ಚಿಕ್ಕಬಳ್ಳಾಪುರ: ತಾಲ್ಲೂಕಿನ ಮಂಡಿಕಲ್ ಮತ್ತು ಅಡ್ಡಗಲ್ ಗ್ರಾಮ ಪಂಚಾಯಿತಿಗಳ ವ್ಯಾಪ್ತಿಯ ವಿವಿಧ ಹಳ್ಳಿಗಳಲ್ಲಿ ಬುಧವಾರ ಬೆಳಿಗ್ಗೆ ಲಘು ಭೂಕಂಪನ ಸಂಭವಿಸಿದೆ.

ಬಂಡಹಳ್ಳಿ, ಶೆಟ್ಟಗೆರೆ, ಬೋಗೇನ ಹಳ್ಳಿ, ಭೋಗಪರ್ತಿ, ಹೊಸಹಳ್ಳಿ, ದೊಡ್ಡಹಳ್ಳಿ,ಪಿಳ್ಳಗುಂಡಹಳ್ಳ, ಗುಂಡ್ಲ ಹಳ್ಳಿ, ಮಂಡಿಕಲ್, ಅಡ್ಡಗಲ್, ಪೈಲಗುರ್ಕಿ, ಆರೂರು, ಭೋಗಪರ್ತಿ ಯಲ್ಲಿ ನಿವಾಸಿಗಳಿಗೆ ಬೆಳಿಗ್ಗೆ 7 ಗಂಟೆಯ ಸುಮಾರಿಗೆ ಎರಡು ಬಾರಿ ಭೂಕಂಪನದ ಅನುಭವವಾಗಿದೆ.

‘ಬೆಳಿಗ್ಗೆ 7.09 ಮತ್ತು 7.14 ಗಂಟೆಗೆ ಭೂಕಂಪನ ಸಂಭವಿಸಿದ್ದು, ರಿಕ್ಟರ್ ಮಾಪಕದಲ್ಲಿ ಇದರ ತೀವ್ರತೆಯು ಕ್ರಮವಾಗಿ 3.1 ಹಾಗೂ 3.3ರಷ್ಟು ದಾಖಲಾಗಿದೆ’ ಎಂದುರಾಷ್ಟ್ರೀಯ ಭೂಕಂಪ ಮಾಪನ ಕೇಂದ್ರವು (ಎನ್ಸಿಎಸ್) ಟ್ವೀಟ್ ಮಾಡಿದೆ.

ಮಂಡಿಕಲ್ ಭೂಕಂಪನದ ಕೇಂದ್ರ ಬಿಂದುವಾಗಿದೆ. ಬಂಡ್ಲಹಳ್ಳಿ ಮತ್ತು ಶೆಟ್ಟಗೆರೆ ಗ್ರಾಮಗಳಲ್ಲಿ ಕೆಲವು ಮನೆಯ ಗೋಡೆಗಳು ಬಿರುಕು ಬಿಟ್ಟಿವೆ. ಪಾತ್ರೆಗಳು ನೆಲಕ್ಕುರುಳಿವೆ. ಭೂಮಿಯು ಕಂಪಿಸುತ್ತಿದ್ದಂತೆ ಜನರು ಭಯದಿಂದ ಮನೆಯಿಂದ ಹೊರಗೆ ಓಡಿ ಬಂದಿದ್ದಾರೆ. ಅಧಿಕಾರಿಗಳು ಗ್ರಾಮ ಗಳಿಗೆ ಭೇಟಿ ನೀಡಿದ್ದು, ‘ಇದು ಲಘು ಭೂಕಂಪನ. ಯಾವುದೇ ಅಪಾಯವಿಲ್ಲ’ ಎಂದು ಜನರಲ್ಲಿ ಧೈರ್ಯ ತುಂಬಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.