ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಮ್ಮೂರ ಶಾಲೆ: ಕೈಬೀಸಿ ಕರೆಯುತ್ತಿದೆ ಗಡಿಭಾಗದ ಶಾಲೆ

ಸರ್ಕಾರಿ ಶಾಲೆಯ ರೂಪುರೇಷೆ ಬದಲಿಸಿದ ಶಿಕ್ಷಕರು
Last Updated 1 ಡಿಸೆಂಬರ್ 2021, 6:51 IST
ಅಕ್ಷರ ಗಾತ್ರ

ಚೇಳೂರು: ಎಲ್ಲರೂ ಕೈಜೋಡಿಸಿದರೆ ಗ್ರಾಮೀಣ ಪ್ರದೇಶದ ಸರ್ಕಾರಿ ಶಾಲೆಯನ್ನು ಯಾವುದೇ ಖಾಸಗಿ ಶಾಲೆಗೂ ಕಡಿಮೆ ಇಲ್ಲದಂತೆ ಅಭಿವೃದ್ಧಿ ಮಾಡಬಹುದು ಎಂಬುದಕ್ಕೆ ಚಿಕ್ಕಬಳ್ಳಾಪುರ ಜಿಲ್ಲೆಯ ಬಾಗೇಪಲ್ಲಿ ತಾಲೂಕಿನ ಆಂಧ್ರ ಗಡಿಗೆ ಹೊಂದಿಕೊಂಡಿರುವ ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆ ಸಾಕ್ಷಿಯಾಗಿದೆ.

ಈ ಶಾಲೆ ತರಗತಿಯ ವಿಚಾರದಲ್ಲಿ ಕಿರಿಯ ಶಾಲೆಯಾಗಿದ್ದರೂ ಅಭಿವೃದ್ಧಿಯ ವಿಚಾರದಲ್ಲಿ ಹಿರಿಯ ಶಾಲೆಯಾಗಿ ಗಮನಸೆಳೆಯುತ್ತಿದೆ. ಸಾಮಾನ್ಯವಾಗಿ ಗ್ರಾಮೀಣ ಪ್ರದೇಶದ ಸರ್ಕಾರಿ ಶಾಲೆಗಳೆಂದರೆ ಅಭಿವೃದ್ಧಿ ವಂಚಿತ ಶಾಲೆಗಳೆಂದೇ ಪರಿಚಿತವಾಗಿರುತ್ತವೆ. ಆದರೆ ಚೇಳೂರು ಸರ್ಕಾರಿ ಹಿರಿಯ ಶಾಲೆ ಮಾತ್ರ ಇತರೆ ಸರ್ಕಾರಿ ಶಾಲೆಗಳಿಗೆ ಹೋಲಿಸಿದರೆ ಸಂಪೂರ್ಣ ಭಿನ್ನವಾಗಿದ್ದು, ಸೌಲಭ್ಯ ಹೊಂದಿದ ಸರ್ವತೋಮುಖ ಅಭಿವೃದ್ಧಿಶೀಲ ಶಾಲೆಯಾಗಿದೆ ಎಂದರೆ ತಪ್ಪಾಗಲಾರದು.

ಸರ್ಕಾರಿ ಶಾಲೆಗಳೆಂದರೆ ಮೂಗು ಮುರಿಯುವ ಈ ಕಾಲದಲ್ಲಿ ಮಾದರಿ ಶಾಲೆಯನ್ನಾಗಿ ಅಭಿವೃದ್ಧಿಪಡಿಸಿ ಸ್ಥಳೀಯರಲ್ಲಿ ಶಿಕ್ಷಣದ ಮಹತ್ವವನ್ನು ಸಾರುವ ಮೂಲಕ ಮಕ್ಕಳ ದಾಖಲಾತಿ ಹೆಚ್ಚುವಂತೆ ಮಾಡುವ ಜತೆಗೆ ಗುಣಮಟ್ಟದ ಶಿಕ್ಷಣಕ್ಕೂ ಆದ್ಯತೆ ನೀಡುತ್ತಿರುವ ಶಿಕ್ಷಕರು ಇಲಾಖೆ ಇತರರಿಗೆ ಮಾದರಿ.

