ಯಾವುದೇ ಸಂಶೋಧನೆಗೆ ವಿಜ್ಞಾನವೇ ಮೂಲ. ಮಕ್ಕಳು ಅನುಭವದ ಮೂಲಕ ವಿಜ್ಞಾನದ ಮೂಲ ತಿಳಿಯಬೇಕು ಎಂಬುದು ಡಾ.ಎಚ್.ಎನ್. ಪಾರ್ಕ್ ಉದ್ದೇಶವಾಗಿದೆ. ಮಕ್ಕಳು ವಿಜ್ಞಾನದ ಮಾದರಿಗಳನ್ನು ಆಟವಾಡುತ್ತಾ ಕಲಿಯಬೇಕು. ವಿದೇಶಗಳಲ್ಲಿ ವಿಜ್ಞಾನಕ್ಕೆ ಹೆಚ್ಚಿನ ಪ್ರಾಶಸ್ತ್ಯವಿದೆ. ನಮ್ಮಲ್ಲಿ ಮಕ್ಕಳಿಗೆ ಚಿಕ್ಕಂದಿನಿಂದಲೇ ಆಸಕ್ತಿ ಬೆಳೆಸಲು ವಿಜ್ಞಾನ ಪಾರ್ಕ್ ಸಹಕಾರಿಯಾಗಲಿದೆ. ಮುಂದಿನ ದಿನಗಳಲ್ಲಿ ಡಿಆರ್‌ಡಿಒ ಮತ್ತು ಇಸ್ರೊ ಸಹಕಾರದಿಂದ ಔಟ್ ರಿಚ್ ಕೇಂದ್ರ ಪ್ರಾರಂಭಿಸಲಾಗುವುದು. ಈ ಮೂಲಕ ವಿಜ್ಞಾನ ಕೇಂದ್ರವನ್ನು ಮತ್ತೊಂದು ಹಂತಕ್ಕೆ ಕೊಂಡೊಯ್ಯುವ ಯತ್ನ ಮಾಡಲಾಗುವುದು.
ವಿಜ್ಞಾನ ಕೇಂದ್ರದ ನಿರ್ಮಾಣಕ್ಕೆ ಮೊದಲು ಕಡಿಮೆ ಜಾಗ ನಿಗದಿಪಡಿಸಲಾಗಿತ್ತು. ಇದೀಗ ಈ ಜಾಗದ ವಿಸ್ತೀರ್ಣವನ್ನು ಹೆಚ್ಚಿಸಲಾಗಿದೆ. ಸರ್ಕಾರದಿಂದ ಹೆಚ್ಚಿನ ಅನುದಾನ ತಂದು ಕೇಂದ್ರವನ್ನು ಮೇಲ್ದರ್ಜೆಗೇರಿಸಲಾಗುವುದು. ಮಕ್ಕಳಿಗೆ ವಿಜ್ಞಾನದ ಬಗ್ಗೆ ಆಸಕ್ತಿ ಮೂಡಿಸುವಂತೆ ನಿರ್ಮಿಸಲಾಗುವುದು. ಬೆಂಗಳೂರಿನಲ್ಲಿನ ಲಾಲ್ ಬಾಗ್ ರೀತಿ ಉದ್ಯಾನವನ ನಿರ್ಮಿಸುವ ಯೋಜನೆಯೂ ಇದೆ.