ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಿಕ್ಕಬಳ್ಳಾಪುರ: ಇಂದಿನಿಂದ 6ರಿಂದ 8ನೇ ತರಗತಿ ಆರಂಭ

Last Updated 6 ಸೆಪ್ಟೆಂಬರ್ 2021, 8:08 IST
ಅಕ್ಷರ ಗಾತ್ರ

ಚಿಕ್ಕಬಳ್ಳಾಪುರ: ರಾಜ್ಯದಾದ್ಯಂತ ಸೋಮವಾರ (ಸೆ. 6)ದಿಂದ 6ರಿಂದ 8ನೇ ತರಗತಿಗಳು ಆರಂಭವಾಗಲಿವೆ. ಈ ಹಿನ್ನೆಲೆಯಲ್ಲಿ ಜಿಲ್ಲೆಯಲ್ಲಿಯೂ ತರ ಗತಿಗಳ ಆರಂಭಕ್ಕೆ ಶಾಲೆಗಳು ಸಜ್ಜಾಗಿವೆ.

ಈಗಾಗಲೇ 9 ಮತ್ತು 10ನೇ ತರಗತಿಗಳು ಮಧ್ಯಾಹ್ನದವರೆಗೆ ನಡೆಯುತ್ತಿವೆ. ಅಂತಹ ಶಾಲೆಗಳಲ್ಲಿ ಕೊಠಡಿಗಳ ಕೊರತೆ ಇದ್ದರೆ 8ನೇ ತರಗತಿಯನ್ನು ಮಧ್ಯಾಹ್ನ ನಡೆಸಲು ಇಲಾಖೆ ಮುಂದಾಗಿದೆ. ಜಿಲ್ಲೆಯಲ್ಲಿ ಶಾಲೆ ಆರಂಭವಾಗು ಕಡೆಗಳಲ್ಲಿ ಕೊಠಡಿಗಳನ್ನು ಸ್ವಚ್ಛಗೊಳಿಸಿ ಸ್ಯಾನಿಟೈಸ್ ಸಹ ಮಾಡಲಾಗಿದೆ.

‘ಶಾಲೆಗಳಿಗೆ ಈಗಾಗಲೇ ಶಿಕ್ಷಕರು ಬರುತ್ತಿದ್ದರು. ಆ ಕಾರಣ ತರಗತಿ ಆರಂಭ ಅಂತಹ ಹೆಚ್ಚಿನ ವ್ಯತ್ಯಾಸವೇನೂ ಆಗುವುದಿಲ್ಲ. ಈಗಾಗಲೇ ಕೊಠಡಿಗಳನ್ನು ಸ್ವಚ್ಛಗೊಳಿಸಲಾಗಿದೆ’ ಎಂದು ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕ ಜಯರಾಮರೆಡ್ಡಿ ತಿಳಿಸಿದ್ದಾರೆ.

‘ಪ್ರತಿ ಕೊಠಡಿಯಲ್ಲಿ 25 ವಿದ್ಯಾರ್ಥಿಗಳನ್ನು ಕೂರಿಸಲಾಗುವುದು. 6 ಮತ್ತು 7ನೇ ತರಗತಿಗಳಿಗೆ ಆರಂಭದಲ್ಲಿ ಮಕ್ಕಳು ಕಡಿಮೆ ಸಂಖ್ಯೆಯಲ್ಲಿ ಬರುವ ಸಾಧ್ಯತೆ ಇದೆ. ಹಂತ ಹಂತವಾಗಿ ಹೆಚ್ಚಬಹುದು. 6 ಮತ್ತು 7ನೇ ತರಗತಿಗಳಿಗೆ ಕೊಠಡಿಗಳ ಸಮಸ್ಯೆ ಎದುರಾಗುವುದಿಲ್ಲ. ಅಂತಹ ಕಡೆಗಳಲ್ಲಿ ಬೆಳಿಗ್ಗೆ ಶಾಲೆಗಳು
ನಡೆಯುತ್ತವೆ’ ಎಂದಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT