ಬಾಗೇಪಲ್ಲಿ: ಪಟ್ಟಣದ ನ್ಯಾಷನಲ್ ಪದವಿ ಪೂರ್ವ ಕಾಲೇಜಿನಲ್ಲಿ ಈಚೆಗೆ ಗುರುವಂದನಾ ಮತ್ತು ಕಾಲೇಜು ವಾರ್ಷಿಕೋತ್ಸವ ಹಮ್ಮಿಕೊಳ್ಳಲಾಗಿತ್ತು.

ಕಾಲೇಜುಗಳಲ್ಲಿ ಕಾರ್ಯನಿರ್ವಹಿಸಿದ ಶಿಕ್ಷಕ, ಶಿಕ್ಷಕಿಯರನ್ನು ಗೌರವಿಸಲಾಯಿತು. ವಿದ್ಯಾರ್ಥಿಗಳು ನಡೆಸಿಕೊಟ್ಟ ಭರತನಾಟ್ಯ, ಸಾಂಸ್ಕೃತಿಕ ಕಾರ್ಯಕ್ರಮ ಸಭಿಕರನ್ನು ರಂಜಿಸಿತು.

ನ್ಯಾಷನಲ್ ಎಜುಕೇಷನ್ ಸೊಸೈಟಿ ಕರ್ನಾಟಕದ ಕಾರ್ಯದರ್ಶಿ ವಿ.ವೆಂಕಟಶಿವಾರೆಡ್ಡಿ ಮಾತನಾಡಿ, ಡಾ.ಎಚ್.ನರಸಿಂಹಯ್ಯ ನ್ಯಾಷನಲ್ ಕಾಲೇಜು ಆರಂಭಿಸಿದರು. ಇದುವರೆಗೂ ಲಕ್ಷಾಂತರ ಮಂದಿ ದೇಶ, ವಿದೇಶಗಳಲ್ಲಿ ಇದ್ದಾರೆ. ಕಾಲೇಜಿನಲ್ಲಿ ಬಿಬಿಎ, ಬಿಎಸ್ಸಿ, ಎಂಎ ಪದವಿ ಆರಂಭಿಸಲಾಗಿದೆ. ಬೆಂಗಳೂರಿನಲ್ಲಿ ಡಾ.ಎಚ್.ಎನ್ ಹೆಸರು ಶಾಶ್ವತವಾಗಿ ಇರಲು ಎಂಜಿನಿಯರಿಂಗ್ ಕಾಲೇಜು ಆರಂಭಿಸಲಾಗುವುದು. ಬಾಗೇಪಲ್ಲಿ, ಗೌರಿಬಿದನೂರು ನ್ಯಾಷನಲ್ ಕಾಲೇಜುಗಳಲ್ಲಿ ಅನಿಮೇಷನ್ ಕೋರ್ಸ್ ಆರಂಭಿಸಲಾಗುವುದು ಎಂದರು.

ಕಾಲೇಜಿನ ಕಟ್ಟಡ ಮತ್ತು ಸೌಲಭ್ಯ ಕಲ್ಪಿಸಲು ದಾನಿಗಳು, ಹಳೆ ವಿದ್ಯಾರ್ಥಿಗಳು ಮತ್ತು ಡಾ.ಎಚ್.ಎನ್.ಅಭಿಮಾನಿಗಳು ಮುಂದಾಗಿದ್ದಾರೆ. ಕಾಲೇಜಿನಲ್ಲಿ ಕಡಿಮೆ ಶುಲ್ಕಗಳಿಗೆ ಶಿಕ್ಷಣ ಕಲ್ಪಿಸಲಾಗಿದೆ ಎಂದರು.

ಕಾಲೇಜಿನ ಆಡಳಿತ ಮಂಡಳಿ ಅಧ್ಯಕ್ಷ ವಿ.ಶಿವಶಂಕರರೆಡ್ಡಿ ಮಾತನಾಡಿ, ಗ್ರಂಥಾಲಯ, ಕಂಪ್ಯೂಟರ್ ಕೊಠಡಿ, ಆಟದ ಮೈದಾನ, ಅನುಭವಿ ಉಪನ್ಯಾಸಕರು ಇದ್ದಾರೆ. ಕಾಲೇಜು ಶುಲ್ಕ ಪಾವತಿ ಮಾಡಿದ ಬಡ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನ ವಿತರಿಸಲಾಗಿದೆ ಎಂದರು.

ಬೆಂಗಳೂರಿನ ಬೇಸ್ ಕಾಲೇಜಿನ ಉಪನ್ಯಾಸಕ ಪ್ರೊ.ಸಿ.ಎಂ.ನಾಗರಾಜು ಮಾತನಾಡಿ, ಗಡಿ ತಾಲ್ಲೂಕುಗಳಲ್ಲಿ ಶಿಕ್ಷಣದ ಜತೆಗೆ ಕನ್ನಡ ಕಲೆ, ಸಾಹಿತ್ಯ, ಸಂಸ್ಕೃತಿಯ ಕ್ರಾಂತಿ ಮೊಳಗಬೇಕು ಎಂದರು.

ಬೇಸ್ ಶಿಕ್ಷಣ ಸಂಸ್ಥೆ ನಿರ್ದೇಶಕ ಟಿ.ಕೆ.ಜಯರಾಮಪ್ಪ, ನ್ಯಾಷನಲ್ ಎಜುಕೇಷನ್ ಸೊಸೈಟಿ ಸದಸ್ಯ ಪ್ರೊ.ಎನ್.ನಂಜುಂಡಪ್ಪ, ಪ್ರೊ.ಡಿ.ಶಿವಣ್ಣ, ಪ್ರೊ.ಎ.ಕೆ.ನಿಂಗಪ್ಪ, ಪ್ರೊ.ಜಿ.ಎಸ್.ಸಿದ್ದಲಿಂಗಯ್ಯ, ಬಿ.ಆರ್.ನರಸಿಂಹನಾಯ್ಡು, ವಿ.ಪ್ರಭಾಕರರೆಡ್ಡಿ, ವಿ.ಲಕ್ಷ್ಮಿನಾರಾಯಣರೆಡ್ಡಿ, ಪದವಿ ಕಾಲೇಜಿನ ಪ್ರಾಂಶುಪಾಲ ಪ್ರೊ.ಇಂತಿಯಾಜ್ ಅಹಮದ್ ಮುಬೀನ್, ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ಪ್ರೊ.ವಿ.ವೆಂಕಟಶಿವಾರೆಡ್ಡಿ, ಉಪಪ್ರಾಂಶುಪಾಲೆ ಪ್ರೊ.ಶೈಲ, ಎಲ್.ಎನ್.ರಾಜೇಶ್, ತಾಲ್ಲೂಕು ಪತ್ರಕರ್ತರ ಸಂಘದ ಅಧ್ಯಕ್ಷ ಡಿ.ಎನ್.ಕೃಷ್ಣಾರೆಡ್ಡಿ, ಕನ್ನಡ ಪ್ರಾಧ್ಯಾಪಕ ಚಂದ್ರೇನಾಯಕ್, ಜಯಚಂದ್ರ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.