ಚೇಳೂರಿನ ಸರ್ಕಾರಿ ಮಾದರಿ ಪ್ರಾಥಮಿಕ ಶಾಲೆಯಲ್ಲಿ ಉತ್ತಮವಾಗಿ ಸೇವೆ ಮಾಡುತ್ತಿರುವ ಶಿಕ್ಷಕರು ಕೊರೊನಾ ಎರಡು ಅಲೆಗಳಿಂದ ಸರ್ಕಾರ ಶಾಲೆಗೆ ಬಾಗಿಲು ಮುಚ್ಚಿದ್ದಾರೆ. ಆದರೂ ಪ್ರತಿ ದಿನ ಈ ಶಿಕ್ಷಕರು ಎಲ್ಲರಂತೆ ಮನೆಯಲ್ಲಿರದೇ ಶಾಲೆಗೆ ಹಾಜರಾಗಿ ಶಾಲೆಯ ಸುತ್ತಮುತ್ತಲಿನ ಪರಿಸರವನ್ನು ಸ್ವಚ್ಛತೆ ಮಾಡುವುದರ ಜೊತೆಗೆ ಶಾಲಾ ಕೊಠಡಿಗಳಲ್ಲಿ ಕಸ ಗುಡಿಸಿ ಆವರಣವನ್ನು ಸರಿಪಡಿಸುವುದರ ಜೊತೆಗೆ ಇವರೇ ಗಿಡಗಳಿಗೆ ನೀರು ಹಾಕಿ ಶಾಲೆಯ ಆವರಣಸ್ವಚ್ಛಗೊಳಿಸಿ ಜನರ ಅಚ್ಚುಮೆಚ್ಚಿನ ಶಿಕ್ಷಕರಾಗಿದ್ದಾರೆ.

ಶಾಲಾ ದಾಖಲಾತಿ ಆಂದೊಲನದಲ್ಲಿ ಊರು-ಊರು, ಮನೆ ಮನೆಯ ಬಾಗಿಲು ತಟ್ಟಿ ಎಲ್‌ಕೆಜಿಯಿಂದ 7 ನೇ ತರಗತಿವರೆಗೆ 181ಕ್ಕೂ ಹೆಚ್ಚಿನ ಮಕ್ಕಳನ್ನ ಸೇರಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಈ ಶಾಲೆಯು 1926ರಲ್ಲಿ ಪ್ರಾರಂಭವಾಯಿತು. 2020- 21ನೇ ಸಾಲಿನಲ್ಲಿ 30 ಮಕ್ಕಳೊಂದಿಗೆ ಪೂರ್ವ ಪ್ರಾಥಮಿಕ (ಎಲ್‌ಕೆಜಿ) ಶಾಲೆ ಪ್ರಾರಂಭಗೊಂಡು ದಾಖಲಾತಿ ಹೆಚ್ಚಳಗೊಂಡು ಅದೇ ವರ್ಷದಲ್ಲೆ ಆಂಗ್ಲ ಮಾಧ್ಯಮ ಪ್ರಾರಂಭವಾಯಿತು. 2020-21ನೇ ಸಾಲಿನಲ್ಲಿ 122 ಮಕ್ಕಳು ದಾಖಲಾಗಿದ್ದರು. 2021- 2022ನೇ ಸಾಲಿನಲ್ಲಿ 181 ಮಕ್ಕಳು ದಾಖಲಾಗಿದ್ದಾರೆ.

ಶಾಸಕರ ಮೆಚ್ಚುಗೆ: ಶಾಸಕ ಎಸ್.ಎನ್.ಸುಬ್ಬಾರೆಡ್ಡಿ ಅವರು ಶಾಲೆಗೆ ಭೇಟಿ ನೀಡಿ, ಮುಚ್ಚಬೇಕಾದಶಾಲೆಯನ್ನು ತೆರದು 181 ಮಕ್ಕಳನ್ನು ದಾಖಲಾತಿ ಮಾಡಿ, ಶಾಲಾ ಕಚೇರಿಯನ್ನು ಅಚ್ಚುಕಟ್ಟಾಗಿ ಇರಿಸಿದ್ದಕ್ಕೆ ಪ್ರಶಂಸೆ ವ್ಯಕ್ತಪಡಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT