ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಗೌರಿಬಿದನೂರು: ಬಳ್ಳಿ, ಕೊಂಬೆ ತೆರವು; ಹೊಸ ಕಂಬ ಅಳವಡಿಕೆ

ಗೌರಿಬಿದನೂರು; ‘ಪ್ರಜಾವಾಣಿ’ ವರದಿಗೆ ಎಚ್ಚೆತ್ತ ಬೆಸ್ಕಾಂ ಅಧಿಕಾರಿಗಳು, ಸಿಬ್ಬಂದಿ
Published 30 ಮೇ 2024, 15:38 IST
Last Updated 30 ಮೇ 2024, 15:38 IST
ಅಕ್ಷರ ಗಾತ್ರ

ಗೌರಿಬಿದನೂರು: ಗೌರಿಬಿದನೂರು ನಗರ ಹಾಗೂ ಗ್ರಾಮಾಂತರ ಭಾಗದ ಕೆಲವು ಭಾಗಗಳಲ್ಲಿ ಅಪಾಯಕ್ಕೆ ಆಹ್ವಾನ ನೀಡುವ ವಿದ್ಯುತ್ ಕಂಬಗಳ ಕುರಿತು ‘ಪ್ರಜಾವಾಣಿ’ಯಲ್ಲಿ ಪ್ರಕಟವಾಗಿದ್ದ ವರದಿಗೆ ಬೆಸ್ಕಾಂ ಅಧಿಕಾರಿಗಳು ಮತ್ತು ಸಿಬ್ಬಂದಿ ಸ್ಪಂದಿಸಿದ್ದಾರೆ. 

ಗುರುವಾರ ಪತ್ರಿಕೆಯಲ್ಲಿ ‘ಅಪಾಯಕ್ಕೆ ಕಾದಿರುವ ವಿದ್ಯುತ್ ಕಂಬಗಳು’ ಎನ್ನುವ ವರದಿ ಪ್ರಕಟವಾಗಿತ್ತು. ಪತ್ರಿಕೆಯ ವರದಿ ಆಧರಿಸಿ ಗೌರಿಬಿದನೂರು ಪ್ರಜಾವಾಣಿ ಅರೆಕಾಲಿಕ ವರದಿಗಾರರಿಗೆ ಗುರುವಾರ ಬೆಳಿಗ್ಗೆಯೇ ಕರೆ ಮಾಡಿದ ಬೆಸ್ಕಾಂ ಅಧಿಕಾರಿಗಳು ಯಾವ ಗ್ರಾಮ, ಸ್ಥಳದಲ್ಲಿ ಯಾವ ಸಮಸ್ಯೆಗಳು ನಿಮ್ಮ ಗಮನಕ್ಕೆ ಬಂದಿವೆ ಎನ್ನುವ ಬಗ್ಗೆ ಮಾಹಿತಿ ಪಡೆದರು. 

ನಂತರ ಆಯಾ ಸ್ಥಳಗಳಿಗೆ ತೆರಳಿ ವಿದ್ಯುತ್ ಕಂಬಗಳನ್ನು ಸರಿಪಡಿಸುವ, ವಿದ್ಯುತ್ ಕಂಬಳಿಗೆ ಹಬ್ಬಿದ್ದ ಬಳ್ಳಿಗಳನ್ನು ತೆರವುಗೊಳಿಸುವ ಕೆಲಸ ಮಾಡಿದರು.

ಹಿರೇಬಿದನೂರಿನ ಬಳಿ ಮತ್ತು ಕೋಟೆ ಕೋದಂಡ ರಾಮಸ್ವಾಮಿ ದೇವಾಲಯದ ಬಳಿಯ ವಿದ್ಯುತ್ ಕಂಬಕ್ಕೆ ಹಬ್ಬಿದ್ದ ಬಳ್ಳಿಗಳನ್ನು ತೆರವುಗೊಳಿಸಿದರು.

ದ್ವಾರಗಾನಹಳ್ಳಿಯಲ್ಲಿ ಅಳವಡಿಸಲು ಎರಡು ಹೊಸ ವಿದ್ಯುತ್ ಕಂಬಗಳನ್ನು ಸ್ಥಳಕ್ಕೆ ತಂದಿದ್ದಾರೆ. ಹುದೂತಿ, ಸಿದ್ದೇನಹಳ್ಳಿ ಗ್ರಾಮಕ್ಕೆ ಭೇಟಿ ನೀಡಿದ ಅಧಿಕಾರಿಗಳು ಶುಕ್ರವಾರವೇ ಸಮಸ್ಯೆ ಪರಿಹರಿಸುವುದಾಗಿ ಗ್ರಾಮಸ್ಥರಿಗೆ ಭರವಸೆ ನೀಡಿದ್ದಾರೆ. 

ನಗರ ಹಾಗೂ ಗ್ರಾಮೀಣ ಭಾಗಗಳಲ್ಲಿ ವಿದ್ಯುತ್ ತಂತಿಗಳಿಗೆ ತಗುಲುತ್ತಿದ್ದ ಗಿಡ, ಮರಗಳ ಕೊಂಬೆಗಳನ್ನು ತೆರವುಗೊಳಿಸಿದರು. ಕಂಬಳ ಸಮೀಪ ದಟ್ಟವಾಗಿ ಬೆಳೆದಿದ್ದ ಜಾಲಿ ಗಿಡಗಳನ್ನು ತೆರವುಗೊಳಿಸಿದರು.

ಕಂಬಕ್ಕೆ ಹಬ್ಬಿದ್ದ ಬಳ್ಳಿಗಳ ತೆರವು
ಕಂಬಕ್ಕೆ ಹಬ್ಬಿದ್ದ ಬಳ್ಳಿಗಳ ತೆರವು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT