ಚಿಕ್ಕಬಳ್ಳಾಪುರ: ಎಸ್ಎಸ್ಎಲ್ಸಿ ವಾರ್ಷಿಕ ಪರೀಕ್ಷೆಯ 2024–25ನೇ ಸಾಲಿನಲ್ಲಿ ಶೇ 50ಕ್ಕಿಂತ ಕಡಿಮೆ ಫಲಿತಾಂಶ ಪಡೆದ ಜಿಲ್ಲೆಯ 76 ಸರ್ಕಾರಿ ಮತ್ತು ಅನುದಾನಿತ ಪ್ರೌಢಶಾಲೆಗಳಿಗೆ ಜಿಲ್ಲಾ ಶಾಲಾ ಶಿಕ್ಷಣ ಇಲಾಖೆ ನೋಟಿಸ್ ಜಾರಿಗೊಳಿಸಿದೆ.

ಕಡಿಮೆ ಫಲಿತಾಂಶಕ್ಕೆ ಕಾರಣಗಳೇನು. ಈ ಬಗ್ಗೆ 15 ದಿನಗಳಲ್ಲಿ ಉತ್ತರಿಸಿ ಎಂದು ಸೂಚಿಸಿದೆ. ಕೆಲವು ಶಾಲೆಗಳ ಮುಖ್ಯಶಿಕ್ಷಕರು ಈಗಾಗಲೇ ಉತ್ತರಿಸಿದ್ದು, ‘ನಾವು ಎಲ್ಲ ರೀತಿಯಲ್ಲಿ ಶ್ರಮ ಹಾಕಿದ್ದೇವೆ. ಆದರೂ ಫಲಿತಾಂಶ ಕಡಿಮೆ ಆಗಿದೆ’ ಎಂದು ಉತ್ತರ ನೀಡಿದ್ದಾರೆ. ಮತ್ತಷ್ಟು ಶಾಲೆಗಳು ನೋಟಿಸ್ಗೆ ಉತ್ತರಿಸಬೇಕಿದೆ.

ಶಾಲೆಗಳಿಗೆ ನೋಟಿಸ್ ನೀಡಿರುವುದು ಆಯಾ ಶಾಲೆಗಳ ಮುಖ್ಯಶಿಕ್ಷಕರು ಮತ್ತು ಶಿಕ್ಷಕರಿಗೆ ಎಚ್ಚರಿಕೆ ಎನ್ನುವಂತಾಗಿದೆ. ಜಿಲ್ಲೆಯಲ್ಲಿ ಗೌರಿಬಿದನೂರು ಶೇ 50.70ರಷ್ಟು ಫಲಿತಾಂಶದ ಮೂಲಕ ಅತಿ ಕಡಿಮೆ ಫಲಿತಾಂಶ ಪಡೆದ ತಾಲ್ಲೂಕು ಎನಿಸಿತ್ತು. ಈ ತಾಲ್ಲೂಕಿನ 24 ಶಾಲೆಗಳಿಗೆ ನೋಟಿಸ್ ನೀಡಲಾಗಿದೆ. ಇದು ಜಿಲ್ಲೆಯಲ್ಲಿ ಗರಿಷ್ಠ ಸಂಖ್ಯೆಯ ಶಾಲೆಗಳು ನೋಟಿಸ್ ಪಡೆದ ತಾಲ್ಲೂಕು ಎನಿಸಿದೆ.

ಜಿಲ್ಲೆಯು ಈ ಬಾರಿಯ ಎಸ್ಎಸ್ಎಲ್ಸಿ ಪರೀಕ್ಷೆಯಲ್ಲಿ ಶೇ 63.20 ಫಲಿತಾಂಶ ಪಡೆದಿತ್ತು. ರಾಜ್ಯದಲ್ಲಿ 22ನೇ ಸ್ಥಾನಕ್ಕೆ ಭಾಜನವಾಗಿತ್ತು. ಈ ಹಿಂದಿನ ವರ್ಷಗಳಿಗೆ ಹೋಲಿಸಿದರೆ ಈ ಬಾರಿ ಫಲಿತಾಂಶದಲ್ಲಿ ಭಾರಿ ಕುಸಿತ ಕಂಡಿತ್ತು.

ಒಟ್ಟು 14,971 ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದು 9,462 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದರು. ಈ ಹಿಂದಿನ ವರ್ಷಗಳಿಗೆ ಹೋಲಿಸಿದರೆ ಜಿಲ್ಲೆಯಲ್ಲಿ ಈ ಬಾರಿ ಫಲಿತಾಂಶ ದೊಡ್ಡ ಪ್ರಮಾಣದಲ್ಲಿಯೇ ಕುಸಿತವಾಗಿದೆ.

2024ರಲ್ಲಿ ಶೇ 73.61 ಫಲಿತಾಂಶದ ಮೂಲಕ 18, 2023ನೇ ಸಾಲಿನಲ್ಲಿ ಶೇ 96.15 ಫಲಿತಾಂಶದ ಮೂಲಕ ಐದನೇ ಸ್ಥಾನದಲ್ಲಿ ಜಿಲ್ಲೆ ಇತ್ತು. 2022ರಲ್ಲಿ ಶೇ 95.23ರಷ್ಟು ಫಲಿತಾಂಶ ಬಂದಿತ್ತು. ವಿಶೇಷವಾಗಿ 2019-20ನೇ ಸಾಲಿನ ಎಸ್ಸೆಸ್ಸೆಲ್ಸಿ ಫಲಿತಾಂಶದಲ್ಲಿ ರಾಜ್ಯಕ್ಕೆ ಜಿಲ್ಲೆಯು ಮೊದಲ ಸ್ಥಾನ ಪಡೆದಿತ್ತು. ಆದರೆ ಈಗ ಈ ಹಿಂದಿನ ಎಲ್ಲ ಸಾಧನೆಗಳನ್ನು ಮರೆಮಾಚುವಂತೆ 22ನೇ ಸ್ಥಾನಕ್ಕೆ ತಲುಪಿದೆ.

ಈ ಹಿಂದಿನ ದಾಖಲೆಗಳನ್ನೇ ಮರೆ ಮಾಚುವಂತೆ ಪ್ರಸಕ್ತ ವರ್ಷ ಫಲಿತಾಂಶದಲ್ಲಿ ಕಳಪೆ ಸಾಧನೆ ಮಾಡಿದೆ. ‘ಶೇ 60ಕ್ಕಿಂತ ಕಡಿಮೆ ಫಲಿತಾಂಶ ಪಡೆದ ಜಿಲ್ಲೆಗಳ ಡಿಡಿಪಿಐಗಳಿಗೆ ನೋಟಿಸ್ ನೀಡಿ. ಅವರು ನೀಡುವ ಉತ್ತರ ಸಮರ್ಪಕ ಎನಿಸದಿದ್ದರೆ ಅವರ ವಿರುದ್ಧ ಕ್ರಮಕೈಗೊಳ್ಳಿ’ ಎಂದು ಇತ್ತೀಚೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಸರ್ಕಾರದ ಮುಖ್ಯಕಾರ್ಯದರ್ಶಿಗೆ ಸೂಚಿಸಿದ್ದರು. ಜಿಲ್ಲೆಯು ಶೇ 63.20 ಫಲಿತಾಂಶ ಪಡೆದಿರುವ ಕಾರಣ ಡಿಡಿಪಿಐ ಈ ನೋಟಿಸ್ನಿಂದ ಪಾರಾಗಿದ್ದಾರೆ.

ಆದರೆ ಜಿಲ್ಲೆಯಲ್ಲಿ ಕಳಪೆ ಫಲಿತಾಂಶ ಪಡೆದ ಸರ್ಕಾರಿ ಮತ್ತು ಅನುದಾನಿತ ಶಾಲೆಗಳ ವಿರುದ್ಧ ನಾಗರಿಕ ವಲಯದಲ್ಲಿ ತೀವ್ರ ಆಕ್ರೋಶ ವ್ಯಕ್ತವಾಗಿತ್ತು. ಕಳಪೆ ಫಲಿತಾಂಶಕ್ಕೆ ಕಾರಣಗಳನ್ನು ಹುಡುಕಲು ಜಿಲ್ಲಾ ಶಿಕ್ಷಣ ಇಲಾಖೆ ಮುಂದಾಗಿದೆ. ಈ ಭಾಗವಾಗಿಯೇ ಶಾಲೆಗಳಿಗೆ ನೋಟಿಸ್ ನೀಡಲಾಗಿದೆ.

ಈ ಹಿಂದಿನ ವರ್ಷಗಳಲ್ಲಿ ಜಿಲ್ಲೆಯಲ್ಲಿ ಶೇ 100ರಷ್ಟು ಫಲಿತಾಂಶವನ್ನು ಹೆಚ್ಚಿನ ಸಂಖ್ಯೆಯಲ್ಲಿ ಸರ್ಕಾರಿ ಮತ್ತು ಅನುದಾನಿತ ಶಾಲೆಗಳು ಪಡೆಯುತ್ತಿದ್ದವು. ಆದರೆ ಈ ಬಾರಿ ಕೇವಲ 9 ಪ್ರೌಢಶಾಲೆಗಳು ಮಾತ್ರ ಶೇ 100ರಷ್ಟು ಫಲಿತಾಂಶ ಪಡೆದಿವೆ.

ಗುಡಿಬಂಡೆ ಮತ್ತು ಚಿಂತಾಮಣಿಯ ತಲಾ ಒಂದು ಸರ್ಕಾರಿ ಪ್ರೌಢಶಾಲೆಗಳು ಇವೆ. ಚಿಕ್ಕಬಳ್ಳಾಪುರದ ಎರಡು, ಬಾಗೇಪಲ್ಲಿಯ ಒಂದು ಮತ್ತು ಚಿಂತಾಮಣಿಯ ನಾಲ್ಕು ಸೇರಿ ಒಟ್ಟು 7 ಅನುದಾನರಹಿತ ಪ್ರೌಢಶಾಲೆಗಳು ಶೇ 100 ಫಲಿತಾಂಶ ಪಡೆದಿವೆ.

ಹೀಗೆ ಈ ಬಾರಿ ಜಿಲ್ಲೆಯಲ್ಲಿ ಎಸ್ಎಸ್ಎಲ್ಸಿ ಫಲಿತಾಂಶ ಕುಸಿತಕ್ಕೆ ಕಾರಣಗಳನ್ನು ಹುಡುಕಲು ಶಿಕ್ಷಣ ಇಲಾಖೆ ಮುಂದಾಗಿದೆ. ಈ ಭಾಗವಾಗಿಯೇ ಕಡಿಮೆ ಫಲಿತಾಂಶದ ಶಾಲೆಗಳಿಗೆ ನೋಟಿಸ್ ಜಾರಿಗೊಳಿಸಿದೆ. ಮತ್ತೊಂದು ಕಡೆ ಕಲಿಕೆಯಲ್ಲಿ ಹಿಂದುಳಿದ ಮಕ್ಕಳನ್ನು ಗುರುತಿಸಲು ಅಭಿಯಾನ ಆರಂಭಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.