಾಲತ್ ಆಯೋಜಿಸಲಾಗಿತ್ತು.

ಹಿರಿಯ ಶ್ರೇಣಿ ನ್ಯಾಯಾಧೀಶೆ ರೇಣುಕಾ ದೇವಿದಾಸ್ ರಾಯ್ಕರ್ ಮಾತನಾಡಿ, ಹೈಕೋರ್ಟ್‌ ಆದೇಶದಂತೆ ರಾಜ್ಯ ವ್ಯಾಪ್ತಿ ಲೋಕ ಅದಾಲತ್ ನಡೆಸಲಾಗುತ್ತಿದೆ. ಇಲ್ಲಿನ ಮೂರು ನ್ಯಾಯಲಯಗಳಿಂದ ಸುಮಾರು 1,500 ಪ್ರಕರಣ ದಾಖಲಾಗಿದ್ದವು. ಇದರಲ್ಲಿ ರಾಜೀ ಸಂಧಾನದಲ್ಲಿ ಸುಮಾರು 335 ಪ್ರಕರಣ ಇತ್ಯರ್ಥ ಮಾಡಲಾಯಿತು ಎಂದರು.

ರಾಜೀ ಸಂಧಾನದಿಂದ ಮಾನವ ಸಂಬಂಧಗಳು ಬೆಸೆಯುತ್ತವೆ. ಸಮಯ, ಹಣ, ಅಲೆದಾಟದಿಂದ ಕಕ್ಷಿದಾರರಿಗೆ ಮುಕ್ತಿ ದೊರೆಯುತ್ತದೆ ಎಂದು ಹೇಳಿದರು.

ಅದಾಲತ್‌ನಲ್ಲಿ ಬ್ಯಾಂಕ್ ಪ್ರಕರಣಗಳು, ವ್ಯಾಜ್ಯ ಪೂರ್ವ ಪ್ರಕರಣಗಳು, ಜನನ– ನೋಂದಣಿ ಪ್ರಕರಣಗಳು, ಚೆಕ್ ಬೌನ್ಸ್ ಪ್ರಕರಣ, ಇನ್ನಿತರೆ ಪ್ರಕರಣಗಳಿಂದ ಸುಮಾರು ₹ 49 ಲಕ್ಷ ಸಂಗ್ರಹ ಮಾಡಲಾಯಿತು. ಜೊತೆಗೆ ಗಂಡ, ಹೆಂಡತಿಗೆ ಸಂಬಂಧಿಸಿದ ವಿಚ್ಛೇದನ ಪ್ರಕರಣಗಳು ಸಂಧಾನದಿಂದ ಬಗೆಹರಿದಿದ್ದು, ಅವರ ಬಾಳಿಗೆ ಹೊಸ ಬೆಳಕು ನೀಡಲಾಯಿತು ಎಂದು ಹೇಳಿದರು.

ಪ್ರಧಾನ ಸಿವಿಲ್ ನ್ಯಾಯಧೀಶೆ ಆರ್. ಪವಿತ್ರಾ, ತಹಶೀಲ್ದಾರ್ ಎಂ. ರಾಜಣ್ಣ, ವಕೀಲರ ಸಂಘದ ಅಧ್ಯಕ್ಷ ವಿ.ಸಿ. ಗಂಗಯ್ಯ, ಕಾರ್ಯದರ್ಶಿ ಬಿ. ಲಿಂಗಪ್ಪ. ಉಪಾಧ್ಯಕ್ಷ ಧನಂಜಯ್, ರಾಜೀ ಸಂಧಾನಕಾರರಾದ ನರೇಶ್, ರಮೇಶ್ ನಾಯಕ್, ವಕೀಲರಾದ ಆದಿನಾರಾಯಣಗೌಡ, ನಾಗರಾಜು, ಟಿ.ಕೆ. ವಿಜಯರಾಘವ. ವಿ. ಗೋಪಾಲ್, ಎಚ್.ಎಲ್. ವೆಂಕಟೇಶ್, ದಿನೇಶ್, ಕೋಮಲಾ ಹಾಜರಿದ್ದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.