ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಚಿಂತಾಮಣಿ ನಗರಸಭೆ ಉಪಚುನಾವಣೆ: ಕಾಂಗ್ರೆಸ್‌ಗೆ ಭರ್ಜರಿ ಜಯ

Published 30 ಡಿಸೆಂಬರ್ 2023, 14:35 IST
Last Updated 30 ಡಿಸೆಂಬರ್ 2023, 14:35 IST
ಅಕ್ಷರ ಗಾತ್ರ

ಚಿಂತಾಮಣಿ: ನಗರದ 18ನೇ ವಾರ್ಡ್ ಕೀರ್ತಿನಗರ ಕ್ಷೇತ್ರದ ಉಪಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಮಹಮದ್ ಶಫೀಕ್ ಭರ್ಜರಿ ಜಯಗಳಿಸಿದ್ದಾರೆ.

ಮಹ್ಮದ್ ಶಫೀಕ್ (ಕಾಂಗ್ರೆಸ್) 945, ಮುನಾವರ್ ಪಾಷಾ (ಜೆಡಿಎಸ್) 146, ಸೂರ್ಯಪ್ರಕಾಶ್ (ಬಿಜೆಪಿ) 255 ಮತ ಗಳಿಸಿದ್ದಾರೆ. ಚುನಾವಣೆಯಲ್ಲಿ 1347 ಮತಗಳು ಚಲಾವಣೆಯಾಗಿವೆ.

ಅಡ್ಡ ಮತದಾನ ಮಾಡಿದ್ದರಿಂದ ಸದಸ್ಯತ್ವ ಅನರ್ಹಗೊಂಡಿದ್ದು, ಸ್ಥಾನ ಖಾಲಿಯಾಗಿತ್ತು. ಹಾಗಾಗಿ ಡಿ.27 ರಂದು ಉಪ ಚುನಾವಣೆ ನಡೆದಿತ್ತು. 

ಮಹ್ಮದ್ ಶಫೀಕ್ ಉಪಚುನಾವಣೆಯಲ್ಲಿ 690 ಮತಗಳ ಅಂತರದಿಂದ ಜಯಗಳಿಸಿದ್ದಾರೆ. ಉನ್ನತ ಶಿಕ್ಷಣ ಸಚಿವ ಡಾ.ಎಂ.ಸಿ.ಸುಧಾಕರ್ ಸಹ ಮಹ್ಮದ್ ಶಫೀಕ್ ಪರವಾಗಿ ಮತಯಾಚನೆ ಮಾಡಿದ್ದರು.

ಜೆಡಿಎಸ್ ಮೂರನೇ ಸ್ಥಾನಕ್ಕೆ: ಕ್ಷೇತ್ರದಲ್ಲಿ ಇದುವರೆಗೆ ನಡೆದಿರುವ ಎಲ್ಲಾ ಚುನಾವಣೆಗಳಲ್ಲಿ ಜೆಡಿಎಸ್ ಕಾಂಗ್ರೆಸ್ ಅಭ್ಯರ್ಥಿಗಳು ಮುಖಾಮುಖಿಯಾಗುತ್ತಿದ್ದರು. ಜಯಳಿಸುವ ಹಾಗೂ ಅತಿ ಸಮೀಪದ ಅಭ್ಯರ್ಥಿಗಳಾಗುತ್ತಿದ್ದರು. ಬಿಜೆಪಿ ಕೊನೆಯ ಸ್ಥಾನದಲ್ಲಿ ಇರುತ್ತಿತ್ತು. ಆದರೆ, ಈ ಚುನಾವಣೆಯಲ್ಲಿ ಬಿಜೆಪಿ ದ್ವಿತೀಯ ಸ್ಥಾನಕ್ಕೆ ಬಡ್ತಿ ಪಡೆದಿದೆ. ಜೆಡಿಎಸ್ ಮೂರನೇ ಸ್ಥಾನಕ್ಕೆ ಕುಸಿದಿದೆ.

ಫಲಿತಾಂಶ ಘೋಷಣೆಯಾದ ಕೂಡಲೇ ಕಾಂಗ್ರೆಸ್ ಕಾರ್ಯಕರ್ತರು ಮತ್ತು ಶಫೀಕ್ ಅಭಿಮಾನಿಗಳು ವಿಜಯೋತ್ಸವ ಆಚರಿಸಿದರು. ಶಫೀಕ್ ಅವರನ್ನು ಹೆಗಲ ಮೇಲೆ ಹೊತ್ತು ಮೆರವಣಿಗೆ ನಡೆಸಿ, ಸಿಹಿ ಹಂಚಿ ಸಂಭ್ರಮಿಸಿದರು.

ನಗರಸಭೆಯ ಬಲಾಬಲ: ಉಪಚುನಾವಣೆಯ ನಂತರ ನಗರಸಭೆಯ ಬಲಾಬಲ ಕಾಂಗ್ರೆಸ್ 16, ಜೆಡಿಎಸ್ 13, ಪಕ್ಷೇತರ 2. ಒಟ್ಟು ಸ್ಥಾನಗಳು 31 ಸ್ಥಾನಗಳಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT