ಚಿಕ್ಕಬಳ್ಳಾಪುರ: ತಾಲ್ಲೂಕು, ಮಂಡಲ ಘಟಕಗಳಿಗೆ ‘ಮೇಜರ್ ಸರ್ಜರಿ’ ನಡೆಸಲು ಬಿಜೆಪಿ ಜಿಲ್ಲಾ ನೂತನ ಅಧ್ಯಕ್ಷ ಸೀಕಲ್ ರಾಮಚಂದ್ರಗೌಡ ಹೆಜ್ಜೆ ಇಟ್ಟಿದ್ದಾರೆ. ಚಿಕ್ಕಬಳ್ಳಾಪುರ ಜಿಲ್ಲೆಯ ಐದು ವಿಧಾನಸಭಾ ಕ್ಷೇತ್ರಗಳು ಮತ್ತು ಎಂಟು ತಾಲ್ಲೂಕು ಕೇಂದ್ರಗಳಲ್ಲಿ ಪಕ್ಷ ಕಟ್ಟುವ ಬಗ್ಗೆ ಆಂತರಿಕ ಚರ್ಚೆ ನಡೆಸಲು ಮುಂದಾಗಿದ್ದಾರೆ.

ಈ ಮೇಜರ್ ಸರ್ಜರಿಯು ಪಕ್ಷದ ಬಲವರ್ಧನೆಗೆ ಪೂರಕವಾಗಲಿದೆ ಎನ್ನುವ ವಿಶ್ವಾಸ ಸಹ ವ್ಯಕ್ತಪಡಿಸುತ್ತಾರೆ ಜಿಲ್ಲಾ ಅಧ್ಯಕ್ಷರು. ಪಕ್ಷ ಸಂಘಟನೆ, ಜಾತಿ, ಸಮುದಾಯ, ಪಕ್ಷ ನಿಷ್ಠೆ ಹೀಗೆ ಎಲ್ಲ ವಿಚಾರಗಳನ್ನೂ ಅಳೆದು ತೂಗಿದ ನಂತರ ‘ಮಂಡಲ’ಗಳ ಅಧ್ಯಕ್ಷರು ಹಾಗೂ ಪದಾಧಿಕಾರಿಗಳನ್ನು ಬದಲಿಸಲು ಮುಂದಾಗಿದ್ದಾರೆ.

ಜಿಲ್ಲೆಯ ಐದು ವಿಧಾನಸಭಾ ಕ್ಷೇತ್ರಗಳಲ್ಲಿ ಪಕ್ಷ ಸಂಘಟನೆಯ ಸವಾಲು ನೂತನ ಅಧ್ಯಕ್ಷರ ಮುಂದಿದೆ. ವಿಧಾನಸಭಾ ಚುನಾವಣೆಯಲ್ಲಿ ಚಿಕ್ಕಬಳ್ಳಾಪುರ ಮತ್ತು ಬಾಗೇಪಲ್ಲಿಯಲ್ಲಿ ಬಿಜೆಪಿ ಅಭ್ಯರ್ಥಿಗಳು ಎರಡನೇ ಸ್ಥಾನದಲ್ಲಿ ಇದ್ದರು. ಶಿಡ್ಲಘಟ್ಟ, ಚಿಂತಾಮಣಿ ಕ್ಷೇತ್ರದಲ್ಲಿ ಈ ಹಿಂದಿನ ಚುನಾವಣೆಗಳಿಗೆ ಹೋಲಿಸಿದರೆ 2023ರ ಚುನಾವಣೆಯಲ್ಲಿ ಬಿಜೆಪಿ ಉತ್ತಮ ಮತಗಳನ್ನೂ ಪಡೆದಿದೆ. ಗೌರಿಬಿದನೂರಿನಲ್ಲಿ ಪಕ್ಷಕ್ಕೆ ಮತದಾರರು ಇದ್ದರೂ ಸಂಘಟನೆ ಮತ್ತು ಸಮರ್ಥ ನಾಯಕತ್ವದ ಕೊರತೆ ಎದ್ದು ಕಾಣುತ್ತಿದೆ.

ಆದರೆ 2024ರ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ಡಾ.ಕೆ.ಸುಧಾಕರ್ ಚಿಕ್ಕಬಳ್ಳಾಪುರ ಲೋಕಸಭೆಗೆ ಒಳಪಡುವ ಜಿಲ್ಲೆಯ ಗೌರಿಬಿದನೂರು, ಬಾಗೇಪಲ್ಲಿ ಮತ್ತು ಚಿಕ್ಕಬಳ್ಳಾಪುರ ವಿಧಾನಸಭಾ ಕ್ಷೇತ್ರಗಳಲ್ಲಿ ದಾಖಲೆಯ ಮತಗಳನ್ನು ಪಡೆದರು. ಕೋಲಾರ ಲೋಕಸಭೆಗೆ ಒಳಪಡುವ ಚಿಂತಾಮಣಿ ಮತ್ತು ಶಿಡ್ಲಘಟ್ಟದಲ್ಲಿ ಬಿಜೆಪಿ–ಜೆಡಿಎಸ್ ಮೈತ್ರಿ ಅಭ್ಯರ್ಥಿ ಮಲ್ಲೇಶ್ ಬಾಬು ಎದುರಾಳಿಗಿಂತ ಹೆಚ್ಚು ಮತ ಪಡೆದರು. ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ ಪಡೆದ ಮತಗಳನ್ನು ಪಕ್ಷಕ್ಕೆ ಗಟ್ಟಿಗೊಳಿಸುವ ಸವಾಲು ಅಧ್ಯಕ್ಷರ ಮುಂದಿದೆ.

‘ಬಿಜೆಪಿಯಲ್ಲಿ ನಗರ ಮಂಡಲಗಳ ಅಧ್ಯಕ್ಷರ ಆಯ್ಕೆಯಲ್ಲಿ ಒಂದೇ ಸಮುದಾಯಕ್ಕೆ ಆದ್ಯತೆ ನೀಡಲಾಗುತ್ತಿದೆ’ ಎಂದು ಈ ಹಿಂದೆ ಗೌರಿಬಿದನೂರಿನ ನಾಯಕಿಯೊಬ್ಬರು ಈ ಹಿಂದಿನ ಜಿಲ್ಲಾ ಅಧ್ಯಕ್ಷ ರಾಮಲಿಂಗಪ್ಪ ವಿರುದ್ಧ ಅಸಮಾಧಾನ ಸಹ ವ್ಯಕ್ತಪಡಿಸಿದ್ದರು.

ಒಡಕುಗಳನ್ನು ಸರಿಪಡಿಸುವ ಹೊಣೆ: ಜಿಲ್ಲೆಯ ಬಿಜೆಪಿಯಲ್ಲಿ ನಾಯಕರ ನಡುವೆ ಮನಸ್ಸುಗಳು ಕದಡಿವೆ. ಕೆಲವು ಕ್ಷೇತ್ರಗಳಲ್ಲಿ ನಮ್ಮನ್ನು ವಿಶ್ವಾಸಕ್ಕೆ ಪಡೆಯುತ್ತಿಲ್ಲ ಎನ್ನುವ ಆರೋಪ ಪಕ್ಷ ನಿಷ್ಠರಲ್ಲಿದೆ. ಕೆಲವು ಮುಖಂಡರು ದೈಹಿಕವಾಗಿ ಬಿಜೆಪಿಯಲ್ಲಿದ್ದರೂ ಮಾನಸಿಕವಾಗಿ ಕಾಂಗ್ರೆಸ್ ಎನ್ನುವಂತಿದ್ದಾರೆ. ಈ ಎಲ್ಲವನ್ನೂ ಅಳೆದು ತೂಗಿ ಪಕ್ಷ ಕಟ್ಟುವ ದೊಡ್ಡ ಜವಾಬ್ದಾರಿ ಸಹ ರಾಮಚಂದ್ರಗೌಡ ಅವರ ಎದುರಿದೆ.

ಠೇವಣಿ ಕಳೆದುಕೊಳ್ಳುತ್ತಿದ್ದ ಶಿಡ್ಲಘಟ್ಟ ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿಗೆ ಉತ್ತಮ ನೆಲೆಯನ್ನು ರಾಮಚಂದ್ರಗೌಡ ದೊರಕಿಸಿಕೊಟ್ಟಿದ್ದಾರೆ. ಕ್ಷೇತ್ರದಲ್ಲಿ 50 ಸಾವಿರ ಸದಸ್ಯತ್ವ ನೋಂದಣಿ ಮಾಡಿದ್ದಾರೆ. ಶಿಡ್ಲಘಟ್ಟದಲ್ಲಿ ಮಾಡಿದ ಸಂಘಟನೆಯನ್ನು ಜಿಲ್ಲೆಯ ಇತರೆ ವಿಧಾನಸಭಾ ಕ್ಷೇತ್ರಗಳಿಗೆ ವಿಸ್ತರಿಸಿದರೂ ಪಕ್ಷಕ್ಕೆ ಬಲ ದೊರೆಯಲಿದೆ.

‘ನಾಲ್ಕು ಗೋಡೆಗಳ ನಡುವೆ ಬದಲಾವಣೆಯಿಲ್ಲ’

‘ಆಯಾ ಮಂಡಲಗಳ ಸ್ಥಳೀಯ ಮುಖಂಡರ ಜೊತೆ ಆಂತರಿಕ ಸಭೆ ಮಾಡುತ್ತೇವೆ. ಸ್ಥಳೀಯ ನಾಯಕರ ಜೊತೆ ಚರ್ಚಿಸುತ್ತೇವೆ. ಚರ್ಚೆ ಆಂತರಿಕವಾದರೂ ನಾಲ್ಕು ಗೋಡೆಗಳ ನಡುವೆಯೇ ಮಂಡಲ ಘಟಕಕ್ಕೆ ಪದಾಧಿಕಾರಿಗಳನ್ನು ನೇಮಕ ಮಾಡುವುದಿಲ್ಲ’ ಎಂದು ಜಿಲ್ಲಾ ಬಿಜೆಪಿ ಅಧ್ಯಕ್ಷ ಸೀಕಲ್ ರಾಮಚಂದ್ರಗೌಡ ‘ಪ್ರಜಾವಾಣಿ’ಗೆ ತಿಳಿಸಿದರು.

ಪಕ್ಷಕ್ಕೆ ಕೆಲಸ ಮಾಡಿದವರಿಗೆ ಮತ್ತು ಆಸಕ್ತಿ ಇದ್ದವರಿಗೆ ಅವಕಾಶಗಳು ದೊರೆಯುತ್ತವೆ. ಭಾನುವಾರ ಶಿಡ್ಲಘಟ್ಟ ವಿಧಾನಸಭಾ ಕ್ಷೇತ್ರದ ಮಂಡಲ ಸಭೆ ನಡೆಯುತ್ತದೆ. ಆ ನಂತರ ಎಲ್ಲ ವಿಧಾನಸಭಾ ಕ್ಷೇತ್ರಗಳ ಸಭೆ ಹಂತ ಹಂತವಾಗಿ ನಡೆಯುತ್ತದೆ’ ಎಂದರು.

ನಮ್ಮನ್ನು ಮಾತನಾಡಿಸಿಲ್ಲ ಎಂದು ಕೆಲವು ಹಳಬರು ದೂರುತ್ತಿದ್ದಾರೆ. ನಿಷ್ಠಾವಂತರನ್ನು ಕಡೆಗಣಿಸಲಾಗುತ್ತಿದೆ ಎನ್ನುವ ಮಾತುಗಳೂ ಇವೆ. ಈ ಎಲ್ಲವನ್ನೂ ಸರಿಪಡಿಸಲಾಗುವುದು. ಸಂಘಟನೆ ಮತ್ತು ಚುನಾವಣೆ ಈ ಎರಡನ್ನೂ ಒಗ್ಗೂಡಿಸಿಯೇ ಮುನ್ನಡೆಯುತ್ತೇವೆ ಎಂದು ಹೇಳಿದರು.

ಜಿ.ಪಂ ತಾ.ಪಂ ಚುನಾವಣೆ ದೃಷ್ಟಿ

ಮುಂಬರುವ ಜಿಲ್ಲಾ ಮತ್ತು ತಾಲ್ಲೂಕು ಪಂಚಾಯಿತಿ ಚುನಾವಣೆಯತ್ತ ಅಧ್ಯಕ್ಷ ರಾಮಚಂದ್ರಗೌಡ ಈಗಲೇ ದೃಷ್ಟಿ ಹರಿಸಿದ್ದಾರೆ. ಇದಿಷ್ಟೇ ಅಲ್ಲ ಜಿಲ್ಲೆಯಲ್ಲಿ ನಡೆಯುವ ನಗರ ಸ್ಥಳೀಯ ಸಂಸ್ಥೆಗಳು ಸಹಕಾರ ಕ್ಷೇತ್ರದ ಚುನಾವಣೆಗಳಲ್ಲಿ ಪಕ್ಷದ ಅಭ್ಯರ್ಥಿಗಳನ್ನು ಗೆಲ್ಲಿಸಿಕೊಳ್ಳುವತ್ತ ಗುರಿ ಇದೆ ಎನ್ನುತ್ತಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.