ಶಿಡ್ಲಘಟ್ಟ: ತಾಲ್ಲೂಕಿನ ಗೆಜ್ಜೆಗಾನಹಳ್ಳಿ ಗ್ರಾಮದಲ್ಲಿ ವಿಜಯನಗರ ಸಾಮ್ರಾಜ್ಯದ ಸಂಸ್ಥಾಪಕರಾದ ಹಕ್ಕ–ಬುಕ್ಕರ ಕಾಲದ ಅಪ್ರಕಟಿತ ತಮಿಳು ಶಾಸನವನ್ನು ಶಾಸನ ತಜ್ಞರಾದ ಕೆ. ಧನಪಾಲ್ ಮತ್ತು ಅಪ್ಪೇಗೌಡನಹಳ್ಳಿ ಎ.ಎಂ. ತ್ಯಾಗರಾಜ್ ಪತ್ತೆ ಹಚ್ಚಿದ್ದಾರೆ.

ಗೆಜ್ಜಿಗಾನಹಳ್ಳಿ ಗ್ರಾಮದ ಬೇಲಿಯಲ್ಲಿ ಹುದುಗಿಹೋಗಿದ್ದ ಶಾಸನವನ್ನು ಗೊರಮಡುಗು ರಾಜಣ್ಣ ಮತ್ತು ತಂಡದವರು ಗ್ರಾಮದ ವೀರಾಂಜನೇಯ ದೇವಸ್ಥಾನದ ಬಳಿ ಇರಿಸಿದ್ದಾರೆ. ಈ ಶಿಲಾ ಶಾಸನದ ಎರಡೂ ಬದಿಯಲ್ಲಿ ತಮಿಳು ಭಾಷೆಯಲ್ಲಿ ಕೆತ್ತನೆ ಮಾಡಲಾಗಿದೆ.

ಶಾಸನದ ಪಠ್ಯ: ‘ವಿಜಯನಗರ ಸಾಮ್ರಾಜ್ಯದ ಆರಂಭಿಕ ಕಾಲದ ವೀರ ಹರಿಯಪ್ಪ ಒಡೆಯರು ಮತ್ತು ಬುಕ್ಕಣ್ಣ ಒಡೆಯರು ಒಟ್ಟಿಗೆ ಸಾಮ್ರಾಜ್ಯವನ್ನು ಆಳುವ ಸಮಯದ ಈ ತಮಿಳು ಶಾಸನದಲ್ಲಿ ಕ್ರಿ.ಶಕ 1348ರ ಜುಲೈ 7 ಎಂದು ಉಲ್ಲೇಖಿಸಲಾಗಿದೆ. ಈ ಕಾಲಮಾನದಲ್ಲಿ ಈ ಪ್ರಾಂತ್ಯವು ಅಂಬಡಕ್ಕಿ ನಾಡೆಂದು ಪ್ರಸಿದ್ಧಿ ಪಡೆದಿತ್ತು. ಈ ಪ್ರಾಂತ್ಯದ ಸಾಮಂತನಾಗಿ ನರಲೋಕ ಗಂಡ ಮೈಲೇಯ ನಾಯಕ ಆಳುವ ಸಮಯದಲ್ಲಿ ಅಂಬಡಕ್ಕಿ ನಾಡಿನ ಆಳ್ವಾರರು ಆದ ಪರಪ್ಪೆಸಿಯರ್, ಸೊಕ್ಕಿತಿಯರ್, ಮಚ್ಚಿದೇವನ್, ಕಣ್ಣವನ್, ಸಾನಂದೈ ಮತ್ತು ಇತರರು ಸೇರಿ ರಾಮಣ್ಣನ ಮಗ ನೀಲಪ್ಪನಿಗೆ ಕಚ್ಛೆಗಾನಪಲ್ಲಿ (ಈಗಿನ ಗೆಜ್ಜೆಗಾನಹಳ್ಳಿ) ಮತ್ತು ಮರುಗೈಪಲ್ಲಿಯ ಕೆರೆ ಕೆಳಗೆ ಹೊಲ, ಗದ್ದೆ ಮತ್ತು ಜಮೀನಿನ ಒಂದುವರೆ ಭಾಗವನ್ನು ದಾನ ನೀಡಿದ್ದಾರೆ ಎಂದು ಶಾಸನದಲ್ಲಿ ತಿಳಿಸಲಾಗಿದೆ.

ಈ ಸಂದರ್ಭದಲ್ಲಿ ಗೆಜ್ಜಿಗಾನಹಳ್ಳಿ ಗ್ರಾಮದ ರಾಜಣ್ಣ, ಚಂದ್ರಣ್ಣ, ಮುರಳಿ, ಶ್ರೀನಿವಾಸ, ಆನಂದ, ಮುನಿನಾರಾಯಣಪ್ಪ, ಮುನಿಗಂಗಪ್ಪ, ಮಂಜುನಾಥ, ನರಸಿಂಹಮೂರ್ತಿ, ನರಸಿಂಹಪ್ಪ, ದ್ಯಾವಪ್ಪ, ಅಶೋಕ ಹಾಜರಿದ್ದರು.

ತಮಿಳು ಭಾಷೆ ಶಾಸನ ಬಂದಿದ್ದು ಹೇಗೆ: ಹತ್ತನೇ ಶತಮಾನದ ಆರಂಭದಲ್ಲಿ ಕನ್ನಡ ನಾಡಿನ ದಕ್ಷಿಣ ಭಾಗವನ್ನು ಚೋಳರು ಗೆದ್ದುಕೊಂಡರು. ಅವರು ಇಲ್ಲಿ ಆಳ್ವಿಕೆ ಮಾಡಲು ತಮಿಳು ಅಧಿಕಾರಿಗಳನ್ನೇ ನೇಮಿಸಿದಿದ್ದರು. ಶಿಲ್ಪಿಗಳು, ಲಿಪಿಕಾರರ ಆದಿಯಾಗಿ ಪ್ರತಿ ಸ್ಥಾನಕ್ಕೂ ತಮಿಳರನ್ನೇ ನೇಮಿಸಲಾಗುತ್ತಿತ್ತು. ಹೊಯ್ಸಳರ ಆಳ್ವಿಕೆಯ ಕಾಲದಲ್ಲಿ ಮತ್ತು ನಂತರದ ವಿಜಯನಗರದ ಆರಂಭದ ಕಾಲದವರೆಗೆ ಇಲ್ಲಿ ತಮಿಳು ವ್ಯಾವಹಾರಿಕ ಭಾಷೆಯಾಗಿತ್ತು.

Cut-off box - ಏನಿದು ಅಂಬಡಕ್ಕಿ ನಾಡು 13ನೇ ಶತಮಾನದಲ್ಲಿ ಹೊಯ್ಸಳ ಸಾಮ್ರಾಜ್ಯವನ್ನು ಸೋಮೇಶ್ವರ ತನ್ನ ಇಬ್ಬರು ಮಕ್ಕಳಿಗೆ ಹಂಚಿರುತ್ತಾನೆ. ಆಗ ಕನ್ನಡನಾಡು ನರಸಿಂಹನಿಗೆ ಮತ್ತು ತಮಿಳುನಾಡು ರಾಮನಾಥನ ಪಾಲಾಗುತ್ತದೆ. ರಾಮನಾಥ ಸದಾಕಾಲ ತನ್ನ ಸೋದರನ ರಾಜ್ಯದ ಮೇಲೆ ಆಕ್ರಮಣ ಮಾಡುತ್ತಿದ್ದ. ಆಗ ಆತ ಕೈವಾರನಾಡನ್ನು ಗೆದ್ದು ಅದರ ಒಂದು ದೊಡ್ಡ ಭಾಗಕ್ಕೆ ‘ಅಂಬಡಕ್ಕಿ ನಾಡು’ ಎಂದು ನಾಮಕರಣ ಮಾಡಿದ್ದ. ಅಂಬಡಕ್ಕಿ ನಾಡಿನ ಗಿರಿದುರ್ಗವು ಅಂಬಾಜಿದುರ್ಗ ಆಗಿತ್ತು. ಆಡಳಿತ ಕೇಂದ್ರ ಆ ಬೆಟ್ಟದ ತಪ್ಪಲಿನಲ್ಲಿ ಇರುವ ಉಪ್ಪಾರಪೇಟೆ ಆಗಿತ್ತು. ಅಂಬಡಕ್ಕಿ ನಾಡು ಈಗಿನ ದೇವನಹಳ್ಳಿ ತಾಲ್ಲೂಕಿನ ವಿಜಯಪುರದಿಂದ ಹಿಡಿದು ಶಿಡ್ಲಘಟ್ಟ ತಾಲ್ಲೂಕಿನ ಗುಡಿಹಳ್ಳಿವರೆಗೆ ವ್ಯಾಪಿಸಿತ್ತು. ಡಿ.ಎನ್.ಸುದರ್ಶನರೆಡ್ಡಿ ಶಾಸನ ತಜ್ಞ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.