ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರವಾಸೋದ್ಯಮದಿಂದ ಉದ್ಯೋಗಾವಕಾಶ ಸೃಷ್ಟಿ: ಪ್ರೊ. ಟಿ.ಡಿ.ಕೆಂಪರಾಜು

Last Updated 6 ಅಕ್ಟೋಬರ್ 2020, 3:25 IST
ಅಕ್ಷರ ಗಾತ್ರ

ಚಿಂತಾಮಣಿ: ಪ್ರವಾಸೋದ್ಯಮ ದೇಶದ ಆರ್ಥಿಕ ಪ್ರಗತಿಯ ಮೂಲ.ವಿದೇಶಿ ವಿನಿಮಯದೊಂದಿಗೆ ಕೈಗಾರಿಕೆಗಳ ಬೆಳವಣಿಗೆ, ಉದ್ಯೋಗ ಅವಕಾಶವನ್ನು ಕಲ್ಪಿಸುತ್ತದೆ’ ಎಂದು ಬೆಂಗಳೂರು ಉತ್ತರ ವಿಶ್ವವಿದ್ಯಾಲಯದ ಕುಲಪತಿ ಪ್ರೊ. ಟಿ.ಡಿ.ಕೆಂಪರಾಜು ಅಭಿಪ್ರಾಯಪಟ್ಟರು.

ನಗರದ ಸರ್ಕಾರಿ ಮಹಿಳಾ ಕಾಲೇಜಿನಲ್ಲಿ ಇತಿಹಾಸ ವಿಭಾಗದ ಸ್ನಾತಕೋತ್ತರ ಮತ್ತು ಪದವಿ ವಿಭಾಗವು ವಿಶ್ವವಿದ್ಯಾಲಯದ ಸಹಯೋಗದೊಂದಿಗೆ ಸೋಮವಾರ ಹಮ್ಮಿಕೊಂಡಿದ್ದ ‘ಟೂರಿಸಂ ಆ್ಯಂಡ್‌ ಟ್ರಾವೆಲ್ ಮ್ಯಾನೇಜ್‌ಮೆಂಟ್ ಇನ್ ಇಂಡಿಯಾ ಆ್ಯಂಡ್‌ ಎಕನಾಮಿಕ್ ಡೆವೆಲಪ್‌ಮೆಂಟ್' ವಿಷಯದ ಮೇಲಿನ ರಾಷ್ಟ್ರೀಯ ವೆಬಿನಾರ್ ಉದ್ಘಾಟಿಸಿ ಅವರು ಮಾತನಾಡಿದರು.

‘ಸರ್ಕಾರ ಪ್ರವಾಸೋದ್ಯಮ ಕ್ಷೇತ್ರವನ್ನು ಉತ್ತೇಜಿಸಲು ಪೂರಕವಾದ ಮೂಲಸೌಲಭ್ಯಗಳನ್ನು ಒದಗಿಸಬೇಕು. ಈ ಕ್ಷೇತ್ರ ಎದುರಿಸುತ್ತಿರುವ ಹಲವು ಸಮಸ್ಯೆಗಳನ್ನು ಪರಿಹರಿಸಬೇಕು. ವಿಶ್ವವಿದ್ಯಾಲಯಗಳು ಪ್ರವಾಸೋದ್ಯಮ ಕೋರ್ಸ್‌ಗಳನ್ನು ಪ್ರಾರಂಭಿಸಿ ಮಾನವ ಸಂಪನ್ಮೂಲವನ್ನು ಸೃಷ್ಟಿಸಬೇಕು. ಕಾಲೇಜಿನನ ಇತಿಹಾಸ ವಿಭಾಗವು ಈ ನಿಟ್ಟಿನಲ್ಲಿ ವೆಬಿನಾರ್ ಆಯೋಜಿಸಿರುವುದು ಉತ್ತಮ ಬೆಳವಣಿಗೆಯಾಗಿದೆ’ ಎಂದರು.

