ಗೌರಿಬಿದನೂರು: ‘ಚಿಮುಲ್ ಚುನಾವಣೆಯಲ್ಲಿ ನಮ್ಮ ಬಣದ ಅಭ್ಯರ್ಥಿ ವೆಂಕಟರೆಡ್ಡಿ ಅವರ ಸ್ವಯಂಕೃತ ಅಪರಾಧದಿಂದ ಸೋಲು ಉಂಟಾಗಿದೆ’ ಎಂದು ಶಾಸಕ ಕೆ.ಎಚ್. ಪುಟ್ಟಸ್ವಾಮಿಗೌಡ ಹೇಳಿದರು.

ನಗರಸಭೆ ಆವರಣದಲ್ಲಿ ಮಾತನಾಡಿ, ಚಿಮುಲ್ ಚುನಾವಣೆಯಲ್ಲಿ ನಮ್ಮ ಅಭ್ಯರ್ಥಿ ವೆಂಕಟರೆಡ್ಡಿ ಹೆಚ್ಚಿನ ಮತಗಳ ಅಂತರದಿಂದ ಗೆಲುವು ಸಾಧಿಸಲಿದ್ದಾರೆ ಎಂಬ ನಿರೀಕ್ಷೆ ಇತ್ತು. ಆದರೆ, ವೆಂಕಟರೆಡ್ಡಿ ಅವರ ಅತಿಯಾದ ಆತ್ಮವಿಶ್ವಾಸವೇ ಸೋಲಿಗೆ ಕಾರಣವಾಗಿದೆ. ಆದರೆ, ಒಂದೇ ಮತದಿಂದ ನಾವು ಸೋಲು ಕಂಡಿದ್ದೇವೆ. ಇದನ್ನು ಸೋಲು ಎಂಬುದಾಗಿ ನಾವು ಭಾವಿಸುವುದಿಲ್ಲ ಎಂದಿದ್ದಾರೆ.

ಒಂದೇ ಸಮಯದಲ್ಲಿ ಮೂವರು ಅಭ್ಯರ್ಥಿಗಳ ಕಡೆಗೆ ಗಮನ ನೀಡಬೇಕಾದ ಅನಿವಾರ್ಯವಿತ್ತು. ಹೀಗಾಗಿ, ನಾವು ಮಹಿಳಾ ಕ್ಷೇತ್ರದ ಕಡೆಗೆ ಹೆಚ್ಚಿನ ಗಮನ ನೀಡಿದೆವು. ಮಂಚೇನಹಳ್ಳಿ ಕ್ಷೇತ್ರದ ಅಭ್ಯರ್ಥಿ ಕಾಂತರಾಜು ಅವರ ಗೆಲುವು ಕಠಿಣವಾಗಿತ್ತು. ಆದಾಗ್ಯೂ, ನಮ್ಮ ಎಲ್ಲಾಅಭ್ಯರ್ಥಿಗಳು ಗೆಲುವು ಸಾಧಿಸಿದ್ದಾರೆ. ಇಂತಹ ಕುತಂತ್ರಗಳ ಬಗ್ಗೆ ಮುಂದಿನ ಚುನಾವಣೆಗಳಲ್ಲಿ ಎಚ್ಚರಿಕೆ ಹೆಜ್ಜೆ ಇಡಲಾಗುವುದು ಎಂದು ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.