ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಲಾಕ್‌ಡೌನ್‌: ನಗರಗಳಲ್ಲಿ ಪೊಲೀಸರ ಕಣ್ಗಾವಲು

ಇಂದಿನಿಂದ ಪರಿಷ್ಕೃತ ಮಾರ್ಗಸೂಚಿ ಜಾರಿ
Last Updated 9 ಮೇ 2021, 15:07 IST
ಅಕ್ಷರ ಗಾತ್ರ

ಚಿಕ್ಕಬಳ್ಳಾಪುರ: ಕೋವಿಡ್ ಹೆಚ್ಚಳದ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ಕೈಗೊಂಡಿರುವ ಕಠಿಣ ಕ್ರಮಗಳು ಸೋಮವಾರದಿಂದ ಜಾರಿಯಾಗಲಿವೆ. ಈ ಹಿನ್ನೆಲೆಯಲ್ಲಿ ಪೊಲೀಸರು ನಗರ ಸೇರಿದಂತೆ ಜಿಲ್ಲೆಯ ತಾಲ್ಲೂಕು ಕೇಂದ್ರಗಳ ಪ್ರಮುಖ ರಸ್ತೆಗಳಲ್ಲಿ ಭಾನುವಾರವೇ ಬ್ಯಾರಿಕೇಡ್‌ಗಳನ್ನು ಅಳವಡಿಸಿದರು.

ನಗರದ ಬಿಬಿ ರಸ್ತೆ, ಶಿಡ್ಲಘಟ್ಟ ವೃತ್ತ, ಎಂ.ಜಿ.ರಸ್ತೆ ಸೇರಿದಂತೆ ವಿವಿಧ ವೃತ್ತ, ರಸ್ತೆಗಳಲ್ಲಿ ಬ್ಯಾರಿಕೇಡ್‌ಗಳನ್ನು ಅಳವಡಿಸಿದರು. ಸೋಮವಾರದಿಂದ ಕಠಿಣ ನಿರ್ಬಂಧಗಳು ಜಾರಿಯಾಗುವ ಕಾರಣ ಭಾನುವಾರ ಬಜಾರ್ ರಸ್ತೆ, ಮಾರುಕಟ್ಟೆ ಸೇರಿದಂತೆ ವ್ಯಾಪಾರಿ ಸ್ಥಳಗಳಲ್ಲಿ ಜನಜಂಗುಳಿ ಹೆಚ್ಚಿತ್ತು.

ಬೆಳಿಗ್ಗೆಯಿಂದಲೇ ಖರೀದಿಯ ಧಾವಂತ ಹೆಚ್ಚಿತ್ತು. ದಿನಸಿ ಅಂಗಡಿಗಳ ಮುಂದೆ ಜನರು ಸಾಲುಗಟ್ಟಿದ್ದರು. ಹೆಚ್ಚಿನ ತರಕಾರಿ, ದಿನಸಿ ಸಾಮಗ್ರಿಗಳನ್ನು ಖರೀದಿಸಿ ಬೈಕ್, ಕಾರುಗಳಲ್ಲಿ ಕೊಂಡೊಯ್ಯುತ್ತಿದ್ದರು. ಗ್ರಾಹಕರಿಗೆ ಸರಕುಗಳನ್ನು ನೀಡಲು ಅಂಗಡಿಗಳಲ್ಲಿ ಇಬ್ಬರು ಮೂವರು ಇರುವುದು ಸಾಮಾನ್ಯ. ಆದರೆ ಭಾನುವಾರ ಪ್ರತಿ ಅಂಗಡಿಗಳಲ್ಲಿ ಐದಾರು ಮಂದಿ ಗ್ರಾಹಕರಿಗೆ ಆಹಾರ ಸಾಮಗ್ರಿಗಳನ್ನು ನೀಡುತ್ತಿದ್ದರು.

‘ಸೋಮವಾರದಿಂದ ಯಾರೂ ವಾಹನಗಳಲ್ಲಿ ಓಡಾಡುವಂತಿಲ್ಲ. ಖರೀದಿಗೆ ಮಾರುಕಟ್ಟೆಗೆ ಬರುವವರೂ ಬೈಕ್‌ಗಳಲ್ಲಿ ಬರಬಾರದು. ನಡೆದುಕೊಂಡು ಬರಬೇಕು’ ಎಂದು ಮೈಕ್‌ನಲ್ಲಿ ಪೊಲೀಸರು ಪ್ರಕಟಿಸುತ್ತಿದ್ದರು. ಭಾನುವಾರವೇ ಮಾರುಕಟ್ಟೆಯ ಒಳಗೆ ದ್ವಿಚಕ್ರವಾಹನಗಳನ್ನು ಕೊಂಡೊಯ್ಯುವುದಕ್ಕೆ ತಡೆವೊಡ್ಡಲಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT