ಮಂಗಳವಾರ, ಅಕ್ಟೋಬರ್ 20, 2020
26 °C
ಹೈಕೋರ್ಟ್‌ ಆದೇಶದ 16 ವರ್ಷಗಳ ಬಳಿಕ ಕಾರ್ಯಾಚರಣೆ, ರಾಜಕೀಯ ವಲಯದಲ್ಲೂ ಸಂಚಲನ

ಚಿಕ್ಕಬಳ್ಳಾಪುರ: ಪಂಚಗಿರಿ ಬೋಧನಾ ಪ್ರೌಢಶಾಲೆ ವಶಕ್ಕೆ ಪಡೆದ ನಗರಸಭೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಚಿಕ್ಕಬಳ್ಳಾಪುರ: ಕೆ.ವಿ ಮತ್ತು ಪಂಚಗಿರಿ ಶಿಕ್ಷಣ ಸಂಸ್ಥೆಯ ವಶದಲ್ಲಿದ್ದ ನಗರದ ಪಂಚಗಿರಿ ಬೋಧನಾ ಪ್ರೌಢಶಾಲೆಯನ್ನು ಬುಧವಾರ ನಗರಸಭೆ ತನ್ನ ಸುಪರ್ದಿಗೆ ಪಡೆಯಿತು. 

1973ರಲ್ಲಿ ಅಂದಿನ ಮುನ್ಸಿಪಾಲಿಟಿಯಿಂದ ಬಡ ಮಕ್ಕಳ ಶಿಕ್ಷಣ ಕಲ್ಪಿಸಲು ನಗರದಲ್ಲಿ ಸುಮಾರು ಒಂದೂವರೆ ಎಕರೆ ಪ್ರದೇಶದಲ್ಲಿ ಮುನ್ಸಿಫಲ್ ಬೋಧನಾ ಪ್ರೌಢಶಾಲೆಯನ್ನು ಆರಂಭಿಸಲಾಗಿತ್ತು. ಕಾಲಾಂತರದಲ್ಲಿ ಈ ಶಾಲೆಯನ್ನು ಕೆ.ವಿ ಮತ್ತು ಪಂಚಗಿರಿ ಶಿಕ್ಷಣ ಸಂಸ್ಥೆ ಪಡೆದು ಪಂಚಗಿರಿ ಬೋಧನಾ ಪ್ರೌಢ ಶಾಲೆಯಾಗಿ ಪರಿವರ್ತಿಸಿತ್ತು. ಕೆಲ ವರ್ಷಗಳ ಹಿಂದಷ್ಟೇ ಈ ಶಾಲೆ ಸರ್ಕಾರದ ಅನುದಾನಕ್ಕೆ ಒಳಪಟ್ಟಿತ್ತು.

ಈ ಶಾಲೆಯ ಮಾಲಿಕತ್ವದ ವ್ಯಾಜ್ಯ ಎರಡು ದಶಕಗಳ ಹಿಂದೆ ನ್ಯಾಯ್ಯಾಲಯದ ಮೆಟ್ಟಿಲೇರಿತ್ತು. 2014ರ ಡಿಸೆಂಬರ್ 4 ರಂದು ಹೈಕೋರ್ಟ್ ಕೆ.ವಿ ಮತ್ತು ಪಂಚಗಿರಿ ಶಿಕ್ಷಣ ಸಂಸ್ಥೆಯ ಮೇಲ್ಮನವಿಯನ್ನು ವಜಾಗೊಳಿಸಿತ್ತು. ಆದರೂ, ಈವರೆಗೆ ಶಾಲೆಯನ್ನು ಶಿಕ್ಷಣ ಸಂಸ್ಥೆಯೇ ನಿರ್ವಹಣೆ ಮಾಡುತ್ತ ಬಂದಿತ್ತು.

16 ವರ್ಷಗಳ ಬಳಿಕ ನಗರಸಭೆ ಬುಧವಾರ ಪೊಲೀಸರ ಬಿಗಿ ಬಂದೋಬಸ್ತ್ ನಡುವೆ ಶಾಲೆಯನ್ನು ತನ್ನ ವಶಕ್ಕೆ ಪಡೆದು, ಶಾಲೆಗೆ ಮುನ್ಸಿಪಾಲಿಟಿ ಬೋಧನಾ ಪ್ರೌಢಶಾಲೆ (ಎಂಪಿಎಚ್‍ಎಸ್) ಎಂದು ಮರು ನಾಮಕರಣ ಮಾಡಿರುವುದು ಶೈಕ್ಷಣಿಕ ವಲಯ ಮಾತ್ರವಲ್ಲದೇ ರಾಜಕೀಯ ವಲಯದಲ್ಲಿ ಸಹ ಸಂಚಲನ ಮೂಡಿಸಿದೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು