ಸೋಮವಾರ, ಮೇ 17, 2021
21 °C

ಗೌರಿಬಿದನೂರು | ಸಮುದಾಯದಲ್ಲಿ ಸೋಂಕು ಹರಡಿದ ಭೀತಿ, ಗ್ರಾಮೀಣ ಪ್ರದೇಶದಲ್ಲಿ ಆತಂಕ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Gauribidanoor

ಚಿಕ್ಕಬಳ್ಳಾಪುರ: ಗೌರಿಬಿದನೂರು ತಾಲ್ಲೂಕಿನ ಆರು ಹಳ್ಳಿಗಳಲ್ಲಿ ಸೋಮವಾರ 10 ಮಂದಿಗೆ ಕೋವಿಡ್ 19 ತಗುಲಿರುವುದು ದೃಢಪಟ್ಟಿದೆ. ಇದರಿಂದ ಸಮುದಾಯದಲ್ಲಿ ಸೋಂಕು ಹರಡಿರುವ ಶಂಕೆ ಉಂಟಾಗಿದ್ದು, ಗ್ರಾಮೀಣ ಪ್ರದೇಶದ ಜನರು ತಲ್ಲಣಗೊಂಡಿದ್ದಾರೆ.

ಮಹಾರಾಷ್ಟ್ರದಿಂದ ವಾಪಾಸಾದ ಡಿಪಾಳ್ಯದ 28‌ ವರ್ಷದ ವ್ಯಕ್ತಿ, 21 ವರ್ಷದ ಗೃಹಿಣಿಯಲ್ಲಿ ಕೋವಿಡ್ ಪತ್ತೆಯಾಗಿದೆ.
ಕಡಬೂರಿನ 65 ವರ್ಷದ ಪುರುಷ, 60 ವರ್ಷದ ಮಹಿಳೆ, ಹಾಲಗಾನಹಳ್ಳಿಯ 65 ವರ್ಷದ ಪುರುಷ, ಅಲ್ಲಿಪುರದ 20 ವರ್ಷದ ಯುವಕನೊಬ್ಬನಲ್ಲಿ ಕೋವಿಡ್ ಕಾಣಿಸಿಕೊಂಡಿದೆ.

ಸೊನಗಾನಹಳ್ಳಿಯ ಒಬ್ಬರು, ಚಿಕ್ಕಹೊಸಹಳ್ಳಿಯ ಮೂರು ಜನರಲ್ಲಿ‌ ಸೋಂಕು ಕಾಣಿಸಿಕೊಂಡಿರುವುದು ಸ್ಥಳೀಯ ಜನರಲ್ಲಿ ಭೀತಿ‌ ಹುಟ್ಟಿಸಿದೆ.

ಕೋವಿಡ್ ಪೀಡಿತರ ವಾಸಸ್ಥಳ‌ಪ್ರದೇಶಗಳನ್ನು ಸೀಲ್ ಡೌನ್ ಮಾಡಿರುವ ಆರೋಗ್ಯ ಇಲಾಖೆ ಸಿಬ್ಬಂದಿ, ವೈರಸ್‌ ನಾಶಕ ದ್ರಾವಣದಿಂದ ಶುಚಿಗೊಳಿಸುವುದು, ಸೋಂಕಿತರ ಸಂಪರ್ಕಕ್ಕೆ ಬಂದವರ ಮಾಹಿತಿ‌ ಕಲೆ ಹಾಕುವ ಕೆಲಸದಲ್ಲಿ ತೊಡಗಿದ್ದಾರೆ.
ಇದರಿಂದ ಜಿಲ್ಲೆಯಲ್ಲಿ ಕೋವಿಡ್‌ ಪ್ರಕರಣಗಳ ಸಂಖ್ಯೆ 196ಕ್ಕೆ ಏರಿದೆ. ಈವರೆಗೆ ಚಿಕ್ಕಬಳ್ಳಾಪುರ ತಾಲ್ಲೂಕಿನಲ್ಲಿ 24, ಬಾಗೇಪಲ್ಲಿ 53, ಚಿಂತಾಮಣಿ 14, ಗೌರಿಬಿದನೂರು 95, ಶಿಡ್ಲಘಟ್ಟ ತಾಲ್ಲೂಕಿನಲ್ಲಿ 10 ಕೋವಿಡ್ ಪ್ರಕರಣಗಳು ವರದಿಯಾಗಿವೆ.
ಸೋಂಕಿತರ ಪೈಕಿ ಮೂರು ಜನರು ಮೃತಪಟ್ಟಿದ್ದು, ಚಿಕಿತ್ಸೆಯಿಂದ 158 ಸೋಂಕಿತರು ಗುಣಮುಖರಾಗಿದ್ದಾರೆ. ಸದ್ಯ ಕೋವಿಡ್‌ ವಾರ್ಡ್‌ನಲ್ಲಿ 35 ಸೋಂಕಿತರು ಚಿಕಿತ್ಸೆ ಪಡೆಯುತ್ತಿದ್ದಾರೆ.
 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು