ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಶ್ವತ್ಥನಾರಾಯಣರೆಡ್ಡಿ 10ನೇ ವರ್ಧಂತಿ

ಪ್ರಜಾ ಸಂಘರ್ಷ ಸಮಿತಿಯಿಂದ ಕಾರ್ಯಕ್ರಮ
Last Updated 3 ಅಕ್ಟೋಬರ್ 2020, 15:41 IST
ಅಕ್ಷರ ಗಾತ್ರ

ಬಾಗೇಪಲ್ಲಿ: ಕೃಷಿ ಕೂಲಿಕಾರ್ಮಿಕರ ವಿರೋಧಿ ನೀತಿಗಳನ್ನು ಅನುಸರಿಸುತ್ತಿರುವ ಸರ್ಕಾರದ ನಡೆ ತೀವ್ರವಾದ ಆತಂಕ ಸಂಘರ್ಷಗಳ ಹೋರಾಟ ನಡೆಸಬೇಕಾದ ಅನಿವಾರ್ಯತೆ ಇದೆ ಎಂದು ಪ್ರಜಾ ಸಂಘರ್ಷ ಸಮಿತಿ ಜಿಲ್ಲಾ ಸಂಚಾಲಕ ಜಿ.ವಿ.ಶ್ರೀರಾಮರೆಡ್ಡಿ ಕರೆ ನೀಡಿದರು.

‘ಪಟ್ಟಣದ ಅಂಬೇಡ್ಕರ್ ಭವನದಲ್ಲಿ ಪ್ರಜಾ ಸಂಘರ್ಷ ಸಮಿತಿಯಿಂದ ಶುಕ್ರವಾರ ಹಮ್ಮಿಕೊಂಡಿದ್ದ ರೈತ ಹೋರಾಟಗಾರ ಜಿ.ವಿ.ಅಶ್ವತ್ಥನಾರಾಯಣರೆಡ್ಡಿರವರ 10ನೇ ವರ್ಧಂತಿ ಆಚರಣೆಯಲ್ಲಿ ಮಾತನಾಡಿದರು.

‘ಅವಿಭಜಿತ ಜಿಲ್ಲೆಗಳಲ್ಲಿ 1972ರಲ್ಲಿ ಬಂಜರು ಭೂಮಿಗಳನ್ನು ರೈತರಿಗೆ ವಿತರಿಸಬೇಕು ಎಂದು ಸಾವಿರಾರು ರೈತರು ಹೋರಾಟ ನಡೆಸಿದ್ದರು. 3,600 ಮಂದಿ ಜೈಲಿಗೆ ಅಶ್ವತ್ಥನಾರಾಯಣರೆಡ್ಡಿ ಒಬ್ಬರಾಗಿದ್ದಾರೆ. ವಿದ್ಯಾರ್ಥಿ, ಯುವಜನ, ಕೃಷಿ ಕೂಲಿ ಕಾರ್ಮಿಕರ ಪರ ಹೋರಾಟಗಳಲ್ಲಿ ಮುಂಚೂಣಿಯಲ್ಲಿದ್ದರು’ ಎಂದರು.

‘ದೇಶದಲ್ಲಿ ಕೃಷಿಕರ ಮೇಲೆ ಹಾಗೂ ಕೋಮುವಾದಿಗಳಿಂದ ನಿರಂತರವಾಗಿ ದಾಳಿ ನಡೆಯುತ್ತಿದೆ. ಕೇಸರಿಕರಣ ಮಾಡುವ ಹುನ್ನಾರ ನಡೆಯುತ್ತಿದೆ. ದೇಶದಲ್ಲಿ 35 ಕೋಟಿ ಮಂದಿ ನಿರುದ್ಯೋಗಿಗಳು ಇದ್ದಾರೆ. ಕೊರೊನಾ ಹೆಸರಿನಲ್ಲಿಸರ್ಕಾರಗಳು ಕೋಟ್ಯಂತರ ಹಣ ಲೂಟಿ ಹೊಡೆಯುತ್ತಿದೆ’ ಎಂದರು.

ವಕೀಲ ಬಿ.ನಾರಾಯಣರೆಡ್ಡಿ ಮಾತನಾಡಿ, ‘ಕೋಲಾರ, ಚಿಕ್ಕಬಳ್ಳಾಪುರ ಜಿಲ್ಲೆಗಳಿಗೆ ಸಾಮಾಜಿಕ, ರಾಜಕೀಯದ ಹೋರಾಟದಹಿನ್ನೆಲೆಗಳು ಇದೆ. ರೈತ ನಾಯಕ ಅಶ್ವತ್ಥನಾರಾಯಣರೆಡ್ಡಿರವರು ವಿದ್ಯಾರ್ಥಿ, ರೈತ ಚಳವಳಿಗಳಲ್ಲಿ ಭಾಗವಹಿಸಿದ್ದಾರೆ. ಅನೇಕ ಹೋರಾಟಗಾರರಿಗೆ ಶಕ್ತಿ ತುಂಬಿದ್ದಾರೆ’ ಎಂದರು.

ಕಾರ್ಯಕ್ರಮದಲ್ಲಿ ಪ್ರಜಾ ಸಂಘರ್ಷ ಸಮಿತಿ ಜಿಲ್ಲಾ ಸಂಘಟನಾ ಸಂಚಾಲಕ ಚನ್ನರಾಯಪ್ಪ, ಮುಖಂಡರಾದ ಆರ್.ಎನ್.ರಾಜು, ಜಿ.ಎಂ.ರಾಮಕೃಷ್ಣಪ್ಪ, ರಾಮಾಂಜಿ, ವೆಂಕಟೇಶ್, ಆರ್.ಚಂದ್ರಶೇಖರರೆಡ್ಡಿ, ಭಾಷಾಸಾಬ್, ಎಸ್.ಎನ್.ಚಂದ್ರಶೇಖರರೆಡ್ಡಿ, ಎಲ್.ವೆಂಕಟೇಶ್, ಜುಬೇರ್ ಅಹಮದ್, ನರಸಿಂಹಪ್ಪ, ಅಶ್ವತ್ಥರೆಡ್ಡಿ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT