ಗೌರಿಬಿದನೂರು: ನಗರದ ಮಾದನಹಳ್ಳಿ ಕೆರೆಯಲ್ಲಿ ನಿರ್ಮಿಸಿರುವ ವಿವಿಧ ಸಮುದಾಯ ಭವನಗಳು ಪಾಳು ಬೀಳುತ್ತಿವೆ.

ಪ್ರತಿಯೊಂದು ಸಮುದಾಯಗಳು ತಮ್ಮ ಜಾತಿ, ಸಮುದಾಯಗಳ ಕಾರ್ಯಕ್ರಮಗಳಿಗೆ ಭವನಗಳು ಬೇಕು ಎಂದು ಶಾಸಕರಿಗೆ, ಆಯಾ ಇಲಾಖೆಗಳಿಗೆ ಮನವಿ ಸಲ್ಲಿಸುತ್ತವೆ. ಸಾಮಾನ್ಯವಾಗಿ ಮಹನೀಯ ಜಯಂತಿಯ ಸಂದರ್ಭದಲ್ಲಿ ‘ನಮ್ಮ ಸಮುದಾಯಕ್ಕೆ ಭವನ ನಿರ್ಮಿಸಿಕೊಡಿ’, ‘ಜಮೀನು ಕೊಡಿ’ ಎನ್ನುವ ಮನವಿಗಳು ಶಾಸಕರ ಕೈ ಸೇರುತ್ತವೆ.

ಶಾಸಕರು ಸಹ ಮತದ ದೃಷ್ಟಿಯಿಂದ ಅಥವಾ ಸಮುದಾಯಗಳು ಅಭಿವೃದ್ಧಿ ಆಗಬೇಕು ಎನ್ನುವ ಆಸಕ್ತಿಯ ಫಲವಾಗಿ ಸಮುದಾಯಗಳ ಬೇಡಿಕೆಗಳಿಗೆ ಅಸ್ತು ಎನ್ನುವರು.

ಹೀಗೆ ಗೌರಿಬಿದನೂರು ತಾಲ್ಲೂಕಿನ ಆಯಾ ಸಮುದಾಯದ ಜನರಿಗೆ ಗೌರಿಬಿದನೂರಿನ ಮಾದನಹಳ್ಳಿ ಕೆರೆಯಲ್ಲಿ ಭವನಗಳನ್ನು ನಿರ್ಮಿಸಲಾಗಿದೆ. ಸಾಮಾನ್ಯವಾಗಿ ಭವನಗಳು ಆಯಾ ಜಾತಿ ಸಂಘ ಸಂಸ್ಥೆಗಳ ಅಥವಾ ಇಲಾಖೆಗಳ ಅಧೀನದಲ್ಲಿ ಇರುತ್ತವೆ.

ಗೌರಿಬಿದನೂರು ಮಾದನಹಳ್ಳಿ ಕೆರೆಯಲ್ಲಿ ನಿರ್ಮಿಸಿರುವ ಹಲವು ಜಾತಿಗಳ ಸಮುದಾಯ ಭವನಗಳು ನಿರ್ವಹಣೆ ಕೊರತೆಯಿಂದ ಪಾಳು ಬೀಳುತ್ತಿವೆ. ಇಲ್ಲಿ ಕನಕ ಸಮುದಾಯ ಭವನ, ಭೋವಿ ಸಮುದಾಯ ಭವನ, ಮರಾಠ ಸಮುದಾಯ ಭವನ, ಕುಂಬಾರ ಭವನ, ಸ್ತ್ರೀ ಶಕ್ತಿ ಭವನ, ಮಡಿವಾಳ ಸಮುದಾಯ ಭವನ, ವಿಶ್ವ ಕರ್ಮ ಸಮುದಾಯ ಭವನ, ಸವಿತಾ ಸಮಾಜ ಸಮುದಾಯ ಭವನಗಳ ಕಟ್ಟಡ ಕಾಮಗಾರಿಗಳು ಪೂರ್ಣವಾಗಿವೆ.

ಆದರೆ ಅಂತಿಮ ಹಂತದ ಕೆಲಸಗಳಿಗೆ ಅನುದಾನದ ಕೊರತೆಯಿಂದ ಮತ್ತು ನಿರ್ವಹಣೆ ಕೊರತೆಯಿಂದ ಅನಾಥವಾಗಿವೆ. ಅರೆಬರೆಯಾಗಿ ತಲೆ ಎತ್ತಿ ನಿಂತಿರುವ ಈ ಕಟ್ಟಡಗಳು ಉದ್ಘಾಟನೆಗೆ ಮೊದಲೇ ಭವನಗಳ ಸುತ್ತಮುತ್ತ ಗಿಡ ಗಂಟಿಗಳು ಬೆಳೆದು ಪಾಳು ಬೀಳುವ ಸ್ಥಿತಿ ತಲುಪಿವೆ. ಸಮುದಾಯದ ಕಟ್ಟಡಗಳು ಉಪಯೋಗಕ್ಕೆ ಬಾರದೆ ಅನುಪಯುಕ್ತವಾಗಿವೆ. ಖುದ್ದು ಆಯಾ ಸಮುದಾಯದ ಮುಖಂಡರೇ ಈ ವಿಚಾರವಾಗಿ ತೀವ್ರ ಬೇಸರ ವ್ಯಕ್ತಪಡಿಸುತ್ತಿದ್ದಾರೆ.

ಲಕ್ಷಾಂತರ ರೂಪಾಯಿ ವೆಚ್ಚದಲ್ಲಿ ನಿರ್ಮಿಸಿರುವ ಕಟ್ಟಡಗಳಿಗೆ ಮೂಲ ಸೌಲಭ್ಯಗಳನ್ನು ಕಲ್ಪಿಸಲು ಸಂಭಂದಪಟ್ಟ ಇಲಾಖೆಗಳು ವಿಫಲವಾಗಿವೆ.

ಭವನಗಳಲ್ಲಿ ಕುಡಿಯುವ ನೀರಿನ ಸೌಲಭ್ಯ, ವಿದ್ಯುತ್ ಸಂಪರ್ಕ, ಶೌಚಾಲಯ, ನೀರು, ಮೂಲ ಸೌಲಭ್ಯ ಕೊರತೆ ಎದ್ದು ಕಾಣುತ್ತಿದೆ. ಈ ಎಲ್ಲಾ ಸೌಕರ್ಯಗಳನ್ನು ಕಲ್ಪಿಸಿ ಸಮುದಾಯಗಳಿಗೆ ಹಸ್ತಾಂತರಿಸಿದರೆ ಸಮುದಾಯಗಳಿಗೆ ಉಪಯೋಗವಾಗುತ್ತಿತ್ತು.

ಸಮುದಾಯದವರು ನಿರ್ವಹಣೆ ಮಾಡುತ್ತಿದ್ದರು. ಆದರೆ ಅರೆ ಬರೆ ಕಟ್ಟಡಗಳನ್ನು ನಿರ್ಮಿಸಿರುವುದರಿಂದ ಸಮುದಾಯದವರು ಸಹ ಅವುಗಳನ್ನು ನಿರ್ಲಕ್ಷ್ಯವಹಿಸಿದ್ದಾರೆ.

ಈ ಸಮುದಾಯ ಭವನಗಳು ಜೂಜಾಟ ಹಾಗೂ ಅನೈತಿಕ ಚಟುವಟಿಕೆಗಳ ತಾಣಗಳಾಗಿವೆ. ಕೆರೆಯಲ್ಲಿ ಸರ್ಕಾರದ ವಿದ್ಯಾರ್ಥಿ ನಿಲಯಗಳು, ಕಚೇರಿಗಳು ಸಹ ಇವೆ. ಸಂಬಂಧಪಟ್ಟ ಹಲವು ಇಲಾಖೆಗಳು ಸಹ ಈ ಭಾಗದಲ್ಲಿ ಕಚೇರಿಗಳನ್ನು ಹೊಂದಿವೆ. ಆದರೆ ಈವರೆಗೆ ಯಾರು ಸಹ ಇವುಗಳ ಅಭಿವೃದ್ಧಿ ಬಗ್ಗೆ ತಲೆ ಕೆಡಿಸಿಕೊಳ್ಳುತ್ತಿಲ್ಲ.

ಸಮುದಾಯಕ್ಕೆ ಅನುಕೂಲವಾಗಲಿ ಎನ್ನುವ ಕಾರಣಕ್ಕೆ ಮನವಿ ಸಲ್ಲಿಸಿ ಮಂಜೂರು ಮಾಡಿಸಿಕೊಂಡಿದ್ದ ಭವನಗಳ ಇಂದಿಗೂ ಬಳಕೆಗೆ ಮುಕ್ತವಾಗದಿರುವುದಕ್ಕೆ ಆಯಾ ಸಮಾಜಗಳ ಮುಖಂಡರು ಬೇಸರ ವ್ಯಕ್ತಪಡಿಸುತ್ತಾರೆ.

ಸೌಲಭ್ಯ ಒದಗಿಸಿಲ್ಲ

ಮೂಲ ಸೌಕರ್ಯಗಳಾದ ನೀರು ವಿದ್ಯುತ್ ಕಾಂಪೌಂಡ್ ಒದಗಿಸಿಲ್ಲ. ಆದಷ್ಟು ಬೇಗ ಕಾಮಗಾರಿಗಳನ್ನು ಪೂರ್ಣಗೊಳಿಸಿ ಸಮುದಾಯ ಅಭಿವೃದ್ಧಿ ಕಾರ್ಯಗಳಿಗೆ ಅನುವು ಮಾಡಿಕೊಡಬೇಕು.

ನಾಗರಾಜ್ ಕುಂಬಾರ ಸಂಘದ ಉಪಾಧ್ಯಕ್ಷ

ಅನುದಾನ ಕೊರತೆ

ಕಟ್ಟಡಗಳು ಮಾತ್ರ ಸಿದ್ದವಾಗಿವೆ. ಅನುದಾನದ ಕೊರತೆಯಿಂದ ಶೌಚಾಲಯ ನೀರು ಸೇರಿದಂತೆ ಮೂಲ ಸೌಕರ್ಯಗಳು ಸಿದ್ದಗೊಂಡಿಲ್ಲ. ಇದರಿಂದ ಶಿಥಿಲಾವಸ್ಥೆ ತಲುಪುತ್ತಿವೆ.

ಪ್ರಮೀಳಾ ರಾಧಾಕೃಷ್ಣ ತಾಲ್ಲೂಕು ವಿಶ್ವ ಕರ್ಮ ಸಂಘದ ಅಧ್ಯಕ್ಷೆ

ಅಂತಿಮ ಕೆಲಸಗಳು ಬಾಕಿ

ಕಟ್ಟಡ ಕೆಲಸ ಮುಗಿದು ಒಂದೂವರೆ ವರ್ಷವಾಗಿದೆ. ಅಂತಿಮ ಹಂತದ ಕೆಲಸಗಳು ಮಾತ್ರ ಬಾಕಿ ಇವೆ. ಇವುಗಳನ್ನು ಪೂರ್ಣಗೊಳಿಸಿದರೆ ಸಮುದಾಯದ ಚಟುವಟಿಕೆಗಳಿಗೆ ಅನುಕೂಲವಾಗಲಿದೆ. ಅಧಿಕಾರಿಗಳ ಗಮನಕ್ಕೆ ತರಲಾಗಿದೆ. ಈವರೆಗೂ ಅಂತಿಮ ಕೆಲಸಗಳನ್ನು ಪೂರ್ಣಗೊಳಿಸಿಲ್ಲ.

ಶಿವಕುಮಾರ್ ಜಿ.ಡಿ. ತಾಲ್ಲೂಕು ಅಧ್ಯಕ್ಷ ಸವಿತಾ ಸಮಾಜ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.