ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಹಿಳಾ ಸಂಘಟನೆಗೆ ಜೀವಿಕಾ ಆದ್ಯತೆ

Last Updated 30 ಮಾರ್ಚ್ 2022, 2:22 IST
ಅಕ್ಷರ ಗಾತ್ರ

ಗುಡಿಬಂಡೆ: ‘ಜೀವಿಕಾ ಸಂಘಟನೆಯು 30 ವರ್ಷಗಳಿಂದ ತಾಲ್ಲೂಕಿನ ವ್ಯಾಪ್ತಿಯಲ್ಲಿ ಸಂಘಟನೆ ಮಾಡಿ ಮಹಿಳಾ ದೌರ್ಜನ್ಯಗಳನ್ನು ತಡೆಗಟ್ಟುವ ಮೂಲಕ ಕಾನೂನಿನ ಬಗ್ಗೆ ಜಾಗೃತಿ ಮೂಡಿಸುತ್ತಿದೆ’ ಎಂದು ಜೀವಿಕಾ ರಾಜ್ಯ ಘಟಕದ ಅಧ್ಯಕ್ಷ ವಿ. ಗೋಪಾಲ್ ತಿಳಿಸಿದರು.

ಪಟ್ಟಣದಲ್ಲಿ ಗೋಪಾಲ್ ಬಣ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಮಹಿಳಾ ಸಾಂತ್ವನ ಕೇಂದ್ರದಿಂದ ನಡೆದ ಮಹಿಳಾ ದಿನಾಚರಣೆಯಲ್ಲಿ ಅವರು ಮಾತನಾಡಿದರು.

ಸರ್ಕಾರ ಮಹಿಳೆಯರ ರಕ್ಷಣೆಗೆ ಸೂಕ್ತವಾದ ಕಾನೂನುಗಳನ್ನು ಜಾರಿಗೆ ತರಬೇಕು. ಮಹಿಳೆಯರಿಗೆ ಎಲ್ಲರೂ ಗೌರವ ನೀಡಬೇಕು. ಪ್ರತಿಯೊಂದು ರಂಗದಲ್ಲೂ ಅವರಿಗೆ ಸ್ಥಾನಮಾನ ಸಿಗಬೇಕು ಎಂದು
ಒತ್ತಾಯಿಸಿದರು.

ಜೀವಿಕಾ ಜಿಲ್ಲಾ ಸಂಚಾಲಕ ಬಾಗೇಪಲ್ಲಿ ನಾರಾಯಣಸ್ವಾಮಿ ಮಾತನಾಡಿ, ಜೀತ ಕಾರ್ಮಿಕರು, ಮಹಿಳೆಯ ಸಮಸ್ಯೆಗಳ ಬಗ್ಗೆ ಜೀವಿಕಾ ಹೋರಾಟ ಮಾಡುತ್ತಿದೆ ಎಂದರು.

ಜೀವಿಕಾ ರಾಜ್ಯ ಮಹಿಳಾ ಘಟಕದ ಅಧ್ಯಕ್ಷೆ ರತ್ನಮ್ಮ ಮಾತನಾಡಿ, ಪುರುಷ ಪ್ರಧಾನ ಸಮಾಜದಲ್ಲಿ ಮಹಿಳೆಯರಿಗೆ ಹೆಚ್ಚಿನ ಪ್ರಾಧಾನ್ಯ ಸಿಗುತ್ತಿಲ್ಲ. ಇದರಿಂದ ಅರ್ಥಿಕ, ಸಾಮಾಜಿಕ, ರಾಜಕೀಯವಾಗಿ ಹಿಂದುಳಿದಿದ್ದಾರೆ ಎಂದು
ಹೇಳಿದರು.

ತಹಶೀಲ್ದಾರ್ ಸಿಗ್ಬತ್‌ ಉಲ್ಲಾ, ಪಿಎಸ್ಐ ಪ್ರತಾಪ್, ಶಿಶು ಅಭಿವೃದ್ಧಿ ಯೋಜನಾಧಿಕಾರಿ ಮಹಮದ್ ರಫೀಕ್, ಕೃಷಿ ಇಲಾಖೆಯ ಎಡಿಎ ಅಮರನಾರಾಯಣ ರೆಡ್ಡಿ, ಪಟ್ಟಣ ಪಂಚಾಯಿತಿ ಅಧ್ಯಕ್ಷೆ ಬಷೀರಾ ರಿಜ್ವಾನ್, ಜಿಲ್ಲಾ ರೈತ ಸಂಘದ ಅಧ್ಯಕ್ಷ ಎಚ್.ಪಿ. ರಾಮನಾಥ, ಕಸಾಪ ಅಧ್ಯಕ್ಷ ಸುಬ್ಬರಾಯಪ್ಪ, ಸಿಐಟಿಯು ಜಿಲ್ಲಾ ಅಧ್ಯಕ್ಷೆ ಭಾಗ್ಯಮ್ಮ, ಜೀವಿಕಾ ತಾಲ್ಲೂಕು ಸಂಚಾಲಕ ರಾಮಾಂಜಿನೇಯ, ಮಹಿಳಾ ಸಂಚಾಲಕಿ ವೆಂಕಟಲಕ್ಷ್ಮಿ, ಸಾಂತ್ವನ ಕೇಂದ್ರದ ಆಪ್ತ ಸಮಾಲೋಚಕಿ ಸವಿತಾ, ಮುಖಂಡರಾದ ವಿಜಯಮ್ಮ, ಮುನಿಸ್ವಾಮಿ, ಆದಿನಾರಾಯಣಪ್ಪ, ಶ್ರೀರಾಮಪ್ಪ, ಚಿಕ್ಕಗಂಗಪ್ಪ, ಗಂಗಾಧರಪ್ಪ, ಗಂಗಪ್ಪ, ರಾಮಣ್ಣ, ವೆಂಕಟೇಶಪ್ಪ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT