ಮಂಗಳವಾರ, ಆಗಸ್ಟ್ 3, 2021
28 °C

ಪರಿಸರ ಉಳಿದರೆ ಮನುಕುಲ ಉಳಿವು: ಶಾಸಕ ಎಂ.ಕೃಷ್ಣಾರೆಡ್ಡಿ ಸಲಹೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಚಿಂತಾಮಣಿ: ಮಳೆಯ ಕೊರತೆ ನೀಗಿಸಲು ಮರಗಿಡ ಬೆಳೆಸಬೇಕು ಎಂದು ಶಾಸಕ ಎಂ.ಕೃಷ್ಣಾರೆಡ್ಡಿ ಸಲಹೆ ನೀಡಿದರು.

ಅರಣ್ಯ ಇಲಾಖೆ ಆಯೋಜಿಸಿದ್ದ ಪರಿಸರ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು.

ಬರಗಾಲದ ಬವಣೆಯಿಂದ ಹೊರಬರಲು ಪರಿಸರ ಸಂರಕ್ಷಣೆಯೊಂದೆ ದಾರಿ ಎಂದರು.

ನಗರದ 7ನೇ ವಾರ್ಡ್ ಅಶ್ವಿನಿ ಬಡಾವಣೆಯಲ್ಲಿ ಸಾವಿರ ಹಾಗೂ ತಾಲ್ಲೂಕು ಕಚೇರಿ ಸುತ್ತಮುತ್ತ 50 ಗಿಡಗಳನ್ನು ನೆಡಲಾಯಿತು.

ತಹಶೀಲ್ದಾರ್ ಹನುಮಂತರಾಯಪ್ಪ, ವಲಯ ಅರಣ್ಯಾಧಿಕಾರಿಗಳಾದ ಟಿ.ಅಶ್ವತ್ಥಪ್ಪ, ಮಂಜುನಾಥ್, ಉಪವಲಯ ಅರಣ್ಯಾಧಿಕಾರಿಗಳಾದ ಜಯಚಂದ್ರ, ಜಿ.ಆರ್.ಶ್ರೀನಿವಾಸ್, ಸೋಮನಾಥ, ನಗರಸಭೆ ಪೌರಾಯುಕ್ತ ಹರೀಶ್, ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ಮಂಜುನಾಥ್, ನಗರಸಭೆ ಸದಸ್ಯರಾದ ಸಿ.ಕೆ. ಶಬ್ಬೀರ್, ಮಂಜುನಾಥ್, ಮಾಜಿ
ಸದಸ್ಯ ಅಬ್ಬುಗುಂಡು ಶ್ರೀನಿವಾಸರೆಡ್ಡಿ, ಪ್ರಕಾಶ್, ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ
ಗುಡೇ ಶ್ರೀನಿವಾಸರೆಡ್ಡಿ ಭಾಗವಹಿಸಿದ್ದರು.

ಆರ್.ಕೆ.ವಿಜನ್ ಶಾಲೆ: ನಗರದ ಹೊರವಲಯದಲ್ಲಿರುವ ಆರ್.ಕೆ.ವಿಜನ್ ಶಾಲೆಯಲ್ಲಿ ವಿಶ್ವ ಪರಿಸರ ದಿನಾಚರಣೆಯನ್ನು ‘ಜೀವವೈವಿದ್ಯವನ್ನು ಆಚರಿಸಿ’ ಎಂಬ ಧ್ಯೇಯವಾಕ್ಯದೊಂದಿಗೆ ಆಚರಿಸಲಾಯಿತು. ತಹಶೀಲ್ದಾರ್ ಹನುಮಂತರಾಯಪ್ಪ ಗಿಡ ನೆಡುವ ಮೂಲಕ ಚಾಲನೆ ನೀಡಿದರು. ಸಂಸ್ಥೆಯ ಡಾ.ಜಿ.ವಿ.ಕೆ ರೆಡ್ಡಿ, ಪ್ರಾಂಶುಪಾಲ ಕೆ.ಪಿ.ನಾಗಾರ್ಜುನರೆಡ್ಡಿ,ಉಪನ್ಯಾಸಕ ಶ್ರೀನಿವಾಸ್ ಇದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು