ಚಿಕ್ಕಬಳ್ಳಾಪುರ: ಆಲೂಗಡ್ಡೆ ತುಂಬಿಕೊಂಡು ಚಿಕ್ಕಬಳ್ಳಾಪುರದಿಂದ ಶಿಡ್ಲಘಟ್ಟ ಕಡೆ ಸಾಗುತ್ತಿದ್ದ ಕ್ಯಾಂಟರ್ ನಾಯನಹಳ್ಳಿ ಬಳಿ ಎದುರಿಗೆ ಬಂದ ಗೂಡ್ಸ್ ವಾಹನಕ್ಕೆ ಡಿಕ್ಕಿಯಾಗಿದೆ. ಮಂಗಳವಾರ ರಾತ್ರಿ 7ರ ಸುಮಾರಿಗೆ ಅಪಘಾತ ಸಂಭವಿಸಿದೆ.

ಈ ಪರಿಣಾಮ ಗೂಡ್ಸ್ ವಾಹನದಲ್ಲಿದ್ದ 10 ಕೂಲಿ ಕಾರ್ಮಿಕರು ಗಾಯಗೊಂಡಿದ್ದಾರೆ. ಕೂಲಿ ಕಾರ್ಮಿಕರು ಅಜ್ಜವಾರ ಮತ್ತು ಗುಂಡ್ಲಗುರ್ಕಿಯವರಾಗಿದ್ದಾರೆ. ಜಂಗಮಕೋಟೆ ಬಳಿ ಶುಂಠಿ ಹೊಲದ ಕೆಲಸಕ್ಕೆ ತೆರಳಿ ವಾಪಸ್ಸಾಗುತ್ತಿದ್ದರು.