ಗೌರಿಬಿದನೂರು: ಎತ್ತಿನ ಹೊಳೆಯ ಯೋಜನೆಯ ಸತ್ಯಾನ್ವೇಷಣೆಯಾಗಬೇಕೆಂದು ಒತ್ತಾಯಿಸಿ ಪ್ರಜಾಸೌಧದ ಆವರಣದಲ್ಲಿ ಪರಿಸರವಾದಿ ಚೌಡಪ್ಪ ಬುಧವಾರ ಬೆಳಗ್ಗೆಯಿಂದ ಸಂಜೆವರೆಗೆ ಒಂದು ದಿನದ ಮೌನ ಪ್ರತಿಭಟನೆ ನಡೆಸಿದರು.

ಎತ್ತಿನ ಹೊಳೆ ಎಂಬ ದೋಖಾ ಯೋಜನೆಯಿಂದ ಜಿಲ್ಲೆಗೆ ಒಂದು ಹಾನಿ ನೀರು ಬರುವುದಿಲ್ಲ. ಈ ಯೋಜನೆಯ ಸತ್ಯಾನ್ವೇಷಣೆ ನಡೆಸಲು, ಜಿಲ್ಲೆಯಲ್ಲಿ ಉಸ್ತುವಾರಿ ಸಚಿವರು, ಜಿಲ್ಲಾಧಿಕಾರಿಗಳು, ಜಿಲ್ಲೆಯ ಎಲ್ಲಾ ಶಾಸಕರು, ಸಂಸದರು, ನೀರಾವರಿ ತಜ್ಞರು, ನೀರಾವರಿ ಹೋರಾಟಗಾರರು, ಸಂಘ ಸಂಸ್ಥೆಗಳು ಮತ್ತು ಮಾಧ್ಯಮ ಪ್ರತಿನಿಧಿಗಳನ್ನು ಯೋಜನಾ ಸ್ಥಳಕ್ಕೆ ಕರೆದುಕೊಂಡು ಹೋಗಲು ಜಿಲ್ಲಾಡಳಿತ ವ್ಯವಸ್ಥೆ ಮಾಡಬೇಕು ಎಂದು ಆಗ್ರಹಿಸಿದರು.

ಸಾವಿರಾರು ಕೋಟಿ ರೂಪಾಯಿಗಳ ಈ ಯೋಜನೆ ಹಲವಾರು ವರ್ಷಗಳಿಂದ ಜನಸಾಮಾನ್ಯರಲ್ಲಿ ಮತ್ತು ಜನ ಪ್ರತಿನಿಧಿಗಳಲ್ಲಿ ಗೊಂದಲ ಮೂಡಿಸಿದೆ. ಎಲ್ಲಾ ಗೊಂದಲಗಳ ನಿವಾರಣೆಗೆ ಈ ಸತ್ಯಾನ್ವೇಷಣೆ ಅಧ್ಯಯನ ಪ್ರವಾಸ ಅನಿವಾರ್ಯವಾಗಿದೆ ಎಂದು ಒತ್ತಾಯಿಸಿದರು=

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.