ಮಂಗಳವಾರ, 17 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಚಿಂತಾಮಣಿ: ಕೆನರಾ ಬ್ಯಾಂಕ್‌ 2ನೇ ಶಾಖೆ ಆರಂಭ

Published : 18 ಆಗಸ್ಟ್ 2024, 15:32 IST
Last Updated : 18 ಆಗಸ್ಟ್ 2024, 15:32 IST
ಫಾಲೋ ಮಾಡಿ
Comments

ಚಿಂತಾಮಣಿ: ನಗರದ ಬೆಂಗಳೂರು ರಸ್ತೆಯ ಅಂಜನಿ ಚಿತ್ರಮಂದಿರದ ಪಕ್ಕದಲ್ಲಿ ಕೆನರಾ ಬ್ಯಾಂಕ್‌ನ ಎರಡನೇ ಶಾಖೆಯನ್ನು ಜಿಲ್ಲಾಧಿಕಾರಿ ಪಿ.ಎನ್.ರವೀಂದ್ರ ಹಾಗೂ ಬ್ಯಾಂಕ್‌ ಜನರಲ್ ಮ್ಯಾನೇಜರ್ ಮಹೇಶ್ ಎಂ.ಪೈ ಭಾನುವಾರ ಉದ್ಘಾಟಿಸಿದರು.

ಜಿಲ್ಲಾಧಿಕಾರಿ ಮಾತನಾಡಿ, ‘ಸಮಾಜದ ಅಭಿವೃದ್ಧಿಗಾಗಿ ಸರ್ಕಾರ ರೂಪಿಸಿರುವ ಯೋಜನೆಗಳು ಮತ್ತು ಸವಲತ್ತುಗಳು ಬ್ಯಾಂಕ್‌ಗಳಿಂದ ಜನರಿಗೆ ತಲುಪಿದಾಗ ಮಾತ್ರ ಬ್ಯಾಂಕ್ ಸಿಬ್ಬಂದಿ ಕೆಲಸ ಸಾರ್ಥಕವಾಗುತ್ತದೆ. ಗ್ರಾಹಕರನ್ನು ಅಲೆದಾಡಿಸದೆ ಸಣ್ಣ ಪುಟ್ಟ ಅಡೆತಡೆಗಳನ್ನು ದೂರಮಾಡಿ ಅವರಿಗೆ ಸೌಲಭ್ಯಗಳನ್ನು ಒದಗಿಸಬೇಕು’ ಎಂದು ಸಲಹೆ ನೀಡಿದರು.

ಪ್ರತಿ 5 ಸಾವಿರ ಜನಸಂಖ್ಯೆಗೆ ಒಂದು ಬ್ಯಾಂಕ್‌ನ ಶಾಖೆ ತೆರೆಯುವುದು ಸರ್ಕಾರದ ಗುರಿಯಾಗಿದೆ. ಬ್ಯಾಂಕ್‌ ಮೂಲಕ ಹೆಚ್ಚಿನ ವಾಣಿಜ್ಯ ವ್ಯವಹಾರ ಮಾಡುವ ಮೂಲಕ ಆ ಭಾಗದ ಜನರು ಆರ್ಥಿಕವಾಗಿ ಅಭಿವೃದ್ಧಿಯಾಗಬೇಕು ಎಂದರು.

ಕೆನರಾ ಬ್ಯಾಂಕ್‌ನ ಎಂ.ಅಶೋಕಕುಮಾರ್, ಪಿ.ಗೋವಿಂದರಾವ್, ನಗರ ಶಾಖೆ ವ್ಯವಸ್ಥಾಪಕ ಶಂಕರಲಾಲ್‌ ಭಾಗವಹಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT