ಬಾಗೇಪಲ್ಲಿ: ನದಿ, ನಾಲೆಗಳು ಇಲ್ಲದ ಬಯಲುಸೀಮೆ ತಾಲ್ಲೂಕು ಬಾಗೇಪಲ್ಲಿಯಲ್ಲಿ ನೀರಿನ ಕೊರತೆಯ ನಡುವೆ ರೈತರು ಬಟನ್ ರೋಜಾ, ಚೆಂಡುಮಲ್ಲಿಗೆ, ಸೇವಂತಿಗೆಯಂತಹ ವಾಣಿಜ್ಯ ಹೂವಿನ ಬೆಳೆಗಳನ್ನು ಬೆಳೆಯುವ ಮೂಲಕ ಆರ್ಥಿಕ ಲಾಭ ಗಳಿಸಿದ್ದಾರೆ.

ಮುಂಗಾರು, ಹಿಂಗಾರು, ವಾಯುಭಾರ ಕುಸಿತದಿಂದ ಉಂಟಾಗುವ ಮಳೆಗಳಿಂದ ತರಕಾರಿ ಹಾಗೂ ಹೂವಿನ ಬೆಳೆ ಬೆಳೆಯುವುದು ಕಷ್ಟ. ಸರಿಯಾದ ಸಮಯಕ್ಕೆ ಮಳೆ ಬರದಿದ್ದರೆ, ಹೂವಿನ ಸಸಿಗಳಿಗೆ ನೀರು ಹರಿಸಲು ಸಾಧ್ಯವಾಗುವುದಿಲ್ಲ. ಇದರಿಂದ ನಷ್ಟವಾಗಲಿದೆ ಎಂದು ರೈತರು ಭಾವಿಸುತ್ತಾರೆ. ಆದರೆ ಹನಿ ನೀರಾವರಿ, ತುಂತುರು ನೀರಾವರಿ ಪದ್ಧತಿ, ಕೊಳವೆಬಾವಿಯಿಂದ ನೀರು ಬಳಕೆ ಮಾಡಿಕೊಂಡ ತಾಲ್ಲೂಕಿನ ಕೆಲವು ರೈತರು ಬಗೆ ಬಗೆಯ ಹೂವುಗಳನ್ನು ಬೆಳೆದಿದ್ದಾರೆ.

ತಾಲ್ಲೂಕಿನ ಯಲ್ಲಂಪಲ್ಲಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕಂಬಾಲಪಲ್ಲಿ, ಪಟ್ರವಾರಿಪಲ್ಲಿ, ಯಲ್ಲಂಪಲ್ಲಿ, ಲಘುಮದ್ದೇಪಲ್ಲಿ, ಆಚೇಪಲ್ಲಿ, ಟೆಂಕಾಯಿಮಾಕಲಪಲ್ಲಿ, ಶಂಖಂವಾರಿಪಲ್ಲಿ, ಕಾನಗಮಾಕಲಪಲ್ಲಿ ಪಂಚಾಯಿತಿಯ ಕೋಡಿಪಲ್ಲಿ, ಕೊತ್ತಕೋಟೆ, ನಲ್ಲಮಲ್ಲೇಪಲ್ಲಿ ಸೇರಿದಂತೆ ವಿವಿಧ ಗ್ರಾಮಗಳ ರೈತರು ಬಟನ್ ರೋಜಾ, ಚೆಂಡುಮಲ್ಲಿಗೆ, ಕನಕಾಂಬರ, ಗುಂಡುಮಲ್ಲಿಗೆ, ಸೇವಂತಿಗೆ ಸೇರಿದಂತೆ ಇನ್ನಿತರ ಬಣ್ಣ ಬಣ್ಣದ ಹೂವುಗಳನ್ನು ಬೆಳೆದಿದ್ದಾರೆ. ಶ್ರಾವಣ ಮಾಸದ ವರಮಹಾಲಕ್ಷ್ಮಿ, ಗೌರಿ-ಗಣೇಶ ಸೇರಿದಂತೆ ವಿವಿಧ ಹಬ್ಬಗಳು ಹಾಗೂ ವಿವಿಧ ಕಾರ್ಯಕ್ರಮಗಳಿಗೆ ಬೇಡಿಕೆಗೆ ತಕ್ಕಂತೆ ಹೂವುಗಳನ್ನು ಪೂರೈಸುವ ಮೂಲಕ ಲಾಭ ಮಾಡಿಕೊಂಡಿದ್ದಾರೆ.

ತಾಲ್ಲೂಕಿನಲ್ಲಿ ತೋಟಗಾರಿಕೆ ಇಲಾಖೆಯ 2025–26ನೇ ಸಾಲಿನಲ್ಲಿ ಈವರೆಗೆ ರೈತರು ಸೇವಂತಿಗೆ 202 ಹೆಕ್ಟೇರ್ ಪ್ರದೇಶಗಳಲ್ಲಿ 2,012 ಮೆಗಾಟನ್ಗಳಲ್ಲಿ, ಚೆಂಡುಮಲ್ಲಿಗೆ ಹೂವನ್ನು 134 ಹೆಕ್ಟೇರ್ ಪ್ರದೇಶಗಳಲ್ಲಿ 1,074 ಮೆಗಾಟನ್ಗಳಲ್ಲಿ, ಬಟನ್ ಗುಲಾಬಿ- 1 ಹೆಕ್ಟೇರ್ ಪ್ರದೇಶದಲ್ಲಿ 8 ಟನ್ ಹಾಗೂ ಸುಗಂಧ ರಾಜವು 2 ಹೆಕ್ಟೇರ್ ಪ್ರದೇಶದಲ್ಲಿ 19 ಮೆಗಾಟನ್ನಷ್ಟು ಉತ್ಪಾದನೆ ಮಾಡುವ ಗುರಿ ಹೊಂದಿದ್ದಾರೆ.

ತಾಲ್ಲೂಕಿನಲ್ಲಿ ಸೇವಂತಿಗೆ, ಚೆಂಡುಮಲ್ಲಿಗೆ, ಬಟನ್ರೋಜಾ ಸೇರಿದಂತೆ ವಿವಿಧ ಹೂವುಗಳನ್ನು ರೈತರು ಹೆಚ್ಚಾಗಿ ಬೆಳೆದಿದ್ದಾರೆ. ರೈತರು ಕೂಲಿಕಾರ್ಮಿಕರ ಜೊತೆ ಇದೀಗ ತಮ್ಮ ಹೊಲ ಮತ್ತು ತೋಟಗಳಲ್ಲಿ ಬೆಳೆದ ಹೂವುಗಳನ್ನು ಸರದಿಯಂತೆ ಬಿಡಿಸುತ್ತಿದ್ದಾರೆ. ಹೀಗೆ, ಬಿಡಿಸಿದ ಹೂವುಗಳನ್ನು ರಸ್ತೆಗಳ ಪಕ್ಕಗಳಲ್ಲಿ ರಾಶಿಗಟ್ಟಲೇ ಸುರಿದಿದ್ದಾರೆ. ಚೀಲಗಳಿಗೆ, ಪೊಟ್ಟಣಗಳನ್ನು ಮಾಡಿ ಬೆಂಗಳೂರು ಹಾಗೂ ನೆರೆಯ ಆಂಧ್ರಪ್ರದೇಶದ ಹೈದರಾಬಾದ್ನ ಹೂವಿನ ಮಾರುಕಟ್ಟೆಗೆ ಹೂವುಗಳನ್ನು ಮಿನಿ ಕ್ಯಾಂಟರ್ಗಳಲ್ಲಿ ಸಾಗಿಸಿದ್ದಾರೆ. ಹೂವುಗಳಿಗೆ ಹೆಚ್ಚಿನ ಬೇಡಿಕೆ ಇದೆ. ಹೀಗಾಗಿ, ಕೆಲವು ಹೂವಿನ ವ್ಯಾಪಾರಿಗಳು ರೈತರ ಹೊಲ ಮತ್ತು ತೋಟಗಳಿಗೆ ಖುದ್ದು ಭೇಟಿ ನೀಡಿ, ಖರೀದಿಸುತ್ತಿದ್ದಾರೆ.

ತಾಲ್ಲೂಕಿನ ಯಲ್ಲಂಪಲ್ಲಿ ಗ್ರಾಮದ ರೈತ ವಿ.ಆನಂದ ಪಟ್ರವಾರಿಪಲ್ಲಿ ಗ್ರಾಮಕ್ಕೆ ಸಂಚರಿಸುವ ರಸ್ತೆ ಪಕ್ಕದ 3 ಎಕರೆ ಪ್ರದೇಶದಲ್ಲಿ ಚೆಂಡೂಮಲ್ಲಿಗೆ ಹೂವುಗಳನ್ನು ಬೆಳೆದಿದ್ದಾರೆ. ಇದೀಗ ಸರತಿಯಂತೆ ಕೂಲಿಕಾರ್ಮಿಕರ ಜೊತೆಗೆ ಹೂವು ಕಟಾವು ಮಾಡಿದ್ದಾರೆ. ರಸ್ತೆಗಳ ಪಕ್ಕದಲ್ಲಿ ಹೂವುಗಳ ರಾಶಿ ಮಾಡಿದ್ದಾರೆ.

₹5 ಲಕ್ಷ ಲಾಭದ ನಿರೀಕ್ಷೆ

ಚೆಂಡೂಹೂವಿನ ಬೆಳೆಗಾಗಿ ಈವರೆಗೆ ₹4 ಲಕ್ಷ ಖರ್ಚು ಮಾಡಿದ್ದೇನೆ. ಈಗಾಗಲೇ ಕಟಾವು ಮಾಡಿದ ಹೂವನ್ನು ಬೆಂಗಳೂರು ಹೈದರಾಬಾದ್ನಲ್ಲಿರುವ ಹೂವಿನ ಮಾರುಕಟ್ಟೆಗೆ ಸಾಗಿಸಲಾಗುವುದು. 4 ಟನ್ ಹೂವುಗಳು ಸಿಕ್ಕಿದೆ. ಎಲ್ಲ ಸೇರಿ ₹5 ಲಕ್ಷ ಲಾಭ ಸಿಗುವ ನಿರೀಕ್ಷೆ ಇದೆ. ಕೃಷಿ ತರಕಾರಿ ಜೊತೆಗೆ ಹೂವಿನ ಬೆಳೆಗಳಲ್ಲಿ ಹೆಚ್ಚಿನ ಲಾಭ ಗಳಿಸಬಹುದು ಎಂದು ರೈತ ಆನಂದ ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದ್ದಾರೆ. ತಾಲ್ಲೂಕಿನಲ್ಲಿ ಕೊಳವೆಬಾವಿಗಳ ಮೂಲಕ ನೀರು ಬಳಸಿಕೊಂಡು ರೈತರು ಹೂವುಗಳನ್ನು ಬೆಳೆದಿದ್ದಾರೆ. ಕೃಷಿ ತರಕಾರಿ ಬೆಳೆಗಳ ಜೊತೆಗೆ ಹೂವನ್ನೂ ಬೆಳೆದಿರುವುದು ಖುಷಿಯ ಸಂಗತಿ. ಹೂವಿನ ಬೆಳೆಯಿಂದಲೇ ರೈತರು ಲಾಭ ಗಳಿಸುತ್ತಿದ್ದಾರೆ ಎಂದು ತೋಟಗಾರಿಕೆ ಇಲಾಖೆ ಸಹಾಯಕ ನಿರ್ದೇಶಕಿ ಲಲಿತಮ್ಮ ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.