ಬೆಂಗಳೂರು ವಿಶ್ವವಿದ್ಯಾಲಯದ ಇತಿಹಾಸ ಪ್ರಾಧ್ಯಾಪಕ ಪ್ರೊ.ಎನ್.ಶೇಕ್ ಮಸ್ತಾನ್ ಮಾತನಾಡಿ, ‘ಗ್ರಾಮಗಳಿಂದ ಕೂಡಿರುವ ಭಾರತವು ಕೃಷಿಯನ್ನು ಹೆಚ್ಚಾಗಿ ಅವಲಂಬಿಸಿದೆ. ಹೀಗಾಗಿ ಕೃಷಿ ಮತ್ತು ತೋಟಗಳ ಪ್ರವಾಸೋದ್ಯಮಕ್ಕೆ ಉತ್ತಮ ಅವಕಾಶವಿದ್ದು ಹೆಚ್ಚಿನ ಉತ್ತೇಜನ ನೀಡಬೇಕು. ಗ್ರಾಮೀಣ ಭಾಗದ ವಿವಿಧ ಬಗೆಯ ತೋಟಗಳಿಗೆ ಪ್ರವಾಸಿಗರನ್ನು ಆಕರ್ಷಣೆ ಮಾಡುವ ನಿಟ್ಟಿನಲ್ಲಿ ಯೋಜನೆಗಳನ್ನು ರೂಪಿಸಬೇಕು’ ಎಂದು ಸಲಹೆ ನೀಡಿದರು.

‘ರೈತರು ಮತ್ತು ಗ್ರಾಮೀಣ ಜನರಿಗೆ ಪ್ರವಾಸೋದ್ಯಮದಿಂದ ಉದ್ಯೋಗವು ಲಭಿಸುತ್ತದೆ. ಬೆಳೆದ ಉತ್ಪನ್ನಗಳಿಗೆ ಲಾಭದಾಯಕವಾದ ಬೆಲೆ ಸಿಗುತ್ತದೆ. ಆರ್ಥಿಕವಾಗಿ ಹಾಗೂ ಸಾಮಾಜಿಕವಾಗಿ ರೈತರು ಮುಂದೆ ಬರಲು ಅನುಕೂಲವಾಗುತ್ತದೆ. ರೈತರು ಸಹ ತಮ್ಮ ತೋಟಗಳು ಮತ್ತು ಕೃಷಿ ಉತ್ಪನ್ನಗಳ ಕುರಿತು ಸಾಮಾಜಿಕ ಜಾಲತಾಣಗಳಲ್ಲಿ ಪ್ರಚಾರ ಮಾಡುವ ಮೂಲಕ ಪ್ರವಾಸಿಗರನ್ನು ಆಕರ್ಷಣೆ ಮಾಡಬೇಕು’ ಎಂದು ತಿಳಿಸಿದರು.

ಪ್ರಾಂಶುಪಾಲ ಪ್ರೊ.ಕೆ.ಆರ್. ಶಿವಶಂಕರಪ್ರಸಾದ್ ಅಧ್ಯಕ್ಷತೆ ವಹಿಸಿದ್ದರು. ಇತಿಹಾಸ ವಿಭಾಗದ ಮುಖ್ಯಸ್ಥ ಡಾ.ಎಂ.ಎನ್.ರಘು, ಪ್ರಾಧ್ಯಾಪಕರಾದ ಪ್ರೊ.ಎಸ್.ಸಣ್ಣೀರಯ್ಯ, ಪ್ರೊ.ಆರ್.ಶ್ರೀದೇವಿ, ಪ್ರೊ.ಕೆ.ಮುನಿಕೃಷ್ಣಪ್ಪ, ಡಾ.ಸಿ.ಎಂ.ದಿನೇಶ್, ಪ್ರೊ.ವಿ.ಕೆ.ರಾಯಪ್ಪ, ಪ್ರೊ.ಅಂಜುಳ, ಪ್ರೊ.ವನಿತ, ಡಾ.ಸಣ್ಣಚಿಕ್ಕಯ್ಯ ಹಾಗೂ ದೇಶದ ವಿವಿಧ ರಾಜ್ಯಗಳಿಂದ ಪ್ರತಿನಿಧಿಗಳು ವೆಬಿನಾರ್‌ನಲ್ಲಿ ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT