ಬುಧವಾರ, ಆಗಸ್ಟ್ 17, 2022
25 °C

ಸಮಸ್ಯೆ ಪರಿಹಾರಕ್ಕೆ ಹೋರಾಟ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಚಿಂತಾಮಣಿ: ಕನ್ನಡಪರ ಸಂಘಟನೆಗಳ ಮುಖಂಡರು ಹಾಗೂ ಕಾರ್ಯಕರ್ತರು ನೆಲ, ಜಲ, ಭಾಷೆಯ ಜತೆಗೆ ಜನಸಾಮಾನ್ಯರ ಸಮಸ್ಯೆಗಳ ಬಗ್ಗೆಯೂ ಹೋರಾಟ ನಡೆಸಬೇಕು ಎಂದು ಜಯಕರ್ನಾಟಕ ಸಂಘಟನೆಯ ಜಿಲ್ಲಾ ಘಟಕದ ಅಧ್ಯಕ್ಷ ಶ್ರೀನಿವಾಸ್ ಸಲಹೆ ನೀಡಿದರು.

ನಗರದ ಪ್ರವಾಸಿ ಮಂದಿರದಲ್ಲಿ ಸೋಮವಾರ ನಡೆದ ನಗರ ಘಟಕ, ಚಿಲಕಲನೇರ್ಪು ಹಾಗೂ ಆಟೊ ಘಟಕಗಳ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದರು.

ಸಂಘಟನೆಯ ಪದಾಧಿಕಾರಿಗಳು ಕೇವಲ ಪತ್ರಿಕಾ ಹೇಳಿಕೆಗಳಿಗೆ ಮಾತ್ರ ಸೀಮಿತವಾಗಬಾರದು. ಸಾರ್ವಜನಿಕರ ಸಮಸ್ಯೆಗಳನ್ನು ಹಿಡಿದು ಹೋರಾಟ ನಡೆಸುವ ಮೂಲಕ ಜನರ ವಿಶ್ವಾಸ ಗಳಿಸಬೇಕು. ಜನರ ಪ್ರೀತಿ, ವಿಶ್ವಾಸ ಗಳಿಸಿದರೆ ಮಾತ್ರ ಸಂಘಟನೆ ಬಲಿಷ್ಠಗೊಳಿಸಲು ಸಾಧ್ಯ ಎಂದರು.

ಕನ್ನಡ ಜಲ, ನೆಲ, ಭಾಷೆಗೆ ಚ್ಯುತಿ ಬಂದಾಗ ಬೀದಿಗೆ ಇಳಿದು ಶಾಂತಿಯುತ ಹೋರಾಟಕ್ಕೆ ಸಿದ್ಧರಾಗಿರಬೇಕು. ಇತರೆ ಭಾಷೆಯ ಜನರಿಗೂ ಸ್ನೇಹ, ಸೌಹಾರ್ದದಿಂದ ನಾಡಿನ ಭಾಷೆಯ ಕಲಿಕೆಯ ಮಹತ್ವ ತಿಳಿಸಬೇಕು. ನಾಡಿನಲ್ಲಿ ವಾಸ ಮಾಡುವ ಪ್ರತಿಯೊಬ್ಬರೂ ಕನ್ನಡವನ್ನು ಕಲಿಯಲೇ ಬೇಕು ಎಂದರು.

ಜಯಕರ್ನಾಟಕ ಸಂಘಟನೆಯನ್ನು ರಾಜ್ಯದಾದ್ಯಂತ ಪುನರ್ ಸಂಘಟನೆಗೊಳಿಸಲಾಗುತ್ತಿದೆ. ಎಲ್ಲ ಕಡೆಯೂ ನೂತನ ಪದಾಧಿಕಾರಿಗಳನ್ನು ನೇಮಕ ಮಾಡಲಾಗುತ್ತಿದೆ. ಕಾರ್ಯಕರ್ತರು ಸಂಘಟನೆಯನ್ನು ಬಲಿಷ್ಠಗೊಳಿಸಲು ಪ್ರಾಮಾಣಿಕವಾಗಿ ಶ್ರಮಿಸಬೇಕು ಎಂದು ಮನವಿ ಮಾಡಿದರು.

ಪದಾಧಿಕಾರಿಗಳು: ನವೀನ್ ರೆಡ್ಡಿ-ನಗರ ಘಟಕದ ಅಧ್ಯಕ್ಷ, ಕೃಷ್ಣಾರೆಡ್ಡಿ-ಜಿಲ್ಲಾ ಕಾರ್ಯದರ್ಶಿ, ನರಸಿಂಹಯ್ಯ-ಆಟೊ ಘಟಕದ ಅಧ್ಯಕ್ಷ, ಆನಂದ-ಸಂಘಟನಾ ಕಾರ್ಯದರ್ಶಿ, ಮಸ್ತಾನ್, ವೆಂಕಟೇಶ್-ಸದಸ್ಯರು.

ಕಸಬಾ ಹೋಬಳಿ: ನಾಗರಾಜ್– ಅಧ್ಯಕ್ಷ, ವಿ. ಮಂಜುನಾಥ್– ಉಪಾಧ್ಯಕ್ಷ, ಮುರಳಿ– ಕಾರ್ಯಾಧ್ಯಕ್ಷ, ದೇವರಾಜ್– ಸಹ ಕಾರ್ಯದರ್ಶಿ, ಅಶೋಕರೆಡ್ಡಿ– ಸಂಘಟನಾ ಕಾರ್ಯದರ್ಶಿ, ಮಂಜುನಾಥ್– ಸಂಚಾಲಕ.

ಚಿಲಕಲನೇರ್ಪು ಹೋಬಳಿ: ಅಸ್ಲಾಂ– ಅಧ್ಯಕ್ಷ, ಆನಂದ್– ಕಾರ್ಯಾಧ್ಯಕ್ಷ, ಫೈರೋಜ್– ಸಂಘಟನಾ ಕಾರ್ಯದರ್ಶಿ.

ಸಂಘಟನೆಯ ಜಿಲ್ಲಾ ಕಾರ್ಯಾಧ್ಯಕ್ಷ ಪ್ರದೀಪ್, ತಾಲ್ಲೂಕು ಅಧ್ಯಕ್ಷ ರಮೇಶಕುಮಾರ್, ಕಾರ್ಯಾಧ್ಯಕ್ಷ ಸತ್ಯನಾರಾಯಣಸಿಂಗ್, ಉಪಾಧ್ಯಕ್ಷ ಮುನಿರೆಡ್ಡಿ, ಪ್ರಧಾನ ಕಾರ್ಯದರ್ಶಿ ಕೆ.ಎನ್. ಸದಾನಂದ, ಸಂಘಟನಾ ಕಾರ್ಯದರ್ಶಿ ಟಿ. ಸೀನಾ, ರವಿಕುಮಾರ್ ಹಾಗೂ ವಿವಿಧ ಘಟಕಗಳ ಪದಾಧಿಕಾರಿಗಳು, ಕಾರ್ಯಕರ್ತರು ಭಾಗವಹಿಸಿದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.