ಶನಿವಾರ, 15 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪಾತಪಾಳ್ಯ: ನಾಯಿ ಕಚ್ಚಿದ ಬಾಲಕನಿಗೆ ಸಿಗದ ಚಿಕಿತ್ಸೆ

Published 19 ಮೇ 2024, 13:45 IST
Last Updated 19 ಮೇ 2024, 13:45 IST
ಅಕ್ಷರ ಗಾತ್ರ

ಪಾತಪಾಳ್ಯ: ನಾಯಿ ಕಚ್ಚಿದ ಬಾಲಕನಿಗೆ ಇಲ್ಲಿನ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಚಿಕಿತ್ಸೆ ಸಿಗದೆ ಪೋಷಕರು ಪರದಾಡಿದರು.

ಬಾಗೇಪಲ್ಲಿ ತಾಲೂಕಿನ ಗುಜ್ಜೇಪಲ್ಲಿ ಗ್ರಾಮದ ನಿವಾಸಿ ಶ್ರೀನಿವಾಸ್ ಅವರ ಮೂರು ವರ್ಷದ ಪುತ್ರ ಆಕ್ಷಯ್ ಶನಿವಾರ ಮಧ್ಯಾಹ್ನ ನಾಯಿ ಕಡಿದಿತ್ತು. ಚಿಕಿತ್ಸೆಗಾಗಿ ಪಾತಪಾಳ್ಯ ಸರ್ಕಾರಿ ಆಸ್ಪತ್ರೆಗೆ ಆಗಮಿಸಿದ್ದರು. ಆದರೆ ವೈದ್ಯರು, ನರ್ಸ್‌ ಮತ್ತು ಸಿಬ್ಬಂದಿಗಳು ಯಾರು ಇಲ್ಲದೆ ಗಂಟೆ ಗಟ್ಟಲೇ ಕಾಯಬೇಕಾಯಿತು.

ಆಸ್ಪತ್ರೆಯಲ್ಲಿ ವೈದ್ಯರು ಮತ್ತು ಸಿಬ್ಬಂದಿ ಬಾರದ ಹಿನ್ನೆಲೆಯಲ್ಲಿ ಬಾಗೇಪಲ್ಲಿ ಆಸ್ಪತ್ರೆಗೆ ತೆರಳಿ ಚಿಕಿತ್ಸೆ ಪಡೆದುಕೊಂಡರು.

ಕಾದು ಕಾದು ಕೊನೆಗೂ ಸುಸ್ತಾದ ಪೋಷಕರು ಆಸ್ಪತ್ರೆ, ಆರೋಗ್ಯ ಮತ್ತು ಕುಟುಂಬ ಇಲಾಖೆ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT