ಬುಧವಾರ, 11 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಚೇಳೂರು: ಮಸೀದಿಗಳಲ್ಲಿ ಸ್ವಾತಂತ್ರ್ಯ ಸಂಭ್ರಮ

Published 15 ಆಗಸ್ಟ್ 2024, 15:25 IST
Last Updated 15 ಆಗಸ್ಟ್ 2024, 15:25 IST
ಅಕ್ಷರ ಗಾತ್ರ

ಚೇಳೂರು: ಪಟ್ಟಣದ ಜಾಮೀಯಾ ಮಸೀದಿ ಆವರಣದಲ್ಲಿ ನಡೆದ ಸ್ವಾತಂತ್ರ್ಯ ದಿನಾಚರಣೆಯಲ್ಲಿ ತಹಶೀಲ್ದಾರ್ ಎ.ವಿ.ಶ್ರೀನಿವಾಸಲುನಾಯುಡು ಅವರು ಧ್ವಜಾರೋಹಣ ನೇರವೇರಿಸಿದರು.

ಬಳಿಕ ಆಂಬುಲೆನ್ಸ್ ಮತ್ತು ಸೈಬರ್ ಸೆಂಟರ್‌ ಅನ್ನು ಉದ್ಘಾಟಿಸಿದರು. 

ಮಸೀದಿಯ ಅಧ್ಯಕ್ಷ ಎಂ.ಎಸ್.ಅಬ್ದೂಲ್ ಲತೀಫ್ ಮಾತನಾಡಿ, ಮಸೀದಿ ಸಮಿತಿ ಆಂಬುಲೆನ್ಸ್ ಮತ್ತು ಸೈಬರ್ ಕೇಂದ್ರ ಆರಂಭಿಸಲಾಗಿದ್ದು,  ಜಾತಿ, ಮತ ಭೇದವಿಲ್ಲದೇ ಎಲ್ಲಾ ಸಮುದಾಯದ ಜನತೆಗೆ ಉಚಿತ ಸೇವೆ ನೀಡಲಾಗುವುದು ಎಂದು ತಿಳಿಸಿದರು.

ಸಮಾರಂಭದ ನಂತರ ಮಸೀದಿ ಬಳಿ ಅನ್ನಸಂತರ್ಪನೆ ಮಾಡಲಾಯಿತು. ಮಸೀದಿಯ ಮುಂದೆ ರಾಷ್ಟ್ರ ದ್ವಜ ಕಟ್ಟಿರುವುದು ನೋಡುಗರ ಜನಮನ ಸೆಳೆಯಿತು. ಮಸೀದಿಗೆ ವಿದ್ಯುತ್ ದೀಪಾಲಂಕಾರ ಮಾಡಲಾಗಿತ್ತು.

ಮುಖಂಡರಾದ ಎಂ.ಎಸ್ ಅಬ್ದೂಲ್, ಸತ್ತಾರ್‌ಸಾಬ್‌ಮ ವಲೀ, ಎನ್.ಎಸ್ ಅಬ್ದೂಲ್, ಖಾದರ್, ಇಂತಿಯಾಜ್, ಮಹಮದ್‍ಗೌಸ್, ನಜೀರ್‍ಸಾಬ್, ಪುನರ್ ವಸತಿ ಕಾರ್ಯಕರ್ತ ವಿ.ಎಸ್.ಇನಾಯಿತ್ತುಲ್ಲಾ, ಕರವೇ ಸದಸ್ಯ ಬುಲೇಟ್‍ಬಾಬು ಭಾಗವಹಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT