ಗುರುವಾರ, 2 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೀದಿ ಬದಿಗಳಲ್ಲಿ ಬೆಳ್ಳಂಬೆಳಿಗ್ಗೆಯೇ ಸೊಗಡು: ಶಿವರಾತ್ರಿವರೆಗೂ ಆವರೆ ಫಸಲು

ಮೋಡ ಕವಿದ ವಾತಾವರಣ, ತುಂತುರು ಮಳೆಯಿಂದ ಹೂವು ಕಳಚುವ ಆತಂಕ
Last Updated 27 ಡಿಸೆಂಬರ್ 2022, 5:38 IST
ಅಕ್ಷರ ಗಾತ್ರ

ಗೌರಿಬಿದನೂರು: ನಗರದ ಪ್ರಮುಖ ಬೀದಿ ಬದಿಗಳಲ್ಲಿ ಬೆಳ್ಳಂಬೆಳಿಗ್ಗೆಯೇ ಸೊಗಡು ಅವರೆ ಘಮಲಿನೊಂದಿಗೆ ವ್ಯಾಪಾರ ಆರಂಭವಾಗುತ್ತದೆ. ಇದರಿಂದಾಗಿ ಅವರೆಕಾಯಿ ಪ್ರಿಯರಿಗೆ ಸುಗ್ಗಿಯೋ‌ ಸುಗ್ಗಿ.

ಗ್ರಾಮೀಣ ಭಾಗದ ರೈತರು ತಮ್ಮ ಜಮೀನಿನಲ್ಲಿನ ಬೆಳೆದ ರಾಗಿ, ಮುಸುಕಿನ ಜೋಳ,‌ ನೆಲಗಡಲೆ ಮಧ್ಯೆ ಅವರೆ, ಅಲಸಂದೆ, ತೊಗರಿ ಬೆಳೆಯುವುದು ವಾಡಿಕೆ. ಕೆಲವೆಡೆ ಡಿಸೆಂಬರ್ ತಿಂಗಳಿಗೆ ಅವರೆ ಕಾಯಿ‌ ಸಿಗುವಂತೆ ಜಮೀನಿನಲ್ಲಿ ಪ್ರತ್ಯೇಕವಾಗಿ ಬೆಳೆದಿರುತ್ತಾರೆ.

ನವೆಂಬರ್ ತಿಂಗಳ ಆರಂಭದ ದಿನಗಳಲ್ಲಿ ಪ್ರತಿ ಕೆ.ಜಿ ಅವರೆ ಕಾಯಿ ಮಾರುಕಟ್ಟೆಯಲ್ಲಿ ₹100 ಮಾರಾಟ ಮಾಡುತ್ತಿದ್ದರು. ಆದರೆ, ಇದೀಗ ಅದರ ಬೆಲೆ ₹35-40ಗೆ
ಇಳಿದಿದೆ.

ಸೊಗಡು‌ ಅವರೆ ಮಾರುಕಟ್ಟೆಗೆ ಆಗಮಿಸುತ್ತಿದ್ದಂತೆ ಇತರ ತರಕಾರಿ ಮತ್ತು ಸೊಪ್ಪಿನ ಬೆಲೆಯಲ್ಲಿ ಇಳಿಕೆಯಾಗುವುದಲ್ಲದೆ ಜನರು ಒಂದೆರಡು ತಿಂಗಳ ಕಾಲ ಸೊಗಡು ಅವರೆ ಸ್ವಾದದಲ್ಲೇ ಕಾಲ ಕಳೆಯುತ್ತಾರೆ.

ಸೊಗಡು‌ ಅವರೆ ಘಮಲು‌ ಷಷ್ಠಿ ಹಬ್ಬದಿಂದ ಆರಂಭವಾಗಿ ಶಿವರಾತ್ರಿವರೆಗೂ ಹರಡಲಿದೆ. ಈ ಮಧ್ಯೆ ವಾತಾವರಣದಲ್ಲಿ ವ್ಯತ್ಯಾಸ ‌ಉಂಟಾಗಿ ಮೋಡ ಕವಿದ ವಾತಾವರಣ, ತುಂತುರು ‌ಹನಿ ಮಳೆ ಬಿದ್ದಲ್ಲಿ ಅವರೆ ಬಳ್ಳಿಯಲ್ಲಿ ಹೂವು ಕಳಚಿ ಬೀಳುತ್ತದೆ. ಇದರಿಂದಾಗಿ ರೈತರಿಗೆ ನಿರೀಕ್ಷಿತ ಮಟ್ಟದಲ್ಲಿ ಅವರೆ ಫಸಲು ಕೈ ಸೇರುವುದಿಲ್ಲ.

ಸ್ಥಳೀಯವಾಗಿ ತಾಲ್ಲೂಕಿನ ವಿವಿಧೆಡೆಗಳಿಂದ ಮಾರುಕಟ್ಟೆಗೆ ಬರುವ ಸೊಗಡು ಅವರೆ ಹಣ್ಣು, ತರಕಾರಿ, ಕಡಲೆಕಾಯಿ ಸೇರಿ
ದಂತೆ ಇತರ ವಸ್ತುಗಳನ್ನು ನಿತ್ಯ ಬೀದಿ ಬದಿಯಲ್ಲಿ ವರ್ತಕರು
ಮಾರುತ್ತಾರೆ.

ಬೆಳಿಗ್ಗೆಯಿಂದ ಸಂಜೆವರೆಗೂ ಮಾರಾಟ ಮಾಡಿದರೆ ಅಸಲು ಬಿಟ್ಟು ಆ ದಿನದ ಕೂಲಿ ಹಣ ಕೈಸೇರುತ್ತದೆ. ಆದರೂ, ಕೂಡ ಸೂಕ್ತ ಮಾರುಕಟ್ಟೆ ವ್ಯವಸ್ಥೆ ಇಲ್ಲದೆ ನಗರದ ಅಂಗಡಿ ಮುಂಭಾಗದಲ್ಲಿ, ಬೀದಿ ಬದಿಗಳಲ್ಲಿಯೇ ವ್ಯಾಪಾರ ಮಾಡುವ ಪರಿಸ್ಥಿತಿ ನಿರ್ಮಾಣವಾಗಿದೆ. ವಾತಾವರಣದಲ್ಲಿ ಏರುಪೇರಾಗುತ್ತಿರುವ ಕಾರಣ
ನಿರೀಕ್ಷಿತ ಮಟ್ಟದಲ್ಲಿ ಅವರೆ ಕಾಯಿ ವ್ಯಾಪಾರ ಸಾಗುತ್ತಿಲ್ಲ ಎನ್ನುತ್ತಾರೆ ಬೀದಿ ಬದಿಯ ವ್ಯಾಪಾರಿ
ಲಕ್ಷ್ಮಮ್ಮ.

ಕೆಲಸವಿಲ್ಲವೆಂದು ಸುಮ್ಮನೆ ಕೂರದೆ ಮಾರುಕಟ್ಟೆಯಲ್ಲಿ ದಿನಕ್ಕೆ ₹50ಕೆ.ಜಿ ಸೊಗಡು ಅವರೆಕಾಯಿ ತಂದು ದಿನವಿಡೀ ಮಾರಾಟ ಮಾಡಿ ಶ್ರಮಕ್ಕೆ ತಕ್ಕಂತೆ ದುಡಿಮೆ ಮಾಡುವ ಅವಕಾಶ ಸಿಕ್ಕಿದೆ. ಇದರಿಂದಾಗಿ ಬರುವ
ಲಾಭದಲ್ಲಿ ಬದುಕು ಸಾಗಿಸಲು ಸಹಕಾರಿಯಾಗಿದೆ ಎನ್ನುತ್ತಾರೆ ಯುವಕ ನವೀನ್ ಕುಮಾರ್.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT