ಚಿಂತಾಮಣಿ: ಸೌಹಾರ್ದ ಮತ್ತು ಭಾವೈಕ್ಯತೆಯ ಮೊಹರಂ ಹಬ್ಬದ ಆಚರಣೆಯು ಆರಂಭವಾಗಿದ್ದು ನಗರದ ಹಲವೆಡೆ ಪಂಜೆಗಳನ್ನು ಸ್ಥಾಪಿಸಿ ಪೂಜಿಸಲಾಗುತ್ತಿದೆ.

ಮೊಹರಂ ಆಚರಣೆಯು ತ್ಯಾಗ ಮತ್ತು ಬಲಿದಾನದ ಪ್ರತೀಕವಾಗಿದೆ. ಗ್ರಾಮೀಣ ಪ್ರದೇಶದಲ್ಲಿ ಬಾಬಯ್ಯನ ಹಬ್ಬ ಎಂದು ಪ್ರಸಿದ್ಧಿಯಾಗಿದೆ. ಜುಲೈ 6ರ ಭಾನುವಾರ ಮೊಹರಂ ಹಬ್ಬದ ಕೊನೆಯ ದಿನವಾಗಿದೆ. ಮೊಹರಂ ತನ್ನ ಪರಂಪರೆ ಮತ್ತು ಸಾಂಸ್ಕೃತಿಕ ವೈಭವವನ್ನು ಇಂದಿಗೂ ಉಳಿಸಿಕೊಂಡು ಬಂದಿದೆ.

ಪ್ರತಿಯೊಂದು ಧರ್ಮದಲ್ಲೂ ಹೊಸ ವರ್ಷದ ಆಚರಣೆ ಇದೆ. ಹಿಂದೂ ಧರ್ಮದಲ್ಲಿ ಚಂದ್ರಮಾನ ಯುಗಾದಿ, ಕ್ರೈಸ್ತರಲ್ಲಿ ಜನವರಿ ತಿಂಗಳ ಮೊದಲನೇ ದಿನದ ರೀತಿಯೇ ಇಸ್ಲಾಂ ಧರ್ಮದಲ್ಲಿ ಮೊಹರಂ ತಿಂಗಳ ಮೊದಲ ದಿನವೇ ಹೊಸ ವರ್ಷದ ಆರಂಭದ ದಿನವಾಗಿದೆ.

ಅಮಾವಾಸ್ಯೆ ನಂತರ ಚಂದ್ರನ ದರ್ಶನವಾದ ದಿನದಿಂದಲೇ ಮೊಹರಂ ಆರಂಭವಾಗುತ್ತದೆ. ಪ್ರವಾದಿ ಹಜರತ್ ಮಹಮದ್ ಪೈಗಂಬರ್ ಮೊಮ್ಮಕ್ಕಳಾದ ಹಜರತ್ ಇಮಾಂ ಹಸನ್ ಮತ್ತು ಇಮಾಂ ಹುಸೇನ್ ಇಸ್ಲಾಂ ಧರ್ಮದ ರಕ್ಷಣೆಗಾಗಿ ಹೋರಾಡಿ ಯುದ್ದದಲ್ಲಿ ಹುತಾತ್ಮರಾದ ಕಾರಣ ಅವರ ತ್ಯಾಗ ಮತ್ತು ಬಲಿದಾನಗಳ ಬಗ್ಗೆ ಜನರಲ್ಲಿ ಜನಜಾಗೃತಿ ಮೂಡಿಸಲು ಮುಸ್ಲಿಮರು ಮೊಹರಂ ಹಬ್ಬವನ್ನು ಆಚರಿಸುತ್ತಾರೆ.

ನಗರದಲ್ಲಿ ಊರ ಮುಂದೆ, ವೆಂಕಟಗಿರಿಕೋಟೆ, ಶಾಂತಿನಗರ, ಕೀರ್ತಿನಗರ, ಸೊಣ್ಣಶೆಟ್ಟಹಳ್ಳಿ, ಟಿಪ್ಪುನಗರ, ಅಗ್ರಹಾರ, ಮೆಹಬೂಬ್ ನಗರ ಹಾಗೂ ಗ್ರಾಮೀಣ ಭಾಗಗಳಲ್ಲಿ ನಿಮ್ಮಕಾಯಲಹಳ್ಳಿ, ಮುರುಗಮಲ್ಲ, ಯನಮಲಪಾಡಿ, ಸಿದ್ದಿಮಠ ಸೇರಿದಂತೆ ಇತರ ಕಡೆಗಳಲ್ಲಿ ಪಂಜೆಗಳ ರೂಪದಲ್ಲಿ ದೇವರನ್ನು ಕೂರಿಸಿ ಪ್ರತಿನಿತ್ಯ ಪೂಜೆ ಸಲ್ಲಿಸಲಾಗುತ್ತಿದೆ. ಮುಸ್ಲಿಂ ಮತ್ತು ಹಿಂದೂ ಸಮುದಾಯದವರು ಒಟ್ಟಿಗೆ ಮೊಹರಂ ಆಚರಿಸುವುದು ವಿಶೇಷ. ಗ್ರಾಮೀಣ ಭಾಗಗಳಲ್ಲಿ ಈ ಆಚರಣೆಯಲ್ಲಿ ಹಿಂದೂಗಳೇ ಹೆಚ್ಚಾಗಿ ಭಾಗವಹಿಸುತ್ತಾರೆ. ಕೆಲವು ಕಡೆ ಹುಲಿ, ಕರಡಿ ವೇಷಧಾರಿಗಳಾಗಿ ಕುಣಿದು ಕುಪ್ಪಳಿಸುತ್ತಾರೆ.

ಮೊಹರಂ ಹಬ್ಬದ ವಿಶೇಷತೆಗಳಲ್ಲಿ ಹುಲಿವೇಷವೂ ಒಂದಾಗಿದೆ. ಹುಲಿವೇಷ ಧರಿಸಿಕೊಂಡ ಭಕ್ತರು ದೇವರ ಸೇವೆಯಲ್ಲಿ ನಿರತರಾಗುತ್ತಾರೆ. ಪಂಜೆಗಳ ಮೆರವಣಿಗೆಯಲ್ಲಿ ಹುಲಿವೇಷಧಾರಿಗಳು ಹಲಗೆಯ ಸದ್ದಿಗೆ ತಕ್ಕಂತೆ ನೃತ್ಯ ಮಾಡುತ್ತಾರೆ. ಗ್ರಾಮಗಳಲ್ಲಿ ಜನರು ನೀಡುವ ಹಣ ಮತ್ತು ಪದಾರ್ಥಗಳನ್ನು ಸಂಗ್ರಹಿಸಿಕೊಂಡು ದೇವರಿಗೆ ಅರ್ಪಿಸುತ್ತಾರೆ.

ಮೊಹರಂ ತಿಂಗಳಿನಲ್ಲಿ 1ರಿಂದ 10 ದಿನದವರೆಗೆ ಮೊಹಮ್ಮದ್ ಪೈಗಂಬರ್ ಮೊಮ್ಮಕ್ಕಳಾದ ಹಸನ್ ಮತ್ತು ಹುಸೇನ್ ನೆನಪಿನಲ್ಲಿ ಬಡವರಿಗೆ ಪ್ರತಿದಿನ ಸಂಜೆ ಊಟ, ತಿಂಡಿ, ಶರಬತ್ ವಿತರಿಸಲಾಗುತ್ತದೆ. 7ನೇ ದಿನದಿಂದ 9ನೇ ದಿನದವರೆಗೆ ಪಂಜೆಗಳ ಮೆರವಣಿಗೆ ಮಾಡುತ್ತಾರೆ. ಮೆರವಣಿಗೆ ಮನೆಗಳ ಹತ್ತಿರ ಬಂದಾಗ ‘ಪಾತೆಮಾ’ (ಪೂಜೆ ಮಾಡಿಸುವುದು) ಹೂವು, ಮಂಡಕ್ಕಿ, ಸುಗಂಧ ದ್ರವ್ಯ, ಹಣ್ಣು, ತೆಂಗಿನಕಾಯಿ ಹಾಗೂ ಸಿಹಿ ಸಮರ್ಪಿಸುತ್ತಾರೆ.

9ನೇ ದಿನ ರಾತ್ರಿ 12 ರಿಂದ 1 ಗಂಟೆಯಲ್ಲಿ ವಿವಿಧ ಬೇಡಿಕೆಗಳಿಗಾಗಿ ಹರಕೆ ಹೊತ್ತವರು ಹಾಗೂ ಪಂಜೆಗಳನ್ನು ಹೊತ್ತವರು ಅಗ್ನಿಕುಂಡದ ಮೇಲೆ ನಡೆಯುತ್ತಾರೆ. 10ನೇ ದಿನ ಪಂಜೆಗಳನ್ನು ತೊಳೆದು ಮುಂದಿನ ವರ್ಷಕ್ಕೆ ಸ್ವಸ್ಥಾನದಲ್ಲಿಟ್ಟು ಭದ್ರಪಡಿಸುತ್ತಾರೆ. ಪ್ರತಿದಿನ ರಾತ್ರಿ ಮಸೀದಿಗಳಲ್ಲಿ ಇಸ್ಲಾಂ ಧರ್ಮದ ಚರಿತ್ರೆಯ ಕುರುತು ಧರ್ಮಗುರುಗಳು ಪ್ರವಚನ ನೀಡುತ್ತಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.