ಚೇಳೂರು ಪಟ್ಟಣಕ್ಕೆ ಕೆಲಸದ ನಿಮಿತ್ತ ಪ್ರತೀ ದಿನವೂ ಇದೇ ರಸ್ತೆಯಲ್ಲಿ ಸಂಚರಿಸಬೇಕಾಗಿದೆ. ಗಿಡಗಂಟಿಗಳು ಆವರಿಸಿದ ರಸ್ತೆ ಕಾಣದೆ ಜೀವ ಭಯದಲ್ಲಿ ಓಡಾಡುವ ಸ್ಥಿತಿ ನಮ್ಮದಾಗಿದೆ. ಅಪಘಾತ ಸಂಭವಿಸುವ ಮೊದಲೇ ರಸ್ತೆಯಲ್ಲಿರುವ ಅಪಾಯಕಾರಿ ಗಿಡಮರಗಳನ್ನು ತೆರವುಗೊಳಿಸಿ ಸುಗಮ ಸಂಚಾರಕ್ಕೆ ಅನುವು ಮಾಡಿಕೊಡಬೇಕು.
ಬಾಬುರೆಡ್ಡಿ, ದ್ವಿಚಕ್ರ ವಾಹನ ಸವಾರ
ಪ್ರತಿದಿನ ಚೇಳೂರು ಮಾರ್ಗವಾಗಿ ಚಿಂತಾಮಣಿ ಪಟ್ಟಣದ ಮಾರುಕಟ್ಟೆಗೆ ಗೂಡ್ಸ್ ವಾಹನದಲ್ಲಿ ರೈತರು ಬೆಳೆದ ಬೆಳೆಗಳನ್ನು ಸಾಗಿಸುತ್ತೇವೆ. ಗಿಡಗಳಿಂದ ಕೂಡಿದ ರಸ್ತೆಗಳು ಹಗಲಿನಲ್ಲಿಯೇ ಕಾಣುವುದಿಲ್ಲ. ರಾತ್ರಿ ಸಮಯದಲ್ಲಂತೂ ನಮ್ಮ ಪಾಡು ಹೇಳ ತೀರದು.