ಗುರುವಾರ, 2 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಿಕ್ಕಬಳ್ಳಾಪುರ: ಮಾಸಾಶನಕ್ಕಾಗಿ ನಕಲಿ ಅಂಗವಿಕಲರ ಪ್ರಮಾಣಪತ್ರ!

Last Updated 3 ಮಾರ್ಚ್ 2023, 4:28 IST
ಅಕ್ಷರ ಗಾತ್ರ

ಚೇಳೂರು: ತಾಲ್ಲೂಕಿನಲ್ಲಿ ಮಾಸಾಶನ ಪಡೆಯುತ್ತಿರುವ ನಕಲಿ ಅಂಗವಿಕಲರನ್ನು ಪತ್ತೆ ಮಾಡಬೇಕು ಮತ್ತು ಅಂಥವರ ಮಾಸಾಶನ ರದ್ದುಪಡಿಸಬೇಕು ಎಂದು ಚೇಳೂರಿನ ಜನರು ಆಗ್ರಹಿಸಿದ್ದಾರೆ.

ಕೈ, ಕಾಲು, ಕಣ್ಣು ಸರಿಯಾಗಿದ್ದರೂ ಅಂಗವಿಕಲರು ಎಂದು ನಂಬಿಸಿ ಮಧ್ಯವರ್ತಿಗಳ ಮೂಲಕ ನಕಲಿ ಪ್ರಮಾಣ ಪತ್ರ ಪಡೆದಿದ್ದಾರೆ. ಈ ಮೂಲಕ ಅಂಗವಿಕಲರಿಗೆ ನೀಡುವ ಮಾಸಾಶನ, ಉಚಿತ ಬಸ್ ಪಾಸ್, ವಾಹನ ಸೇರಿದಂತೆ ಇನ್ನಿತರ ಸೌಲಭ್ಯಗಳನ್ನು ಪಡೆದಿದ್ದಾರೆ. ಜತೆಗೆ ಅಂಗವಿಕಲರಲ್ಲದವರಿಗೂ ಅಂಗವಿಕಲ ಪ್ರಮಾಣ ಪತ್ರಗಳು ಸಿಗುತ್ತಿವೆ ಎಂದು ಜನರು ದೂರಿದರು.

ನಾಡಕಚೇರಿ ಪ್ರಾರಂಭವಾಗಿ 37 ವರ್ಷಗಳ ಅವಧಿಯಲ್ಲಿ ನೀಡಿರುವ ಅಂಗವಿಕಲರ ಪಟ್ಟಿಯನ್ನು ಸಾರ್ವಜನಿಕ ಪ್ರಕಟಣೆಯಲ್ಲಿ ಹಾಕಿದರೆ ನಿಜವಾದ ಅಂಗವಿಕಲರು ಯಾರು ಎಂಬುದು ತಿಳಿಯಲಿದೆ. ಇಂಥ ಅಕ್ರಮಗಳ ನಿಯಂತ್ರಣಕ್ಕೆ ಸರ್ಕಾರ ಕ್ರಮ ಕೈಗೊಳ್ಳಬೇಕು ಎಂದು ಚೇಳೂರಿನ ಸೂರ್ಯಪ್ರಕಾಶ್ ಎಂಬುವರು ಒತ್ತಾಯಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT