ಭಾನುವಾರ, ಆಗಸ್ಟ್ 14, 2022
25 °C

2ನೇ ಹಂತ: ಗ್ರಾಮ ಪಂಚಾಯಿತಿ ಚುನಾವಣೆ ಅಧಿಸೂಚನೆ ಪ್ರಕಟ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಚಿಕ್ಕಬಳ್ಳಾಪುರ: ಗ್ರಾಮ ಪಂಚಾಯಿತಿಗಳಿಗೆ 2ನೇ ಹಂತದಲ್ಲಿ ನಡೆಯುವ ಚುನಾವಣೆಗೆ ಜಿಲ್ಲಾ ಚುನಾವಣಾಧಿಕಾರಿಯೂ ಆದ ಜಿಲ್ಲಾಧಿಕಾರಿ ಆರ್. ಲತಾ ಅಧಿಸೂಚನೆ ಹೊರಡಿಸಿದ್ದಾರೆ.

ಜಿಲ್ಲೆಯ ಚಿಕ್ಕಬಳ್ಳಾಪುರ ತಾಲ್ಲೂಕು ವ್ಯಾಪ್ತಿಯ 23, ಗೌರಿಬಿದನೂರು ತಾಲ್ಲೂಕು ವ್ಯಾಪ್ತಿಯ 37 ಮತ್ತು ಗುಡಿಬಂಡೆ ತಾಲ್ಲೂಕು ವ್ಯಾಪ್ತಿಯ 8 ಗ್ರಾಮ ಪಂಚಾಯಿತಿಗಳಿಗೆ ಚುನಾವಣೆ ನಡೆಯಲಿದೆ.

ನಾಮಪತ್ರಗಳನ್ನು ಸಲ್ಲಿಸಲು ಕೊನೆಯ ಡಿ.16; ನಾಮಪತ್ರಗಳ ಪರಿಶೀಲನೆ ಡಿ.17; ಉಮೇದುವಾರಿಕೆಗಳನ್ನು ಹಿಂತೆಗೆದುಕೊಳ್ಳಲು ಕೊನೆಯ ದಿನ ಡಿ.19; ಡಿ.27ರಂದು ಮತದಾನ ನಡೆಯಲಿದೆ. ಮತಗಳ ಎಣಿಕೆ ಡಿ.30ರಂದು ನಡೆಯಲಿದೆ.

2ನೇ ಹಂತದಲ್ಲಿ ಚುನಾವಣೆ ನಡೆಯುವ ಗ್ರಾಮ ಪಂಚಾಯಿತಿಗಳು, ಒಟ್ಟು ಸ್ಥಾನಗಳ ವಿವರ ಇಂತಿದೆ:

ಚಿಕ್ಕಬಳ್ಳಾಪುರ ತಾಲ್ಲೂಕು: ಮಂಡಿಕಲ್ಲು -14; ಕಮ್ಮಗುಟ್ಟಹಳ್ಳಿ -16; ಪೆರೇಸಂದ್ರ -20; ಆರೂರು -13; ದೊಡ್ಡಪಾಯಲಗುರ್ಕಿ -18; ಗೊಲ್ಲಹಳ್ಳಿ -16; ಆವಲಗುರ್ಕಿ- 16; ಹಾರೋಬಂಡೆ-18; ದಿಬ್ಬೂರು -17; ಅಂಗರೇಖನಹಳ್ಳಿ -18; ಮಂಚನಬಲೆ -17; ತಿಪ್ಪೇನಹಳ್ಳಿ -19; ಪೋಶೆಟ್ಟಿಹಳ್ಳಿ -19; ಮುದ್ದೇನಹಳ್ಳಿ -22; ಪಟ್ರೇನಹಳ್ಳಿ -12; ಹೊಸಹುಡ್ಯ - 19; ಅಜ್ಜವಾರ - 17; ಕೊಂಡೇನಹಳ್ಳಿ -16; ದೊಡ್ಡಮರಳಿ- 16; ಕುಪ್ಪಹಳ್ಳಿ -18; ನಂದಿ - 14; ಅಗಲಗುರ್ಕಿ-19; ಅಡ್ಡಗಲ್ಲು- 9. ಒಟ್ಟು - 383

ಗೌರಿಬಿದನೂರು: ನಗರಗೆರೆ - 17; ಜಿ ಕೊತ್ತೂರು - 15; ವಾಟದಹೊಸಹಳ್ಳಿ - 20; ಮುದ್ದಲೋಡು - 14; ಮೇಳ್ಯ - 16; ನಕ್ಕಲಹಳ್ಳಿ - 17; ದಾರಿನಾಯಕನಪಾಳ್ಯ - 18; ಹುದಗೂರು - 14; ಬಿ.ಬೊಮ್ಮಸಂದ್ರ - 17; ನಾಮಗೊಂಡ್ಲು - 21; ಜರಬಂಡಹಳ್ಳಿ - 12; ಮಿಣಕನಗುರ್ಕಿ - 18; ಪುರ - 19; ಗೌಡಗೆರೆ - 14; ಹಳೇಹಳ್ಳಿ - 12; ಅಲಕಾಪುರ - 19; ಜಿ.ಬೊಮ್ಮಸಂದ್ರ - 14; ತೊಂಡೇಬಾವಿ - 21; ಕಲ್ಲಿನಾಯಕನಹಳ್ಳಿ - 15; ಬೇವಿನಹಳ್ಳಿ - 14; ಅಲ್ಲೀಪುರ - 28; ತರಿದಾಳು - 13; ಗೆದರೆ - 19; ಸೊನಗಾನಹಳ್ಳಿ - 18; ಹೊಸೂರು - 17; ಮುದುಗೆರೆ - 15; ಕಾದಲವೇಣಿ - 14; ಕುರೂಡಿ - 15; ರಮಾಪುರ - 21; ಇಡಗೂರು - 13; ದೊಡ್ಡಕುರುಗೋಡು - 21; ಚಿಕ್ಕಕುರುಗೋಡು - 11; ಬ್ಯೆಚಾಪುರ - 13; ಗಂಗಸಂದ್ರ - 12; ಕುರುಬರಹಳ್ಳಿ - 12; ಹಾಲಗಾನಹಳ್ಳಿ - 13; ಶ್ಯಾಂಪುರ - 11. ಒಟ್ಟು - 593

ಗುಡಿಬಂಡೆ: ಉಲ್ಲೋಡು - 14; ಹಂಪಸಂದ್ರ - 21; ಎಲ್ಲೋಡು - 12; ಸೋಮೇನಹಳ್ಳಿ - 23; ತಿರುಮಣಿ - 17; ವರ್ಲಕೊಂಡ - 13; ಬೀಚಗಾನಹಳ್ಳಿ - 12; ದಪ್ಪರ್ತಿ- 7. ಒಟ್ಟು - 119.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು